Ad Widget .

ಮಂಗಳೂರಿನ ಇಬ್ಬರು ಮುಸ್ಲಿಂಮರಿಗೆ ಗಲ್ಲು ಶಿಕ್ಷೆ

Ad Widget . Ad Widget .

ಮಂಗಳೂರು: ಗುಜರಾತಿನ ಅಹಮದಾಬಾದ್‌ನಲ್ಲಿನ 14ವರ್ಷಗಳ ಹಿಂದಿನ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಇತ್ತೀಚೆಗೆ ಕೋರ್ಟ್ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ವೇಳೆ ಶಿಕ್ಷೆಗೆ ಗುರಿಯಾದವರಲ್ಲಿ ಇಬ್ಬರು ಮಂಗಳೂರಿನವರು ಸೇರಿದ್ದಾರೆ.

Ad Widget . Ad Widget .

56 ಮಂದಿಯನ್ನು ಬಲಿ ಪಡೆದ ಕೇಸ್ ಗೆ ಸಂಬಂಧಿಸಿ 38 ಮಂದಿಗೆ ಇತ್ತೀಚೆಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. 38 ಮಂದಿಯ ಪೈಕಿ ಇಬ್ಬರು ಕನ್ನಡಿಗರು ಮಂಗಳೂರಿನ ಮೊಹಮದ್‌ ನೌಷಾದ್‌ ಹಾಗೂ ಅಹಮದ್‌ ಬಾವಾ ಸೇರಿದ್ದಾರೆ..

ಈ ಇಬ್ಬರೂ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಎಂಜಿನಿಯರಿಂಗ್‌ ವಿದ್ಯಾರ್ಥಿ ನೌಷಾದ್‌ ಮಂಗಳೂರಿನ ಪಾಂಡೇಶ್ವರದ ಸುಭಾಷ್‌ನಗರದಲ್ಲಿ ವಾಸಿಸುತ್ತಿದ್ದ. ಪೊಲೀಸರು 2008ರ ಅಕ್ಟೋಬರ್‌ 3ರ ಮುಂಜಾನೆ ಆತನನ್ನು ಬಂಧಿಸಿದ್ದರು. ನೌಷಾದ್‌ನ ಸುಭಾಷ್‌ನಗರದ ಮನೆಯನ್ನು ಇಂಡಿಯನ್‌ ಮುಜಾಹಿದೀನ್‌ ಉಗ್ರರು ಸಮಾಲೋಚನೆ ನಡೆಸುವ ತಾಣವಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಜುಲೈ 2008 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದ ಸಂಬಂಧ ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಫೆ.18 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಿತ್ತು. ನ್ಯಾಯಾಲಯವು 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ವಿಧಿಸಿದ್ದು, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Leave a Comment

Your email address will not be published. Required fields are marked *