Ad Widget .

ಪ್ರತಿಭಟನೆಯ ನಡುವೆಯೂ ಮಾನವೀಯತೆ – ನದಿಯಿಂದ ಶವ ಮೇಲೆತ್ತಿದ ಆಸೀಪ್ ಆಪದ್ಭಾಂದವ

Ad Widget . Ad Widget .

ಹಳೆಯಂಗಡಿ : ಸುರತ್ಕಲ್‌ನ ಎನ್‌ಐಟಿಕೆ ಬಳಿಯ ಟೋಲ್ ಕೇಂದ್ರವನ್ನು ರದ್ದುಗೊಳಿಸಬೇಕು ಎಂದು ಕಳೆದ 10 ದಿನಗಳಿಂದ ಹಗಲು ರಾತ್ರಿ ಪ್ರತಿಭಟನೆಯನ್ನು ನಡೆಸುತ್ತಿರುವ ಆಸೀಪ್ ಆಪದ್ಭಾಂದವ ಪ್ರತಿಭಟನೆಯ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.

Ad Widget . Ad Widget .

ಅವರು ಬುಧವಾರ ಪ್ರತಿಭಟನೆಯ ನಡುವೆಯೂ ಪಾವಂಜೆ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸುಚೇಂದ್ರಕುಮಾರ್ ಅವರ ಶವವನ್ನು ಮೇಲೆತ್ತಲು ಆಗಮಿಸಿ ನದಿಗೆ ಹಾರಿ ದೋಣಿಯ ಸಹಾಯದಿಂದ ಶವವನ್ನು ಮೇಲೆತ್ತಿದ್ದಾರೆ.

ನಂತರ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರತಿಭಟನೆಯನ್ನು ಮುಂದುವರಿಸಿದ ಘಟನೆ ನಡೆದಿದೆ. ಆಸೀಪ್ ಅವರ ಮಾನವೀಯತೆ ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ.

ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸದಸ್ಯ ಸುಕೇಶ್ ಪಾವಂಜೆ ದೋಣಿಯ ಮೂಲಕ ಶವ ಮೇಲೆತ್ತಲು ಸಹಕಾರ ನೀಡಿದರು.

Leave a Comment

Your email address will not be published. Required fields are marked *