ಭೀಕರ ಅಪಘಾತದಲ್ಲಿ ಮಾಜಿ ಶಾಸಕ ಎಸ್. ಬಾಲರಾಜು ಪ್ರಾಣಾಪಾಯದಿಂದ ಪಾರು

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ತಡರಾತ್ರಿ ನಡೆದ ಕಾರು ಮತ್ತು ಅಶೋಕ್ ಲೈಲ್ಯಾಂಡ್ ಲಾರಿಯ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಚಿಕ್ಕಬಳ್ಳಾಪುರ ಮಾಜಿ ಶಾಸಕ ಎಸ್.ಬಾಲರಾಜು ಸೇರಿ ಮೂವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.

Ad Widget

ಚಾಮರಾಜನಗರ ತಾಲೂಕಿನ ಬಾಣಳ್ಳಿ ಗೇಟ್ ಬಳಿಯಲ್ಲಿ ಕಳೆದ ರಾತ್ರಿ ಕೊಳ್ಳೇಗಾಲದ ಮಾಜಿ ಶಾಸಕ ಎಸ್ ಬಾಲರಾಜು ಅವರ ಕಾರು ಹಾಗೂ ಅಶೋಕ್ ಲೈಲ್ಯಾಂಡ್ ಲಾರಿಯ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮದಿಂದಾಗಿ ಮಾಜಿ ಶಾಸಕ ಬಾಲರಾಜು ಹಾಗೂ ಕಾರು ಚಾಲಕ ಮೋಹನ್ ಮತ್ತು ಕ್ಲೀನರ್ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.

ಈ ಅಪಘಾತದಲ್ಲಿ ಮಾಜಿ ಶಾಸಕ ಎಸ್ ಬಾಲರಾಜು ಪ್ರಾಣಾಪಾಯದಿಂದ ಪಾರಾಗಿದ್ದರೇ, ಕಾರು ಚಾಲಕ ಮೋಹನ್, ಕ್ಲೀನರ್ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *