Ad Widget .

ಡಬಲ್ ಆಯ್ತು ಮುಖ್ಯಮಂತ್ರಿ, ಸಚಿವರು, ಶಾಸಕರ ಸಂಬಳ|ಕಾಂಗ್ರೆಸ್ ಧರಣಿ ಮಧ್ಯೆಯೇ ಬಿಲ್ ಪಾಸ್ |ಇಲ್ಲಿದೆ ಸಂಬಳದ ಮಾಹಿತಿ

ಸಮಗ್ರ ನ್ಯೂಸ್ ಡೆಸ್ಕ್: ವಿಧಾನಸಭೆ ಸರಿಯಾಗಿ ನಡೆಯಲಿಲ್ಲ. 5 ದಿನ ಕಲಾಪ ವ್ಯರ್ಥ ಆಯಿತು. ಆದರೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ ಮಾತ್ರ ಹೆಚ್ಚಾಗಬೇಕು. ಇವತ್ತು ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ, ಭತ್ಯೆ ಹೆಚ್ಚಳ ಮಾಡಿಕೊಂಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವಿಧಾನಸಭೆಯಲ್ಲಿ ಕಾಂಗ್ರೆಸ್ ಧರಣಿ ಮಧ್ಯೆಯೇ ಎರಡು ವಿಧೇಯಕಗಳು ಮಂಡನೆಯಾಗಿ ಅಂಗೀಕಾರವೂ ಆಯಿತು. ವಿಧೇಯಕ ಅಂಗೀಕಾರವಾಗಿದ್ದರಿಂದ ಮುಖ್ಯಮಂತ್ರಿ, ಮಂತ್ರಿಗಳು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರ ಸಂಬಳ ಹೆಚ್ಚಳ ಆಗಿದೆ. ಬರೋಬ್ಬರಿ ಶೇಕಡಾ 50%ರಷ್ಟು ಸಂಬಳ, ಭತ್ಯೆ ಹೆಚ್ಚಳ ಆಗಿದೆ.

Ad Widget . Ad Widget . Ad Widget .

ವೇತನ ಹೆಚ್ಚಳದ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಸಚಿವ ಮಾಧುಸ್ವಾಮಿ ಬಿಲ್ ಬಗ್ಗೆ ಸಮರ್ಥನೆ ಮಾಡಿಕೊಂಡರು. ಕೋವಿಡ್ ಸಂದರ್ಭದಲ್ಲಿ ಬಹಳ ಕಷ್ಟ ಆಗಿದೆ. ಡಿಸೇಲ್, ಪೆಟ್ರೋಲ್ ಕೂಡ ಜಾಸ್ತಿ ಆಗಿದೆ. ಮನೆ ಬಾಡಿಗೆ ಕೂಡ ಜಾಸ್ತಿ ಆಗಿದೆ. ಹಾಗಾಗಿ ಮುಖ್ಯಮಂತ್ರಿ, ಸಚಿವರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಶಾಸಕರ ಸಂಬಳ ಹೆಚ್ಚಳ ಮಾಡಲು ಬಿಲ್ ತಂದಿದ್ದೇವೆ. 50%ರಷ್ಟು ಹೆಚ್ಚಳಕ್ಕೆ ಬಿಲ್ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಕಾರಣಕ್ಕಾಗಿ ಹಲವು ಇಲಾಖೆಗಳಲ್ಲಿ ಹಣ ಕಡಿತ ಮಾಡಿದ್ದ ಸರ್ಕಾರ, ಕೆಲ ಯೋಜನೆಗಳ ಅನುದಾನವನ್ನೂ ಕೂಡ ಕಡಿತಗೊಳಿಸಿತ್ತು. ದುಂದು ವೆಚ್ಚ ಮಾಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಘೋಷಣೆ ಮಾಡಿದ್ದರು. ಆದರೆ ಈಗ ಸಚಿವರು, ಮುಖ್ಯಮಂತ್ರಿಗಳ ಸಂಬಳ ಹೆಚ್ಚಳಕ್ಕೆ ಬಿಲ್ ತಂದು ಅಂಗೀಕಾರ ಪಡೆದುಕೊಂಡ ಸರ್ಕಾರದ ನಡೆ ಬಗ್ಗೆ ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗಿದೆ.

  • ಮುಖ್ಯಮಂತ್ರಿ, ಸಚಿವರಿಗೆ ಸಂಬಳ ಹೆಚ್ಚಾಗಿದ್ದೆಷ್ಟು..?

ಮುಖ್ಯಮಂತ್ರಿ, ಮಂತ್ರಿಗಳ ಸಂಬಳ ಶೇಕಡಾ 50%ರಷ್ಟು ಹೆಚ್ಚಳ

ಸಿಎಂಗೆ ಪ್ರತಿ ತಿಂಗಳು ಇದ್ದ 50ಸಾವಿರ ಸಂಬಳ 75 ಸಾವಿರಕ್ಕೆ ಹೆಚ್ಚಳ

ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳಿಗೆ 40ಸಾವಿರ ಇದ್ದ ಸಂಬಳ 60 ಸಾವಿರ ರೂ.ಗಳಿಗೆ ಹೆಚ್ಚಳ

ಕ್ಯಾಬಿನೆಟ್ ದರ್ಜೆ ಪ್ರತಿ ವರ್ಷಕ್ಕೆ ಅತಿಥ್ಯ ಭತ್ಯೆ 3ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ ಹೆಚ್ಚಳ

ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ಬಾಡಿಗೆ 80 ಸಾವಿರದಿಂದ 1ಲಕ್ಷದ 20 ಸಾವಿರ ರೂಪಾಯಿಗೆ ಹೆಚ್ಚಳ

ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ನಿರ್ವಹಣೆ ವೆಚ್ಚ 20 ಸಾವಿರದಿಂದ 30ಸಾವಿರಕ್ಕೆ ಹೆಚ್ಚಳ

ಕ್ಯಾಬಿನೆಟ್ ದರ್ಜೆ ಮಂತ್ರಿಗಳ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ ಒಂದು ಸಾವಿರ ಪೆಟ್ರೋಲ್ ಲೀಟರ್ ನಿಂದ 2ಸಾವಿರ ಲೀಟರ್ ಪೆಟ್ರೋಲ್ ಗೆ ಹೆಚ್ಚಳ.

  • ಸಭಾಧ್ಯಕ್ಷರು/ ಸಭಾಪತಿ ವೇತನ, ಭತ್ಯೆ:

ಸಂಬಳ: 50,000ರೂ. ದಿಂದ 75,000ರೂ.

ಆತಿಥ್ಯ ವೇತನ ವಾರ್ಷಿಕ: 3,00,000ರೂ. ದಿಂದ 4,00,000 ರೂ.

ಮನೆ ಬಾಡಿಗೆ: 80,000 ರೂ. ದಿಂದ 1,60,000ರೂ.

ಇಂಧನ: 1000 ಲೀಟರ್‍ರಿಂದ 2000 ಲೀಟರ್

ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ. ದಿಂದ 40ರೂ.

ದಿನ ಭತ್ಯೆ(ಪ್ರಯಾಣ): ದಿನಕ್ಕೆ2000ರೂ. ದಿಂದ 3000ರೂ.

ಹೊರ ರಾಜ್ಯ ಪ್ರವಾಸ: ದಿನಕ್ಕೆ 2500ರೂ. +5000ರೂ. ದಿಂದ 3000ರೂ.+7000ರೂ.

  • ವಿಪಕ್ಷ ನಾಯಕರ ವೇತನ, ಭತ್ಯೆ:

ಸಂಬಳ:40,000ರೂ. ದಿಂದ ? 60,000ರೂ.

ವಿಪಕ್ಷ ನಾಯಕರ ಆತಿಥ್ಯ ವೇತನ ವಾರ್ಷಿಕ: 2,00,000ರೂ. ದಿಂದ 2,50,000ರೂ.

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ.

ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 3000ರೂ.

ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ.

  • ಶಾಸಕರ ವೇತನ, ಭತ್ಯೆ:

ಸಂಬಳ: 20,000ರೂ. ದಿಂದ 40,000ರೂ.

ಕ್ಷೇತ್ರ ಭತ್ಯೆ: 40,000ರೂ. ರಿಂದ 60000ರೂ.

ಆತಿಥ್ಯ ವೇತನ (ವಾರ್ಷಿಕ): 2,00,000ರೂ. ದಿಂದ 2,50,000ರೂ.

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 25ರೂ. ದಿಂದ 30ರೂ.

ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 2500ರೂ.

ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ.

ದೂರವಾಣಿ ವೆಚ್ಚ: ಯಥಾಸ್ಥಿತಿ ತಿಂಗಳಿಗೆ 20,000ರೂ. ಕಾಯ್ದಿರಿಸಲಾಗಿದೆ

ಶಾಸಕರ ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000ರೂ. ರಿಂದ 20,000ರೂ. ಹೆಚ್ಚಳ.

Leave a Comment

Your email address will not be published. Required fields are marked *