Ad Widget .

ಹಿಜಾಬ್ ವಿವಾದ| ಶೈಕ್ಷಣಿಕ ಸಂಸ್ಥೆಗಳಿಗೆ ಮತ್ತೆ ರಜೆ ವಿಸ್ತರಣೆ ಸಾಧ್ಯತೆ|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್ ವಿವಾದವು ಬೂದಿ ಮುಚ್ಚಿದ ಕೆಂಡದಂತೆ ಇರುವ ಕಾರಣ ಈಗಾಗಲೇ ಶಾಲಾಕಾಲೇಜುಗಳಿಗೆ ಘೋಷಣೆ ಮಾಡಿರುವ ರಜೆಯನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

Ad Widget . Ad Widget . Ad Widget .

ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಮೂರು ದಿನ ರಜೆ ಘೋಷಣೆ ಮಾಡಿತ್ತು. ನಾಳೆ ಈ ಅವಧಿ ಮುಗಿಯಲಿದ್ದು, ಇನ್ನು ಮೂರ್ನಾಲ್ಕು ದಿನಗಳ ಕಾಲ ವಿಸ್ತರಣೆ ಮಾಡಲು ಸರ್ಕಾರ ಒಲವು ತೋರಿದೆ.

ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಇಲಾಖೆ ಅಕಾರಿಗಳು, ಡಿಸಿ, ಎಸ್‍ಪಿ, ಡಿಡಿಪಿಐ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಶಾಲಾಕಾಲೇಜುಗಳಿಗೆ ನೀಡಿರುವ ರಜೆಯನ್ನು ಇನ್ನು ಮೂರ್ನಾಲ್ಕು ದಿನಗಳ ಕಾಲ ವಿಸ್ತರಣೆ ಮಾಡಬೇಕೋ ಇಲ್ಲವೇ ಶನಿವಾರದಿಂದಲೇ ಪುನರಾರಂಭಿಸಬೇಕೋ ಎಂಬುದರ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

ಪರಿಸ್ಥಿತಿ ಈಗ ಸಹಜ ಸ್ಥಿತಿಗೆ ಬಂದಿದ್ದರೂ ರಾಜ್ಯದ ಬಹುತೇಕ ಕಡೆ ಬೂದಿ ಮುಚ್ಚಿದ ಕೆಂಡದಂತಿದೆ. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 144 ಸೆಕ್ಷನ್ ವಿಧಿಸಿರುವುದು ಹಾಗೂ ರಜಾ ಘೋಷಣೆ ಮಾಡಿರುವುದರಿಂದ ವಿದ್ಯಾರ್ಥಿಗಳಾಗಲಿ, ಸಂಘಟನೆಗಳು, ಶಾಲಾಕಾಲೇಜುಗಳತ್ತ ಸುಳಿದಿಲ್ಲ.
ಶನಿವಾರ ಪುನಃ ಶಾಲಾಕಾಲೇಜುಗಳು ಪುನರಾರಂಭವಾದರೆ ಮತ್ತೆ ವಿದ್ಯಾರ್ಥಿಗಳ ನಡುವೆ ವಾದ-ವಿವಾದ ನಡೆದು ಕೋಮು ಸಂಘರ್ಷ ಉಂಟಾಗಬಹುದೆಂಬ ಆತಂಕ ಸರ್ಕಾರವನ್ನು ಕಾಡುತ್ತಿದೆ.

ಸದ್ಯ 18 ಜಿಲ್ಲೆಗಳ 54 ಕಾಲೇಜುಗಳಲ್ಲಿ ‌ಈ ವಿವಾದ ಭುಗಿಲೆದ್ದಿದ್ದು, ಪ್ರಕರಣದ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ.

Leave a Comment

Your email address will not be published. Required fields are marked *