ಮಂಗಳೂರು: ತಿಮಿಂಗಿಲದ ವಾಂತಿ ಮಾರಾಟಕ್ಕೆ ಯತ್ನ – ನಾಲ್ವರ ಬಂಧನ

Ad Widget ... ..

ಮಂಗಳೂರು: ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.

Ad Widget

ಬಂಧಿತ ಆರೋಪಿಗಳನ್ನು ಕೊಡಗು ಜಿಲ್ಲೆಯ ಭಾಗಮಂಡಲ ನಿವಾಸಿ ಜಾಬಿರ್ ಎಂ.ಎ. (35) ಮತ್ತು ಶಬಾದ್ ಎಲ್.ಕೆ. (27) ಹಾಗೂ ಕಾಂಞಂಗಾಡಿನ ಅಸೀರ್ (36) ಮತ್ತು ಶರೀಫ್ ಎನ್.(32) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 2.20 ಕೋಟಿ ರೂ. ಮೌಲ್ಯದ ಅಂಬರ್ ಗ್ರೀಸ್, 5 ಮೊಬೈಲ್, 1 ಸ್ವಿಫ್ಟ್ ಕಾರು ಮತ್ತು 1,070 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನು ಪೊಲೀಸರು ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,25,92,070 ಎಂದು ಅಂದಾಜಿಸಲಾಗಿದೆ.

Leave a Comment

Your email address will not be published. Required fields are marked *