Ad Widget .

ಕಾಸರಗೋಡು: ಕೊಲೆ ಪ್ರಕರಣದ ಆರೋಪಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Ad Widget . Ad Widget .

ಕಾಸರಗೋಡು: ಕೊಲೆ ಸೇರಿದಂತೆ ಹಲವು ಪ್ರಕರಣದ ಆರೋಪಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

Ad Widget . Ad Widget .

ಅಣ೦ಗೂರು ಜೆ. ಪಿ ಕಾಲನಿಯ ಜ್ಯೋತಿಷ್ (35) ಮೃತಪಟ್ಟವನು. ಫೆ.15ರ ಇಂದು ಬೆಳಿಗ್ಗೆ ತನ್ನ ಮನೆ ಸಮೀಪದ ಮರವೊಂದರ ರೆಂಬೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದ ಜ್ಯೋತಿಷ್ ಇಂದು ಬೆಳಿಗ್ಗೆ ಮನೆಯವರು ಗಮನಿಸಿದಾಗ ನಾಪತ್ತೆಯಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಜ್ಯೋತಿಷ್ ಮೇಲೆ ಬಂಗ್ರಗುಡ್ಡೆ ಯ ಸಿನಾನ್, ಸೂರ್ಲು ವಿನ ರಿಷಾದ್ ಮೊದಲಾದವರ ಕೊಲೆ ಪ್ರಕರಣದ ಆರೋಪವಿದೆ. ತಳಂಗರೆಯ ಜೈನುಲ್ ಅಬಿದ್ ಕೊಲೆ ಪ್ರಕರಣದಲ್ಲೂ ಈತ ಶಾಮೀಲಾಗಿದ್ದನು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಶಲಾಗಿದೆ. ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ . ಜ್ಯೋತಿಷ್ ನು ಬಿಜೆಪಿ ಕಾರ್ಯಕರ್ತನಾಗಿದ್ದ.

Leave a Comment

Your email address will not be published. Required fields are marked *