Ad Widget .

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಗ್ರ ವಿಶೇಷ: ಮನುಷ್ಯನ ಜೀವನದಲ್ಲಿನ ದೈನಂದಿನ ಘಟನೆಗಳು ಮತ್ತು ಆಗುಹೋಗುಗಳಿಗೆ ರಾಶಿಗಳ ಮೇಲೆ ಗ್ರಹಗಳ ಪ್ರಭಾವವೇ ಕಾರಣವಾಗಿರುತ್ತದೆ. ಗ್ರಹಗಳ ಚಲನೆ‌ ಮತ್ತು ಅದರ ಕಾರಣದಿಂದ ರಾಶಿಗಳು ತಮ್ಮ ಪ್ರಭಾವವನ್ನು ತೋರಿಸುತ್ತವೆ. ನಿತ್ಯ ಜೀವನದ ಸಂಭವನೀಯ ಘಟನೆಗಳು ಮತ್ತು ಗೋಚಾರಫಲ ತಿಳಿಸುವ ರಾಶಿಭವಿಷ್ಯದಿಂದಾಗಿ ಜೀವನವನ್ನು ಉತ್ತಮಗೊಳಿಸುವುದು, ಸಮಸ್ಯೆಗಳ ಪರಿಹಾರ ಕ್ರಮ ತಿಳಿದುಕೊಳ್ಳುವುದು ಅವಶ್ಯ. ಈ ಹಿನ್ನೆಲೆಯಲ್ಲಿ ‌ಮೇಷಾಧಿ ದ್ವಾದಶ ರಾಶಿಗಳ ವಾರಭವಿಷ್ಯ ಇಲ್ಲಿದೆ. ಫೆ. 12 ರಿಂದ 19ರವರೆಗಿನ ಒಂದಿಡೀ ವಾರದ ಭವಿಷ್ಯ ತಿಳಿದುಕೊಂಡು ನಿಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಿ.

Ad Widget . Ad Widget .

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1) : ಕೃಷಿ ಕ್ಷೇತ್ರದಲ್ಲಿರುವವರ ಆದಾಯ ಹೆಚ್ಚುತ್ತದೆ. ಹಣಕಾಸು ವ್ಯವಹಾರಗಳ ಒಪ್ಪಂದದ ವಿಚಾರದಲ್ಲಿ ಬಹಳ ಎಚ್ಚರಿಕೆ ಇರಲಿ. ಹೂವಿನ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಆದಾಯವೂ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ, ಉನ್ನತ ವ್ಯಾಸಂಗದ ವಿಚಾರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಹಣದ ಒಳಹರಿವು ಸಾಮಾನ್ಯ. ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಕೆಲಸದಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಅವಕಾಶಗಳು ದೊರೆತು ಆದಾಯ ವೃದ್ಧಿಸುತ್ತದೆ. ಕುಟುಂಬದ ವೈಮನಸ್ಸುಗಳನ್ನು ಪರಿಹರಿಸುವುದು ಅತಿ ಮುಖ್ಯ. ರಾಜಕೀಯದವರು ಸಮೂಹದಲ್ಲಿ ಮಾತನಾಡುವಾಗ ಬಹಳ ಎಚ್ಚರವಾಗಿರಬೇಕು.

Ad Widget . Ad Widget .

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) : ವೃತ್ತಿಯಲ್ಲಿ ಹೆಚ್ಚು ಅನುಕೂಲವನ್ನು ಕಾಣಬಹುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಹೆಚ್ಚು ಅನುಕೂಲಗಳು ದೊರೆಯುತ್ತವೆ. ನಿಮ್ಮ ವ್ಯವಹಾರಕ್ಕೆ ವಿದೇಶಿ ಪಾಲುದಾರರು ದೊರೆಯುವ ಸಾಧ್ಯತೆಗಳಿವೆ ಮತ್ತು ಅವರಿಂದ ಬಂಡವಾಳ ಹೂಡಿಕೆಯೂ ಆಗುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ರಾಜಕೀಯ ಕ್ಷೇತ್ರದಲ್ಲಿರುವವರು ಎಚ್ಚರಿಕೆಯಿಂದ ಕೆಲಸ ಮಾಡುವುದು ಅಗತ್ಯ. ಹಣಕಾಸು ಸಂಸ್ಥೆಗಳನ್ನು ನಡೆಸುವವರಿಗೆ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಇಷ್ಟಮಿತ್ರರ ಜೊತೆ ಗಂಭೀರ ಚರ್ಚೆಗಳು ನಡೆದು ಸಾಮಾಜಿಕ ಕೆಲಸಗಳನ್ನು ಕೈಗೊಳ್ಳುವಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3): ಉದ್ಯೋಗದಲ್ಲಿ ನಿಮ್ಮ ಮೇಲಿಟ್ಟಿದ್ದ ಭರವಸೆಗಳನ್ನು ಈಡೇರಿಸಿ ಸಂತಸಪಡುವಿರಿ. ಪುರಾತನ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ಹೆಚ್ಚಾಗಿ ಅನಿರೀಕ್ಷಿತ ಧನಲಾಭವಿರುತ್ತದೆ. ವಿಗ್ರಹಗಳನ್ನು ಕೆತ್ತುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಮರದ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಆದಾಯದಲ್ಲಿ ಹೆಚ್ಚಳವಿರುತ್ತದೆ. ಅಮೂಲ್ಯ ವಸ್ತುಗಳನ್ನು ಸಂಗ್ರಹ ಮಾಡುವವರಿಗೆ ಅವರ ನೆಚ್ಚಿನ ವಸ್ತು ದೊರೆಯುತ್ತದೆ. ಬಂದ ಸಮಸ್ಯೆಗಳನ್ನು ಎದುರಿಸುವ ಛಲ ಮತ್ತು ಹುಮ್ಮಸ್ಸು ನಿಮಗಿರುತ್ತದೆ. ತಂದೆಯಿಂದ ನಿಮಗೆ ಧನಸಹಾಯ ಒದಗುವ ಸಾಧ್ಯತೆಗಳಿವೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಏರಿಳಿತಗಳನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ): ಉದ್ಯೋಗ ಸ್ಥಳದಲ್ಲಿ ಹಿರಿಯ ಅಧಿಕಾರಿಯ ಸಹಾಯದಿಂದ ನಿಮ್ಮ ಶತ್ರುಗಳನ್ನು ಮಟ್ಟ ಹಾಕುವಿರಿ. ಪ್ರೀತಿ ಪಾತ್ರರೊಡನೆ ನಿಮ್ಮ ಅನಿಸಿಕೆ ಮತ್ತು ಸಾಧನೆಗಳನ್ನು ಹಂಚಿಕೊಳ್ಳುವಿರಿ. ವಿವಾದಿತ ಆಸ್ತಿಯು ನಿಮಗೆ ದೊರೆಯುವ ಸಾಧ್ಯತೆ ಇದೆ. ನಿಮ್ಮ ಮೇಧಾವಿತನದಿಂದ ಕ್ಲಿಷ್ಟ ಸಮಸ್ಯೆಗಳನ್ನು ಆಲೋಚಿಸಿ ಪರಿಹಾರ ಮಾಡಿಕೊಳ್ಳುವಿರಿ. ನೇತ್ರ ಸಂಬಂಧಿ ಕಾಯಿಲೆ ಇರುವವರಿಗೆ ಈಗ ಸ್ವಲ್ಪ ಆರಾಮವೆನಿಸುತ್ತದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರ ಸ್ಥಿತಿಗತಿ ಉತ್ತಮವಾಗುತ್ತದೆ. ಮಗಳ ಅಭಿವೃದ್ಧಿಯು ನಿಮ್ಮ ನಿರೀಕ್ಷೆಯಂತೆ ನಡೆದು ಸಂತಸವಾಗುತ್ತದೆ. ಆಟೋಮೊಬೈಲ್ ಉಪವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ಹೆಚ್ಚಳ. ಹಣದ ಒಳಹರಿವು ಇರುತ್ತದೆ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1): ಸಮಸ್ಯೆ ಪರಿಹಾರಕ್ಕಾಗಿ ಹಿರಿಯರನ್ನು ಭೇಟಿಮಾಡುವಿರಿ. ಅವರ ಸಲಹೆಯಂತೆ ದೈವಕಾರ್ಯಗಳನ್ನು ಮಾಡುವಿರಿ. ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವವರು ಕುಟುಂಬ ಜೀವನದ ಕಡೆಗೂ ಗಮನಹರಿಸುವುದು ಅಗತ್ಯ. ವ್ಯವಹಾರಗಳಲ್ಲಿ ಸ್ವಲ್ಪ ಏರಿಳಿತಗಳು ಕಂಡುಬಂದರೂ ಗಾಬರಿ ಏನಿಲ್ಲ. ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹ ಮಾಡುವಿರಿ. ಬಟ್ಟೆ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚು ನಡೆದು ಲಾಭವಿರುತ್ತದೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವವರ ಮಾರುಕಟ್ಟೆ ವಿಸ್ತರಿಸಿ ಲಾಭ ಸಾಧ್ಯತೆ. ಎಲೆಕ್ಟ್ರಾನಿಕ್ಸ್ ಉದ್ಯಮಗಳನ್ನು ನಡೆಸುತ್ತಿರುವವರಿಗೆ ಹೆಚ್ಚು ತಯಾರಿಕಾ ಆದೇಶಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾದ ಅನುಕೂಲತೆಗಳು ಒದಗಿಬರುತ್ತವೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2): ವ್ಯವಹಾರದಲ್ಲಿ ಕೆಲವೊಂದು ಅವಸರದ ತೀರ್ಮಾನಗಳನ್ನು ತೆಗೆದುಕೊಂಡು ಸಂಕಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಚ್ಚರ. ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಉದಾಸೀನತೆ ಸಲ್ಲದು. ಮೇಲ್ಮಟ್ಟದಲ್ಲಿರುವ ಅಧಿಕಾರಿಗಳು ಸಾರ್ವಜನಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರಿಂದ ಗೌರವ ಪಡೆಯುವರು. ಇತರರ ಬಗ್ಗೆ ಹಗುರವಾಗಿ ಮಾತನಾಡದಿರುವುದು ನಿಮಗೆ ಒಳಿತು. ಗೃಹನಿರ್ಮಾಣ ಮಾಡುತ್ತಿರುವವರಿಗೆ ಬೇಕಾದ ಅನುಕೂಲತೆ ದೊರೆಯುತ್ತದೆ. ರಂಗಕರ್ಮಿಗಳಿಗೆ ಹೆಚ್ಚಿನ ಕಾರ್ಯಕ್ರಮಗಳು ದೊರೆಯುವ ಸಾಧ್ಯತೆ ಇದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3): ಸಂಗಾತಿ ಕಡೆಯವರಿಗೆ ನಿಮ್ಮ ಎಲ್ಲಾ ಕಷ್ಟಸುಖಗಳನ್ನು ಹೇಳಿಕೊಳ್ಳುವುದು ತರವಲ್ಲ. ಬಂಧುಗಳ ನಡುವೆ ಬರುವ ಭಿನ್ನಾಭಿಪ್ರಾಯಗಳಿಗೆ ನೀವೇ ಕಾರಣಕರ್ತರಾಗಬಹುದು, ಎಚ್ಚರ ಇರಲಿ. ಕೃಷಿ ಸಂಶೋಧನಾ ವಿದ್ಯಾರ್ಥಿಗಳಿಗೆ ಗೌರವ ಧನ ಬರುತ್ತದೆ. ವಿಜ್ಞಾನಿಗಳಿಗೆ ಹೊಸ ಹೊಸ ವಿಚಾರಗಳು ಅರಿವಿಗೆ ಬಂದು ಹೆಚ್ಚಿನ ಸಾಧನೆಗೆ ಅನುಕೂಲವಾಗುತ್ತದೆ. ಸ್ವಂತ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಇರಲಿ. ನಿಮ್ಮ ಅನುಕೂಲಕ್ಕಾಗಿ ದೈವಕಾರ್ಯಗಳನ್ನು ಮಾಡುವಿರಿ. ನಂಬಿಕೆ ಮೇಲೆ ಯಾವುದೇ ರೀತಿಯ ಹಣದ ವ್ಯವಹಾರ ಬೇಡ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ): ನಿಮ್ಮ ಆಲೋಚನೆಗೆ ಬಂದ ವಿಷಯಗಳನ್ನು ಕಾರ್ಯರೂಪಕ್ಕೆ ತರುವುದರಿಂದ ಅನುಕೂಲ ಹೆಚ್ಚುತ್ತದೆ. ಹೊಂದಿಕೊಳ್ಳುವ ಮನೋಭಾವದಿಂದಾಗಿ ಹೆಚ್ಚು ಜನರ ವಿಶ್ವಾಸವನ್ನು ಗಳಿಸುವಿರಿ. ಆರ್ಥಿಕ ಸ್ಥಿತಿಯು ಸುಧಾರಣೆ ಸ್ಥಿತಿಯತ್ತ ಹೊರಳುತ್ತದೆ. ಕಾನೂನು ಕಾಯ್ದೆ ವಿಚಾರದಲ್ಲಿ ನಿಮಗೆ ಯಶಸ್ಸು ಇರುತ್ತದೆ. ಭೂ ಖರೀದಿಯ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಮಾತಿನ ಭರವಸೆಯ ಮೇಲೆ ವ್ಯವಹಾರ ನಡೆಸುವ ಬದಲು ಒಪ್ಪಂದದ ಮೇಲೆ ನಡೆಸುವುದು ಒಳ್ಳೆಯದು. ನಿಮ್ಮ ತಂತ್ರಗಳಿಂದಲೇ ಶತ್ರುಗಳನ್ನು ಕಟ್ಟಿ ಹಾಕುವಿರಿ. ನಿಮ್ಮ ವ್ಯವಹಾರಗಳಿಗೆ ವಿದೇಶಗಳಲ್ಲಿ ಹಂಚಿಕೆದಾರರು ಸಿಗುವರು. ಸಾಂಪ್ರದಾಯಿಕ ಔಷಧಿ ಕೊಡುವವರಿಗೆ ಬೇಡಿಕೆ ಬರುತ್ತದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1): ಚಿನ್ನಾಭರಣಗಳನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ಮಾಧ್ಯಮದ ಕೆಲಸಗಾರರಿಗೆ ಹೆಚ್ಚಿನ ಕೆಲಸಗಳು ದೊರೆತು ಆದಾಯ ಹೆಚ್ಚುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಸೂಕ್ತ ಪದೋನ್ನತಿಯ ಅವಕಾಶ ಇರುತ್ತದೆ. ಆಪ್ತ ಬಂಧುಗಳ ಭೇಟಿಯನ್ನು ಮಾಡುವ ಅವಕಾಶವಿದೆ. ನ್ಯಾಯವಾದಿಗಳಿಗೆ ಉತ್ತಮ ಸಂಭಾವನೆ ಸಿಗುವ ಅವಕಾಶಗಳಿವೆ. ಕಣ್ಣಿಟ್ಟ ಆಸ್ತಿಯನ್ನು ಪ್ರಯತ್ನಪೂರ್ವಕವಾಗಿ ಪಡೆಯಬಹುದು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಮೂಳೆಯ ತೊಂದರೆಗಳು ಸ್ವಲ್ಪ ಬಾಧಿಸಬಹುದು. ಸಂಗಾತಿಯ ಬೇಡಿಕೆಗಾಗಿ ಹೆಚ್ಚು ಹಣ ಕೊಡಬೇಕಾಗುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2): ರಾಜಕೀಯದವರ ಸಹಕಾರದಿಂದ ಮಹತ್ತರ ಕೆಲಸವೊಂದನ್ನು ಸಾಧಿಸಿಕೊಳ್ಳುವಿರಿ. ಗುತ್ತಿಗೆ ಕೆಲಸ ಮಾಡುವವರಿಗೆ ಕೆಲಸಗಳಲ್ಲಿ ಹೆಚ್ಚಿನ ಲಾಭವಿದೆ. ಗುಣವಂತರ ಸ್ನೇಹ ಮತ್ತು ಸಹಕಾರಗಳು ದೊರೆತು ಸಂತಸವಾಗುತ್ತದೆ. ಉದ್ಯೋಗ ಬದಲಾವಣೆಯ ಬಗ್ಗೆ ಸಾಕಷ್ಟು ಪ್ರಯತ್ನಿಸುವಿರಿ. ಕೆಲವರಿಗೆ ಹೊಸ ಯಂತ್ರಗಳನ್ನು ಖರೀದಿ ಮಾಡಿ ಉತ್ಪಾದನೆ ಹೆಚ್ಚು ಮಾಡುವ ಅವಕಾಶವಿದೆ. ಸಂಗಾತಿಯ ಆಶೋತ್ತರಗಳ ಈಡೇರಿಕೆಗಾಗಿ ಹೆಚ್ಚು ಹಣ ವ್ಯಯ ಮಾಡುವಿರಿ. ಧನಾದಾಯವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಕೂಡಿಟ್ಟ ಬಂಡವಾಳದಿಂದ ನಿರೀಕ್ಷಿತ ಲಾಭವನ್ನು ಪಡೆಯುವಿರಿ. ಕಲಾವಿದರಿಗೆ ಉತ್ತಮ ಕಾರ್ಯಕ್ರಮಗಳು ದೊರೆಯುವ ಸಾಧ್ಯತೆ ಇದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಸಾಧನೆ ಆಗುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3): ಬಹಳ ದಿನಗಳಿಂದ ಬಾಕಿ ಇರುವ ಕೆಲಸವೊಂದನ್ನು ಮಾಡಿ ಮುಗಿಸುವಿರಿ. ಮಹಿಳೆಯರು ವಿದ್ಯುತ್ ಉಪಕರಣಗಳನ್ನು ಬಳಸುವಾಗ ಬಹಳ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು. ನಿತ್ಯದ ಕೆಲಸಗಳ ಕಡೆಗೆ ಹೆಚ್ಚಿನ ನಿಗಾ ವಹಿಸುವಿರಿ. ವಸ್ತ್ರದ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ರೈತರು ಬೆಳೆದ ಬೆಳೆಗೆ ಹೆಚ್ಚಿನ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಕೆಲವು ಕೆಲಸಗಳು ನಿಧಾನವಾದರೂ ಪ್ರಗತಿಯಲ್ಲಿರುವವು. ಹೊಸ ಜವಾಬ್ದಾರಿಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆ ಇರುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ಸ್ತ್ರೀಯರು ನಡೆಸುವ ವ್ಯವಹಾರಗಳು ಚೆನ್ನಾಗಿ ನಡೆದು ಹೆಚ್ಚು ಲಾಭ ತರುತ್ತವೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ): ನಿಮ್ಮ ನಡೆ-ನುಡಿಗಳಿಂದ ಜನರು ಮಹತ್ವ ಕೊಡುವುದು ಕಡಿಮೆಯಾಗಬಹುದು. ಆತ್ಮೀಯರೊಬ್ಬರ ಶಿಫಾರಸಿನಿಂದ ಸರ್ಕಾರಿ ಕಚೇರಿಯ ಕೆಲ ಕೆಲಸಗಳು ಆಗುತ್ತವೆ. ವಾಣಿಜ್ಯ ವ್ಯವಹಾರಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಅವಕಾಶವೊಂದು ದೊರೆಯುತ್ತದೆ, ಅದನ್ನು ಬಳಸಿಕೊಳ್ಳಿರಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಆದಾಯವಿರುತ್ತದೆ. ಪಶು ಆಹಾರವನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ಹೆಚ್ಚುತ್ತದೆ. ಸ್ವಂತ ವ್ಯಾಪಾರವನ್ನು ಮಾಡುತ್ತಿರುವವರಿಗೆ ಅದನ್ನು ವಿಸ್ತರಿಸುವ ಯೋಗವಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ. ಪರಿಸರ ಕಾಳಜಿಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ. ಆರ್ಥಿಕ ಸ್ಥಿತಿಯು ನಿಮ್ಮ ಅವಶ್ಯಕತೆಯನ್ನು ಪೂರೈಸುತ್ತದೆ.

Leave a Comment

Your email address will not be published. Required fields are marked *