Ad Widget .

ಉಡುಪಿ: ಮನೆಯಲ್ಲಿದ್ದ ಮಹಿಳೆಗೆ ಹಲ್ಲೆಗೈದು ದರೋಡೆಗೆ ಯತ್ನ|ಆರೋಪಿಗಳನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು

ಸಮಗ್ರ ನ್ಯೂಸ್ ಡೆಸ್ಕ್: ಆಗಂತುಕರಿಬ್ಬರು ಮನೆಯೊಂದಕ್ಕೆ ನುಗ್ಗಿ ಮನೆಯೊಡತಿಗೆ ಇರಿದು ದರೋಡೆಗೈಯಲು ಯತ್ನಿಸಿದಾಗ ಸ್ಥಳೀಯರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಫೆ.೧೮ ರ ರಾತ್ರಿ ಅನಂತನಗರದ ಹುಡ್ಕೋ ಕಾಲೋನಿಯಲ್ಲಿ ನಡೆದಿದೆ.

Ad Widget . Ad Widget .

ಗಾಯಗೊಂಡ ಮಹಿಳೆಯನ್ನು ಸುಮತಿ ರೈ ಎಂದು ಗುರುತಿಸಲಾಗಿದೆ. ಕಳ್ಳರೆಂದು ಶಂಕಿಸಲಾದ ಇಬ್ಬರು ವ್ಯಕ್ತಿಗಳು ಮನೆಗೆ ನುಗ್ಗಿ ಮನೆಯಲ್ಲಿದ್ದ ಸುಮತಿ ಅವರಿಗೆ ಚಾಕುವಿನಿಂದ ಇರಿದು ಬೆಲೆಬಾಳುವ ವಸ್ತು ಲೂಟಿ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡು ಕುಸಿದು ಬಿದ್ದ ಸುಮತಿ ರೈ ಅವರನ್ನು ಕಳ್ಳರು ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿಸಲೆತ್ನಿಸಿದಾಗ ಪತಿ ದಯಾನಂದ ಮನೆಗೆ ಆಗಮಿಸಿದ್ದಾರೆ. ಈ ವೇಳೆ ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದಾಗ ಅವರು ಪರಾರಿಯಾಗಲು ಯತ್ನಿಸಿದ್ದಾರೆ . ತಕ್ಷಣೆ ಬೊಬ್ಬೆ ಹೊಡೆದಾಗ ಸ್ಥಳೀಯರು ಬೆನ್ನಟ್ಟಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget .

ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮತಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *