ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರ ಮೇಲೆ ಹತ್ತಿದ ಕಾರು – ಓರ್ವ ಯುವತಿ ದುರ್ಮರಣ

Ad Widget ... ..

ಕಾರವಾರ: ದಾಂಡೇಲಿ ನಗರದ ಜೆ. ಎನ್. ಎಸ್ ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

Ad Widget

ಮಾವನನ್ನು ಬೆಂಗಳೂರಿಗೆ ಬಿಡಲು ತನ್ನ ಅಕ್ಕನೊಂದಿಗೆ ಬಂದಿದ್ದ ಬಿಂದು ಗುಡಿ ಎಂಬ 24 ವರ್ಷದ ಯುವತಿ ಸಾವಿಗೀಡಾದ ನತದೃಷ್ಟೆ. ಬಸ್‌ ನಿಲ್ದಾಣದಿಂದ ವಾಪಾಸ್ ಬರುವಾಗ ರಸ್ತೆ ದಾಟಿ ಡಿವೈಡರ್ ಮೇಲೆ ಆ ನಾಲ್ವರೂ ಒಟ್ಟುಗೂಡಿ ನಿಂತಿದ್ದರು. ಏಕಾಏಕಿ ಬಂದ ಕಾರು ಆ ನಾಲ್ವರ ಮೇಲೆ ಹತ್ತಿ, ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮುಂದೆ ಬರುತ್ತಿದ್ದ ಬಸ್‌‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಯುವತಿ ಮೃತಪಟ್ಟಿದ್ದಾಳೆ.

ಈ ಬಗ್ಗೆ ದಾಂಡೇಲಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರಕರಣ ದಾಂಡೇಲಿ ನಗರ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.

Leave a Comment

Your email address will not be published. Required fields are marked *