Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್ ಡೆಸ್ಕ್: ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ, ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂದು ತಿಳಿಯಲು ‌ಮುಂದೆ ಓದಿ…

Ad Widget . Ad Widget .

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1): ಅಧಿಕಾರ ಅಥವಾ ಉದ್ಯೋಗದಲ್ಲಿ ತ್ವರಿತ ಬದಲಾವಣೆ. ವಿದೇಶದಲ್ಲಿ ಇರುವ ಬಂಧುಗಳು ನಿಮ್ಮ ಸಹಾಯಕ್ಕೆ ಬರುವ ಸಾಧ್ಯತೆ. ತಾಮ್ರದ ಮೂರ್ತಿಗಳನ್ನು ಅಥವಾ ಪೂಜಾ ಪರಿಕರ ವಸ್ತುಗಳನ್ನು ತಯಾರು ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಅಗ್ನಿಯೊಡನೆ ದಿನವಿಡೀ ಕೆಲಸ ಮಾಡುವವರು ಎಚ್ಚರ ವಹಿಸಿರಿ. ರೇಷ್ಮೆ ನೂಲು ತೆಗೆಯುವವರ ಬೇಡಿಕೆಗಳು ಈಡೇರುತ್ತವೆ. ಸಹಕಾರ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಪ್ರಾಧಾನ್ಯತೆ ದೊರೆಯುತ್ತದೆ. ಮಾತೃ ವರ್ಗದವರಿಂದ ಆಸ್ತಿ ಸಿಗುವ ಸಾಧ್ಯತೆ ಇದೆ. ಮಹಿಳೆಯರಿಗೆ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಯೋಗವಿದೆ. ಮಕ್ಕಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಆರ್ಥಿಕ ಸ್ಥಿತಿಯು ನಿಮ್ಮ ಅವಶ್ಯಕತೆಯನ್ನು ಪೂರೈಸುವಷ್ಟು ಇರುತ್ತದೆ.

Ad Widget . Ad Widget .

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2): ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಅಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಂದರ್ಭವಿದೆ. ಕುಟುಂಬದ ಜಟಿಲ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸುವಿರಿ. ಬ್ಯಾಂಕಿಂಗ್ ಅಥವಾ ಹಣಕಾಸು ಸಂಸ್ಥೆಗಳಿಗೆ ಆದಾಯ ಹೆಚ್ಚುತ್ತದೆ. ಕೃಷಿಕರಿಗೆ ಹೆಚ್ಚಿನ ಧನಾದಾಯ ಇರುತ್ತದೆ. ವಾಹನ ಮಾರಾಟಗಾರರಿಗೆ ಉತ್ತಮ ವಹಿವಾಟು ನಡೆಯುತ್ತದೆ. ಯಾವುದೇ ರೀತಿಯ ರಕ್ಷಣಾ ಕಾರ್ಯಗಳ ಕಾರ್ಯದಲ್ಲಿ ತೊಡಗಿಕೊಂಡಿರುವವರಿಗೆ ಸಾಕಷ್ಟು ಗೌರವಾದರ ಬರುತ್ತದೆ. ವೃತ್ತಿಯಲ್ಲಿ ಸಹಕಾರ ಮತ್ತು ಅನುಕೂಲತೆ ಹೆಚ್ಚುತ್ತದೆ. ನಿಮ್ಮ ವ್ಯವಹಾರ ಕ್ಷೇತ್ರಗಳನ್ನು ಈಗ ವಿಸ್ತರಿಸಬಹುದು. ಒಡವೆ ಮಾರಾಟಗಾರರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3): ಗುತ್ತಿಗೆ ವ್ಯವಹಾರ ಮಾಡುತ್ತಿರುವವರಿಗೆ ಅಭಿವೃದ್ಧಿ ಇದೆ. ಕೆಲವರಿಗೆ ಸರ್ಕಾರಿ ಗುತ್ತಿಗೆಗಳು ಸಹ ಸಿಗುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಸಾಕಷ್ಟು ಏಳಿಗೆ ಇರುತ್ತದೆ. ಬರವಣಿಗೆಯಲ್ಲಿ ನಿರತರಾದವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಪೂರ್ವಿಕರ ಆಸ್ತಿಯಿಂದ ಧವಸ ಧಾನ್ಯಗಳು ದೊರೆಯಬಹುದು. ವಿವಾಹ ಮಾತುಕತೆಗಳಿಗೆ ಚಾಲನೆ ದೊರೆಯುತ್ತದೆ. ಹಿರಿಯರ ಮಾತುಗಳನ್ನು ಗೌರವಿಸಿದ್ದರಿಂದ ನಿಮಗೆ ಅನುಕೂಲವಾಗುತ್ತದೆ. ಆದಾಯದಷ್ಟೇ ಖರ್ಚು ಇರುತ್ತದೆ. ಧರ್ಮಕಾರ್ಯಗಳಿಗೆ ಹೆಚ್ಚಿನ ಹಣ ಖರ್ಚು ಮಾಡುವಿರಿ. ಸಂಗಾತಿಯ ಆಸೆಗಾಗಿ ಒಡವೆ ವಸ್ತ್ರ ಕೊಳ್ಳುವಿರಿ. ತಂದೆಯಿಂದ ನಿಮಗೆ ಹೆಚ್ಚಿನ ಗೌರವ ಬರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ) ಉದ್ಯಮವನ್ನು ವಿಸ್ತರಿಸುವ ಆಸೆಯು ಈಗ ಸಾಕಾರಗೊಳ್ಳಬಹುದು. ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಸರಿಯಾಗಿ ಮಾಡಿಕೊಳ್ಳಿ. ಆರ್ಥಿಕ ಆದಾಯ ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಮಹಿಳೆಯರು ತೊಡಗಿಸಿಕೊಳ್ಳುವ ಸಾಮಾಜಿಕ ಕ್ಷೇತ್ರದ ಕೆಲಸಗಳಲ್ಲಿ ಬಹಳ ಒಳ್ಳೆಯ ಹೆಸರನ್ನು ಗಳಿಸುವರು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅವರ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತವೆ. ಗಣಿಗಾರಿಕೆ ಮಾಡುವವರ ವ್ಯವಹಾರ ಚೆನ್ನಾಗಿ ನಡೆಯುತ್ತದೆ. ಸರ್ಕಾರದ ಕಡೆಯಿಂದ ಕೆಲವೊಂದು ಕಾನೂನು ತೊಡಕುಗಳು ಬರಬಹುದು. ಕೃಷಿ ವಿಸ್ತರಣೆಗಾಗಿ ಹೆಚ್ಚಿನ ಹಣ ಕೊಡುವಿರಿ. ವಿದೇಶಕ್ಕೆ ರಫ್ತು ಮಾಡುವ ಸಾಂಪ್ರದಾಯಿಕ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತದೆ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1): ಮಕ್ಕಳ ವಿಚಾರದಲ್ಲಿ ಶುಭ ವಾರ್ತೆಗಳನ್ನು ಕೇಳಬಹುದು. ಸರ್ಕಾರದಿಂದ ಬರಬೇಕಾಗಿದ್ದ ಬಾಕಿ ಹಣ ಅಥವಾ ಸಹಾಯಧನ ಬರುತ್ತದೆ. ನಿಮ್ಮ ನಡವಳಿಕೆಯಿಂದ ಮಕ್ಕಳ ಮೇಲೆ ಪ್ರಭಾವವನ್ನು ಹೆಚ್ಚಿಸಿಕೊಳ್ಳುವಿರಿ. ಚರ್ಮವ್ಯಾಧಿಗಳು ಸ್ವಲ್ಪ ನಿಮ್ಮನ್ನು ಬಾಧಿಸಬಹುದು. ಹಾಡುಗಾರರಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ಅನಿರೀಕ್ಷಿತ ಧನ ಒದಗಿಬರಬಹುದು. ವಿದೇಶಿ ಕಂಪನಿಗಳಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಬರುವ ಆದಾಯವನ್ನು ನೋಡಿಕೊಂಡು ಹೊಸ ಬಂಡವಾಳವನ್ನು ತೊಡಗಿಸಿರಿ. ಹೈನುಗಾರಿಕೆಯನ್ನು ನಡೆಸುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2): ಕೃಷಿಕರು ಬೆಳೆದ ಫಸಲಿಗೆ ಉತ್ತಮ ಬೆಲೆ ದೊರೆಯುತ್ತದೆ. ಹೀಗಾಗಿ ಕೃಷಿ ಕೆಲಸಗಳಲ್ಲಿ ಹೆಚ್ಚಿನ ಉತ್ಸಾಹ ಮೂಡುತ್ತದೆ. ಸಂತಾನ ಆಕಾಂಕ್ಷಿಗಳಿಗೆ ಶುಭ ಸಮಾಚಾರ ದೊರೆಯುವ ಸಾಧ್ಯತೆ ಇದೆ. ಹಮ್ಮಿನ ಮಾತಿನಿಂದ ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯನ್ನು ಮಾಡಿಕೊಳ್ಳುವಿರಿ. ಆರ್ಥಿಕತೆಯಲ್ಲಿ ಚೇತರಿಕೆಯನ್ನು ಕಾಣಬಹುದು. ನಿಮ್ಮ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಹಿತಕರ ವಾತಾವರಣವನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಹೆಚ್ಚಿನ ಹುಮ್ಮಸ್ಸು ಮೂಡುತ್ತದೆ. ತೈಲೋತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರ ಲಾಭದಾಯಕವಾಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯ. ಹಿರಿಯರಿಗೆ ವಿದೇಶದಲ್ಲಿರುವ ಮಕ್ಕಳಿಂದ ಧನ ಸಹಾಯ ಆಗುತ್ತದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3): ಮನೆ ಅಥವಾ ನಿವೇಶನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯವಿರುತ್ತದೆ. ಪ್ರಭಾವಿ ವ್ಯಕ್ತಿಗಳ ಒಡನಾಟದಿಂದ ಮುಜುಗರ ಉಂಟಾಗಬಹುದು. ಅಪರೂಪದ ವಸ್ತುಗಳನ್ನು ಸಂಗ್ರಹ ಮಾಡುವ ಆಸಕ್ತಿ ಹೆಚ್ಚುತ್ತದೆ. ಕೋರ್ಟ್‌ ಕಚೇರಿ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಜ್ಞಾನಾರ್ಜನೆಗಾಗಿ ದೂರದೂರಿಗೆ ಹೋಗಬೇಕಾದ ಸಂದರ್ಭ ಬರುತ್ತದೆ. ಬಗೆಹರಿಯಿತು ಎಂದುಕೊಂಡಿದ್ದ ಆಸ್ತಿಯ ವಿವಾದ ಪುನಃ ಆರಂಭವಾಗಬಹುದು. ಯಾವುದೇ ಹರಿತವಾದ ಆಯುಧವನ್ನು ಬಳಸುವಾಗ ಸಾಕಷ್ಟು ಎಚ್ಚರ ಇರಲಿ. ಅಧ್ಯಯನ ಆಕಾಂಕ್ಷಿಗಳಿಗೆ ಉತ್ತಮ ಮುನ್ನಡೆ ಇರುತ್ತದೆ. ಸಂಗಾತಿಯ ಸಲಹೆಯಿಂದ ನಿಮ್ಮ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ): ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿರುವವರಿಗೆ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ವಿದೇಶಿ ಉತ್ಪನ್ನಗಳನ್ನು ತರಿಸಿ ಮಾರುವವರಿಗೆ ಉತ್ತಮ ಲಾಭವಿರುತ್ತದೆ. ಆರ್ಥಿಕ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಕಸೂತಿ ವಸ್ತ್ರಗಳನ್ನು ತಯಾರಿಸುವವರ ವ್ಯವಹಾರ ಹೆಚ್ಚು ವಿಸ್ತರಣೆ ಸಾಧ್ಯತೆ. ಕುಟುಂಬ ಸಮೇತ ಭೋಜನಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಬಂಧುಗಳೊಡನೆ ಕಲಹ ನಿಂತು ಸ್ನೇಹ ಮೂಡುತ್ತದೆ. ನಿಮ್ಮ ಧನಾದಾಯವು ನಿರೀಕ್ಷೆಯಷ್ಟು ಇರುತ್ತದೆ. ಸ್ಥಿರಾಸ್ತಿ ಸಂಬಂಧವಾಗಿ ಉತ್ತಮ ಬೆಳವಣಿಗೆಗಳು ಆಗುತ್ತವೆ. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಉತ್ತಮ ಪ್ರಾಮುಖ್ಯತೆ ದೊರೆಯುತ್ತದೆ. ಅವರ ಮಾತುಗಳಿಗೆ ಬೆಲೆ ಬರುತ್ತದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 ): ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಈಗ ಸ್ವಲ್ಪ ಕಾರ್ಯಕ್ರಮಗಳು ಒದಗಿಬರುತ್ತವೆ. ವಿದ್ಯಾರ್ಥಿಗಳಿಗೆ ಬೇಕಾದ ಒಳ್ಳೆಯ ಅನುಕೂಲತೆಗಳು ಸಿಗುತ್ತವೆ. ವ್ಯವಹಾರದಲ್ಲಿ ಪ್ರಗತಿಯನ್ನು ನಿರೀಕ್ಷಿಸಬಹುದು. ರಾಸಾಯನಿಕ ವಸ್ತುಗಳನ್ನು ವ್ಯಾಪಾರ ಮಾಡುವವರು ಹೆಚ್ಚಿನ ಲಾಭವನ್ನು ನಿರೀಕ್ಷೆ ಮಾಡಬಹುದು. ಹೊಸದಾಗಿ ಕೃಷಿಯನ್ನು ಆರಂಭ ಮಾಡುತ್ತಿರುವವರಿಗೆ ಉತ್ತಮ ಸಲಹೆ ಸೂಚನೆಗಳು ದೊರೆಯುತ್ತವೆ. ಗೃಹ ನಿರ್ಮಾಣ ಮಾಡುತ್ತಿರುವವರಿಗೆ ಕೆಲಸ ಕಾರ್ಯಗಳು ಶೀಘ್ರವಾಗಿ ನಡೆಯುತ್ತವೆ. ಕಲಾವಿದರುಗಳಿಗೆ ಶೀಘ್ರವಾಗಿ ಸ್ಥಾನಮಾನ ದೊರೆಯುವ ಸಂದರ್ಭವಿದೆ. ಆಭರಣಗಳ ಕುಸರಿ ಕೆಲಸವನ್ನು ಮಾಡುವವರಿಗೆ ಆದಾಯ ಹೆಚ್ಚಾಗುತ್ತದೆ. ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2): ಸಣ್ಣ ಕೈಗಾರಿಕೆಗಳ ಉದ್ಯಮಿಗಳಿಗೆ ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನ ಬರುತ್ತದೆ. ಉದ್ದಿಮೆಯ ಬಗ್ಗೆ ಸಾಕಷ್ಟು ಆಳವಾದ ಚಿಂತನೆ ನಡೆಸಿ ಮುಂದಡಿಯಿಡುವಿರಿ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕಿಂತ ಹೆಚ್ಚಿರುತ್ತದೆ. ಒಡ ಹುಟ್ಟಿದವರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಎಲ್ಲರೂ ಒಟ್ಟುಗೂಡಿ ಆಸ್ತಿ ಒಂದನ್ನು ಖರೀದಿ ಮಾಡುವಿರಿ. ಕ್ರೀಡಾಪಟುಗಳಿಗೆ ಸಾಧನೆ ಮಾಡುವ ಅವಕಾಶ ಒದಗಿಬರುತ್ತದೆ. ಉದ್ಯೋಗದಲ್ಲಿ ಮಹತ್ತರವಾದ ಬದಲಾವಣೆಯ ಬಗ್ಗೆ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸುವರು. ಆಲಂಕಾರಿಕ ವಸ್ತುಗಳಿಗಾಗಿ ಹಣ ವ್ಯಯಮಾಡುವಿರಿ. ಸಂಗಾತಿಯ ತಂದೆಯಿಂದ ಸಂಗಾತಿಗೆ ಧನ ಸಹಾಯ ಆಗುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3): ಧನಾದಾಯ ಉತ್ತಮವಾಗಿರುತ್ತದೆ. ಸ್ವಯಂ ಉದ್ಯೋಗ ಮಾಡುವವರಿಗೆ ಸಂಪಾದನೆ ಹೆಚ್ಚುತ್ತದೆ. ಹೊಸ ನಿವೇಶನ ಅಥವಾ ಮನೆ ಕೊಳ್ಳುವ ಯೋಗವಿದೆ. ಹಿರಿಯರು ಸನ್ಮಾರ್ಗದಲ್ಲಿ ನಡೆಯುವುದರಿಂದ ಸಂಸಾರ ಮತ್ತು ಸಮಾಜದಲ್ಲಿ ಗೌರವವಿರುತ್ತದೆ. ಸ್ವಲ್ಪ ಮಟ್ಟಿನ ಆರ್ಥಿಕ ಸ್ಥಿರತೆಯನ್ನು ಈಗ ಕಾಣಬಹುದು. ಬಂಧುಗಳ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಮಧ್ಯಸ್ಥಿಕೆಯನ್ನು ವಹಿಸಬೇಕಾದೀತು. ಹಿರಿಯರು ಅಧ್ಯಾತ್ಮದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವರು. ಕ್ರೀಡಾಪಟುಗಳಿಗೆ ಯಶಸ್ಸಿನ ಕಿರೀಟ ದೊರೆಯುವ ಸಾಧ್ಯತೆ ಇದೆ. ಮಹಿಳೆಯರ ಸಿದ್ಧಪಡಿಸಿದ ವಸ್ತ್ರಗಳನ್ನು ಮಾರುವವರಿಗೆ ಲಾಭ ಹೆಚ್ಚುತ್ತದೆ. ಸಾವಯವ ಕೃಷಿಕರು ಬೆಳೆದ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ): ಉದ್ಯೋಗದಲ್ಲಿರುವವರಿಗೆ ವರ್ಗಾವಣೆಯ ಸಾಧ್ಯತೆ ದಟ್ಟವಾಗಿದೆ. ಆರ್ಥಿಕ ಸಂಪನ್ಮೂಲ ಸಾಮಾನ್ಯವಾಗಿರುತ್ತದೆ. ಔದ್ಯೋಗಿಕ ವಿಷಯಗಳಲ್ಲಿ ಬೆಳವಣಿಗೆಯನ್ನು ಕಾಣಬಹುದು. ವೈದ್ಯಕೀಯ ವೃತ್ತಿಯಲ್ಲಿರುವವರು ಉತ್ತಮ ಧನ ಆದಾಯ ನಿರೀಕ್ಷಿಸಬಹುದು. ಔಷಧಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ಅನಿರೀಕ್ಷಿತವಾಗಿ ಪ್ರೀತಿ ಪ್ರೇಮಗಳಲ್ಲಿ ಬೀಳುವ ಸಾಧ್ಯತೆ ಇದೆ. ಕೆಲವು ಕ್ಲಿಷ್ಟ ಸಮಸ್ಯೆಗಳನ್ನು ಕುಳಿತು ಬಗೆಹರಿಸಿಕೊಳ್ಳುವಿರಿ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಇರುತ್ತದೆ. ಮಕ್ಕಳ ಸೌಕರ್ಯಕ್ಕಾಗಿ ಹೆಚ್ಚಿನ ಹಣ ಕೊಡಿಡುವಿರಿ. ಸಮೂಹದಲ್ಲಿ ಮಾತನಾಡುವಾಗ ಮಾತಿನ ಬಗ್ಗೆ ಬಹಳ ಎಚ್ಚರ ಇರಲಿ.

Leave a Comment

Your email address will not be published. Required fields are marked *