ಹುಬ್ಬಳ್ಳಿ: ನಾನು ಹಿಜಬ್ ಬಗ್ಗೆ ಮಾತನಾಡುವವನೇ. ನಾನು ಯಾಕೆ ಕ್ಷಮೆ ಕೇಳಬೇಕು ಎಂದು ಹೇಳುವ ಮೂಲಕ ಮಾಜಿ ಸಚಿವ ಜಮೀರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಜಮೀರ್ ಅಹ್ಮದ್ ಕೌಂಟರ್ ನೀಡಿ ಮಾತನಾಡಿದ್ದು, ನಾನ್ ಹಿಜಬ್ ಬಗ್ಗೆ ಮಾತನಾಡುವವನೇ, ಯಾಕೆ ನಾನು ಕ್ಷಮೆ ಕೇಳಬೇಕು. ಕ್ಷಮೆ ಕೇಳುವಂತಹ ಹೇಳಿಕೆ ನಾನೇನು ನೀಡಿದ್ದೀನಿ ಎಂದು ಕಿಡಿಕಾರಿದರು.
ನಾನು ಹಿಜಬ್ ಹಾಕಬೇಕು ಅಂತ ಹೇಳಿದ್ದೆ, ಮಾಧ್ಯಮದವರು ಅದನ್ನು ತಿರುಚಿದ್ದಾರೆ. ಹೆಲ್ಮೇಟ್ ರೀತಿ ಹಿಜಬ್ ಹಾಕೋಬೇಕು, ಹೆಲ್ಮೇಟ್ ಹೇಗೆ ಸೇಫ್ಟಿ ಕೊಡುತ್ತೊ ಹಾಗೇ ಹಿಜಬ್ ಕೂಡಾ ನೀಡುತ್ತೆ ಎಂದರು.
ಡಿಕೆಶಿ ಹೇಳಿದ್ದೇನು..?
ಹಿಜಬ್ ವಿವಾದದ ಬಗ್ಗೆ ಶಾಸಕ ಜಮೀರ್ ಅಹ್ಮದ್ ಕೊಟ್ಟಿರುವ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಈ ಬಗ್ಗೆ ಅವರಿಗೆ ಕಾರಣ ಕೇಳಿ ನೋಟಿಸ್ ಕೊಡುತ್ತೇವೆ. ಅವರು ಆ ಮಾತನ್ನು ವಾಪಸ್ ಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಡಿಕೆಶಿ ಹೇಳಿದ್ದರು.
ನಿನ್ನೆ ಜಮೀರ್, ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿ, ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಜಮೀರ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ.