Ad Widget .

ಅಪ್ಪು ‘ಜೇಮ್ಸ್’ ಹವಾ ಶುರು| ಟೀಸರ್ ಬಿಡುಗಡೆ, ಭರ್ಜರಿ ರೆಸ್ಪಾನ್ಸ್

Ad Widget . Ad Widget .

ಸಮಗ್ರ ಪಿಲಂ ಡೆಸ್ಕ್: ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೇ ಸಿನಿಮಾ ಜೇಮ್ಸ್​ ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯ್ತಿದ್ದಾರೆ. ಈಗಾಗಲೇ ಸಿನಿಮಾದ ಎರಡು ಪೋಸ್ಟರ್​ಗಳು ಬಿಡುಗಡೆಯಾಗಿದ್ದು ಅದಕ್ಕೆ ಅಭಿಮಾನಿಗಳು ಸಾಕಷ್ಟು ಸಂಭ್ರಮ ಪಟ್ಟಿದ್ದರು.

Ad Widget . Ad Widget .

ಈಗ ಸಿನಿಮಾ ತಂಡ ಚಿತ್ರದ ಟೀಸರ್​ ಬಿಡುಗಡೆ ಮಾಡಿದೆ. ಒಂದು ನಿಮಿಷ ಇರುವ ಟೀಸರ್​ನಲ್ಲಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಬ್ಬರಿಸಿದ್ದಾರೆ. ಮಾಫಿಯಾ, ರೌಡಿಸಂ ನೇತೃತ್ವದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಸಾಕಷ್ಟು ಲಾವಿಶ್​ಗೆ ಮೂಡಿ ಬಂದಿದೆ. ಅದ್ಬುತ ಲೊಕೇಶ್​ ಮತ್ತು ಅದ್ಧೂರಿ ಮೇಕಿಂಗ್​ನಲ್ಲಿ ಮೂಡಿಬಂದಿರುವ ಸಿನಿಮಾ ಟೀಸರ್​ಗೆ ಫ್ಯಾನ್ಸ್​ ಜೈಕಾರ ಹಾಕಿದ್ದಾರೆ. ಇನ್ನೂ ಚಿತ್ರದಲ್ಲಿ ಮೊದಲೇ ಹೇಳಿದಂತೆ ಪುನೀತ್​ ರಾಜ್​ಕುಮಾರ್​ ಪಾತ್ರಕ್ಕೆ ಶಿವರಾಜ್​ಕುಮಾರ್​ ಧ್ವನಿ ನೀಡಿದ್ದಾರೆ. ಸದ್ಯ ಟೀಸರ್​ ಮೂಲಕ ಸದ್ದು ಮಾಡಿದ ಜೇಮ್ಸ್​ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುವಂತೆ ಆಗಿದೆ. ಬಹುನಿರೀಕ್ಷಿತ ಜೇಮ್ಸ್​ ಸಿನಿಮಾ ಮಾರ್ಚ್​ 17ಕ್ಕೆ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ.

Leave a Comment

Your email address will not be published. Required fields are marked *