Ad Widget .

‘ಪುಷ್ಪ’ ಮಡಿಲಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Ad Widget . Ad Widget .

ಸಮಗ್ರ ನ್ಯೂಸ್: ಚಿತ್ರರಂಗ ಪ್ರತಿಷ್ಠಿತ ದಾದಾಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ ಪ್ರಕಟವಾಗಿದೆ. ಭಾರಿ ಪ್ರಚಾರ ಗಿಟ್ಟಿಸಿದ್ದ, ಬಾಕ್ಸ್​ ಆಫೀಸ್​ನಲ್ಲಿ 350 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಗಳಿಸಿ ಧೂಳೆಬ್ಬಿಸಿದ್ದ ನಟ ಅಲ್ಲು ಅರ್ಜುನ್​ ಅಭಿನಯದ ತೆಲುಗು ಚಿತ್ರ ‘ಪುಷ್ಪ’ ಸಿನಿಮಾ ವರ್ಷದ ಸಿನಿಮಾ ನಿರೀಕ್ಷೆಯಂತೆಯೇ ‘ವರ್ಷದ ಚಿತ್ರ’ ಎಂಬ ಬಿರುದು ಪಡೆದಿದೆ.

Ad Widget . Ad Widget .

ಶೇರ್​ಷಾ(ಉತ್ತಮ ಸಿನಿಮಾ), ರಣವೀರ್ ಸಿಂಗ್​(ಉತ್ತಮ ನಾಯಕ), ಕೃತಿ ಸನೋನ್​ ಉತ್ತಮ ನಾಯಕಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ವಿಕ್ಕಿ ಕೌಶಲ್​ ಅಭಿನಯದ ‘ಸರ್ದಾರ್​ ಉದ್ಧಮ್​’ ಸೇರಿದಂತೆ ಹಲವು ಸಿನಿಮಾಗಳು, ಹಲವಾರು ವೆಬ್​ ಸಿರೀಸ್​ ಮತ್ತು ಧಾರಾವಾಹಿಗಳೂ ಈ ಪ್ರಶಸ್ತಿಗೆ ಭಾಜನವಾಗಿವೆ. ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಬಾಲಿವುಡ್‌ನ ಹಿರಿಯ ನಟಿ ಆಶಾ ಪರೇಖ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ​

ರಣವೀರ್​ ಸಿಂಗ್​ ನಟಿಸಿದ್ದ ’83’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಅಂದುಕೊಂಡ ಮಟ್ಟಕ್ಕೆ ಈ ಚಿತ್ರ ಗಳಿಕೆ ಮಾಡಲಿಲ್ಲ. ಆದರೆ ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ಮಾಡಿರುವ ಅಭಿನಯಕ್ಕೆ ಮನ್ನಣೆ ಸಿಕ್ಕಿದ್ದು, ಅವರು ಉತ್ತಮ ನಾಯಕನಾಗಿ ಹೊರಹೊಮ್ಮಿದ್ದಾರೆ. 1983ರಲ್ಲಿ ಕ್ರಿಕೆಟ್​ ವಿಶ್ವಕಪ್​ ಗೆದ್ದ ಭಾರತ ತಂಡವನ್ನು ಆಧರಿಸಿದ ಕಬೀರ್​ ಖಾನ್​ ನಿರ್ದೇಶನದಲ್ಲಿ ಈ ಚಿತ್ರ ತಯಾರು ಮಾಡಲಾಗಿದೆ.

Leave a Comment

Your email address will not be published. Required fields are marked *