Ad Widget .

ಮಂಗಳೂರು: ಚೂರಿ ಇರಿತ ಪ್ರಕರಣ – ಐವರ ಬಂಧನ

Ad Widget . Ad Widget .

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ಆರನೇ ಬ್ಲಾಕ್‌ನಲ್ಲಿ ಫೆಬ್ರವರಿ 1 ರಂದು ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಬಂಧಿತ ಆರೋಪಿಗಳನ್ನು ಮೊಹಮ್ಮದ್ ಶರೋಜ್ ಚಾರು (24), ಮೊಹಮ್ಮದ್ ಮುಸ್ತಫಾ (22), ಅಬ್ದುಲ್ ಅಮೀನ್ (19), ಹಲ್ಲೆ ನಡೆಸಲು ಕಾರು ಒದಗಿಸಿದ ಸಿದ್ದಿಕ್ ಸಮದ್ (25) ಮತ್ತು ಮೊಹಮ್ಮದ್ ನೌಫಿಲ್ (18) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು ಫೆ.1ರ ರಾತ್ರಿ ತನ್ನ ಸ್ನೇಹಿತರಾದ ಅಬೂಬಕ್ಕರ್ ಮತ್ತು ಹಾರಿಸ್ ಜತೆ ಮಾತನಾಡುತ್ತಿದ್ದ ಮಹಮ್ಮದ್ ಅನಸ್ ಎಂಬಾತನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದರು. ಈ ಬಗ್ಗೆ ಅನಾಸ್ ನೀಡಿದ ದೂರಿನ ಮೇರೆಗೆ ಸುರತ್ಕಲ್ ಠಾಣೆಯಲ್ಲಿ ಐವರ ಮೇಲೆ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಮಾರಕಾಯುಧಗಳಿಂದ ಹಲ್ಲೆ ನಡೆಸಿರುವುದಾಗಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *