ಬೆಂಗಳೂರು: ರಾಜ್ಯದ ಶಾಲಾ ಕಾಲೇಜುಗಳ ಹಿಜಾಬ್- ಕೇಸರಿ ಶಾಲು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನ ತ್ರಿಸದಸ್ಯ ವಿಸ್ತ್ರತ ಪೀಠ ಸೋಮವಾರ ವಿಚಾರಣೆ ಮುಂದುವರೆಸಿದೆ. ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಮಧ್ಯಾಹ್ನ 2.30ಕ್ಕೆ ಆರಂಭಿಸಿದ್ದರು.
ಬಳಿಕ ವಕೀಲರಾದ ದೇವದತ್ ಕಾಮತ್ ಅವರು ವಾದ ಮಂಡಿಸಿದ್ದರು. ಹೀಗೆ ಹಲವು ವಾದ ವಿವಾದ ನಡೆದಿದ್ದವು. ಆದರೆ ಇನ್ನಷ್ಟು ವಿಚಾರಣೆ ಬಾಕಿ ಇರುವ ಕಾರಣ ಕಾಮತ್ ಅವರು ನಾಳೆಗೆ ಅವಕಾಶ ನೀಡಲು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದರು. ಅದರಂತೆ ನಾಳೆ ಮಧ್ಯಾಹ್ನ 2-30 ವಿಚಾರಣೆ ಮುಂದುವರೆಯಲಿದೆ.