Ad Widget .

ನಾಗಕ್ಷೇತ್ರ ಕುಕ್ಕೆಯಲ್ಲಿ ನಿರ್ಮಾಣಗೊಳ್ಳಲಿದೆ ದ.ಭಾರತದ ಎರಡನೇ ವಿಷ ಚಿಕಿತ್ಸಾಲಯ| ಹಾವು ಕಡಿತಕ್ಕೆ ಆಯುರ್ವೇದ ಪದ್ದತಿಯಲ್ಲಿ ಚಿಕಿತ್ಸೆ

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಷದ ಹಾವುಗಳ ಕಡಿತಕ್ಕೆ ಒಳಗಾದವರಿಗೆ ಆಯುರ್ವೇದ ಚಿಕಿತ್ಸೆ ನೀಡುವ ಆಸ್ಪತ್ರೆ ತೆರೆಯಲು ಸರಕಾರ ಚಿಂತನೆ ನಡೆಸಿದೆ.

Ad Widget . Ad Widget .

ಮುಜರಾಯಿ ಇಲಾಖೆ 300 ಕೋ.ರೂ. ವೆಚ್ಚದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಇಂಜಾಡಿ ಬಳಿ 50 ಎಕರೆ ಪ್ರದೇಶದಲ್ಲಿ 100 ಕೋ.ರೂ. ವೆಚ್ಚದಲ್ಲಿ ಪರಿಸರ ಸ್ನೇಹಿ ಕುಟೀರಗಳನ್ನು ಸ್ಥಾಪಿಸಲಾಗುತ್ತಿದೆ. ಅಲ್ಲಿ ಮನಃ ಶಾಂತಿ ದೊರಕಿಸುವ ಯೋಗ, ಥೆರಪಿ, ಧ್ಯಾನ, ಆಯು ರ್ವೇದ ಚಿಕಿತ್ಸೆ ಇತ್ಯಾದಿ ಸೌಲಭ್ಯ ಗಳಿರಲಿವೆ. ವಿಷ ಚಿಕಿತ್ಸೆಯ ಆಸ್ಪತ್ರೆಯೂ ಅದರಲ್ಲೊಂದು. ಹಾವು ಕಡಿತಕ್ಕೊಳಗಾದವರನ್ನು ದಾಖ ಲಿಸಿಕೊಳ್ಳಲು 5ರಿಂದ 6 ಬೆಡ್‌ ವ್ಯವಸ್ಥೆ ಇರಲಿದೆ. ಆಯುರ್ವೇದ ವೈದ್ಯರು, ದಾದಿಯರು ಇರಲಿದ್ದು ಗಿಡಮೂಲಿಕೆ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

ಹಾವು ಕಡಿತದಿಂದ ದೇಶದಲ್ಲಿ ವರ್ಷವೊಂದಕ್ಕೆ 20 ಸಾವಿರದಿಂದ 50 ಸಾವಿರದಷ್ಟು ಸಾವು ಸಂಭ ವಿಸುತ್ತಿದೆ. ಗಿಡಮೂಲಿಕೆಗಳ ಔಷಧವೇ ಈಗಲೂ ಹೆಚ್ಚಿನ ಕಡೆ ಬಳಕೆಯಾಗುತ್ತಿದೆ. ಹಾವಿನ ವಿಷಕ್ಕ ಶೀಘ್ರ ಉಪಶಮನ ಬೇಕಾಗಿದ್ದು, ಇದು ಕ್ಷಣದಲ್ಲಿ ಸಿಗದೇ ಸಾವು ಸಂಭವಿಸುತ್ತಿದೆ.

ಕರಾವಳಿ ನಾಗರಾಧನೆಗೆ ಪ್ರಸಿದ್ಧಿ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಾದ ದ.ಕ., ಉಡುಪಿ ಜಿಲ್ಲೆಗಳಲ್ಲಿ ಅಸಂಖ್ಯಾತ ನಾಗಬನ ಗಳು ಕೂಡ ಇದ್ದು, ಅವು ಹಾವುಗಳ ಆವಾಸ ಸ್ಥಾನಗಳಾಗಿವೆ. ನಾಗರಹಾವು, ಕಾಳಿಂಗ ಸರ್ಪ, ಕಡಂಬಳ, ಕನ್ನಡಿ, ಕೊಳಕು ಮಂಡಲ, ಬಳೆ ಒಡಕ ಮೊದಲಾದ ಹಾವುಗಳು ವಿಷಪೂರಿತವಾಗಿರುತ್ತವೆ. ಕೇರೆ, ನೀರೊಳ್ಳೆಯಂತಹ ವಿಷರಹಿತ ಹಾವುಗಳೂ ಇವೆ. ದೇಶದಲ್ಲಿ 270ಕ್ಕೂ ಅಧಿಕ ಪ್ರಬೇಧದ ಹಾವುಗಳಿವೆ.

ಕೇರಳದ ಕಣ್ಣೂರು ಜಿಲ್ಲೆಯ ಪರಶ್ಶಿನಕಡವು ಸಮೀಪ ಪಾಪ್ಪಿನಶೇರಿಯಲ್ಲಿ ವಿಷದ ಹಾವು ಕಡಿತದ ಚಿಕಿತ್ಸಾ ಕ್ಲಿನಿಕ್‌ ಇದೆ. ಅದನ್ನು ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಇಂತಹ ಆಸ್ಪತ್ರೆ ಇಲ್ಲ. ಆರಂಭದಲ್ಲಿ ಆ್ಯಂಟಿಬ್ಯಾಟಿಕ್‌ ಚುಚ್ಚುಮದ್ದು ಕೊಟ್ಟು ಬಳಿಕ ಆಯುರ್ವೇದ ಪದ್ಧತಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಕ್ಲಿನಿಕ್‌ನ ಡಾ| ಹರಿಕೃಷ್ಣ ತಿಳಿಸಿದ್ದಾರೆ.

ಇಂಜಾಡಿ ಬಳಿ ವಿಷ ಚಿಕಿತ್ಸಾಲಯವನ್ನು ತೆರೆಯಲು ಉದ್ದೇಶಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಡಿಪಿಆರ್‌ ಸಿದ್ಧವಾಗಲಿದೆ. ಈಗಿನ ನೈಸರ್ಗಿಕ ಪರಿಸರವನ್ನು ಹಾಗೆಯೇ ಉಳಿಸಿಕೊಂಡು ಪರಿಸರ ಸ್ನೇಹಿಯಾಗಿ, ನಿರ್ಮಿಸಲಾಗುತ್ತಿದೆ.
– ಮೋಹನ್‌ ರಾಂ ಸುಳ್ಳಿ , ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಕುಕ್ಕೆ ಸುಬ್ರಹ್ಮಣ್ಯ

ವರದಿ: ಬಾಲಕೃಷ್ಣ ಭೀಮಗುಳಿ

Leave a Comment

Your email address will not be published. Required fields are marked *