Ad Widget .

ಮಂಗಳೂರು : ಅಪ್ರಾಪ್ತ ಬಾಲಕಿಯರನ್ನು ಬಳಸಿ ವೇಶ್ಯಾವಾಟಿಕೆ ಪ್ರಕರಣ| ಮಂಜೇಶ್ವರದ ಎಸ್ ಡಿ ಪಿ ಐ ನಾಯಕ ಜೈಲಿಗೆ

ಸಮಗ್ರ ನ್ಯೂಸ್ ಡೆಸ್ಕ್ : ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿದ ಪೊಲೀಸರು ಇದೀಗ‌ ಮಂಜೇಶ್ವರದ SDPI ಮುಖಂಡ ಶರೀಫ್ ಹೊಸಂಗಡಿಯನ್ನು ಬಂಧಿಸಿದ್ಧಾರೆ.

Ad Widget . Ad Widget .

ಮಂಗಳೂರಿನ ನಂದಿಗುಡ್ಡೆಯ ಬಳಿಯ ಪ್ಲ್ಯಾಟ್​​ನಲ್ಲಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಪ್ರಕರಣದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಎರಡು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಆರೋಪಿಗಳ‌ ಮೇಲೆ‌ ಪೋಕ್ಸೋ ಕೇಸು‌ದಾಖಲಿಸಿಲಾಗಿದೆ.

Ad Widget . Ad Widget .

ಆರೋಪಿಗಳು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಸೇರಿ ಮತ್ತಿಬ್ಬರು ಯುವತಿಯರಿಗೆ ಬೆದರಿಕೆ, ಆಮಿಷಗಳನ್ನೊಡ್ಡಿ ವೇಶ್ಯಾವಾಟಿಕೆಗೆ ಪ್ರೇರೇಪಿಸಿದ್ದರು. ನಗರದ ನಂದಿಗುಡ್ಡದ ರಿಯೋನಾ ರೆಸಿಡೆನ್ಸಿಯ ಐದನೇ ಮಹಡಿಯ ಬಾಡಿಗೆ ಕೊಠಡಿಯಲ್ಲಿ ಆರೋಪಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಬಂಧಿತನಾಗಿರುವ ಶರೀಫ್ ನೆರೆಯ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಎಸ್ ಡಿ ಪಿ ಐ ನೇತಾರನಾಗಿದ್ದು, ಅನಿವಾಸಿ ಉದ್ಯಮಿ ಕೂಡಾ ಆಗಿದ್ದನು. ಪಿಎಫ್ಐ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದ ಈತ ಎಸ್ ಡಿಪಿಐ ಕಾಸರಗೋಡು ಜಿಲ್ಲಾಮಟ್ಟದ ನೇತಾರನಾಗಿದ್ದು, ಈತನ ಬಂಧನ ವರದಿ ಬಹಿರಂಗಗೊಳ್ಳದಂತೆ ಡೀಲ್ ನಡೆದಿದೆಯೆಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *