ಸಮಗ್ರ ನ್ಯೂಸ್ ಡೆಸ್ಕ್: ಸದ್ಯಕ್ಕೆ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಈ ಹಿಂದೆ ಫೆ.14 ರಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದ ಇಬ್ರಾಹಿಂ ಈಗ ಉಲ್ಟಾ ಹೊಡೆಯುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ, ಮತಾಂತರ ಮಸೂದೆ ಪರಿಷತ್‍ನಲ್ಲಿ ಮಂಡನೆಯಾಗೋದಿದೆ, ಈ ವೇಳೆ ರಾಜೀನಾಮೆ ಕೊಟ್ಟರೆ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಬರುತ್ತೆ. ನನ್ನ ರಾಜೀನಾಮೆಯಿಂದ ಬಿಜೆಪಿಗೆ ಲಾಭ ಆಗುತ್ತೆ, ಹೀಗಾಗಿ ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಕುರಿತು ತೀರ್ಮಾನ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಹೈಕಮಾಂಡ್‍ನಿಂದ ನನಗೆ ಬುಲಾವ್ ಬಂದಿದೆ, ಹೈಕಮಾಂಡ್ ಜೊತೆ ಮಾತನಾಡಿದ ನಂತರ ಮತ್ತೆ ನಮ್ಮ ಮುಖಂಡರ ಜೊತೆ ಸಭೆ ಮಾಡುತ್ತೇನೆ. ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಮನಸ್ಸಿದೆಯೋ ಇಲ್ಲವೋ ಅವರನ್ನೇ ಕೇಳಿ, ಹೈಕಮಾಂಡ್ ನವರು ಏನು ಹೇಳ್ತಾರೆ ನೋಡೋಣ ಎಂದು ತಿಳಿಸಿದರು.
ನಾನು ಮುಖಂಡರ ಸಭೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ, ಕಾಂಗ್ರೆಸ್‍ನವರು ಒಂದು ಕಡೆ ಬಯ್ಯೋದು, ಒಂದು ಕಡೆ ತೆಗಳೋದು ಮಾಡಿಸುತ್ತಿದ್ದಾರೆ. ವಕ್ಫ್ ಬೋರ್ಡ್ ನಲ್ಲಿ ಭ್ರಷ್ಟಾಚಾರ ಮಾಡಿರುವುದಾಗಿ ಉಗ್ರಪ್ಪ ಅವರ ಮೂಲಕ ಕಾಂಗ್ರೆಸ್ ಹೇಳುತ್ತಿದೆ. ಈಗ ಬಿಜೆಪಿ ಸರ್ಕಾರ ಇದೆ ನನ್ನ ಮೇಲೆ ತನಿಖೆ ಮಾಡಿಸಲಿ. ಮನೆ ಮುಂದೆ ಕಟ್ಟಿದ ಶ್ವಾನಗಳಿಂದ ಯಾಕೆ ಬೊಗಳಿಸುತ್ತಿದ್ದೀರಿ ಎಂದು ಉಗ್ರಪ್ಪರನ್ನು ನಾಯಿಗೆ ಹೋಲಿಸಿದ್ದಾರೆ.
ಜಮೀರ್ ಅಹಮದ್ ಹೇಳೋದು ಒಂತರ, ಮಹದೇವಪ್ಪ ಮನೆಗೆ ಬಂದಿದ್ರು, ಸಿದ್ದರಾಮಯ್ಯ ಕರೆ ಮಾಡಿದ್ರು, ನಾವೇನೂ ಇಲ್ಲ ಅಂದ ಮೇಲೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಬೇಕು. ಜಂಗಮರ ರೀತಿ ಹೊರೆಟು ಬಿಡುತ್ತೇವೆ ಎಂದರು.