ಸುಳ್ಯ.ಫೆ.9: ಅನ್ಯ ಧರ್ಮೀಯ ಗೆಳೆಯನೊಬ್ಬನೊಂದಿಗೆ ಯುವತಿಯೊಬ್ಬಳು ಮಡಿಕೇರಿ ಹೋಗುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಅವರಿಬ್ಬರನ್ನು ಬಸ್ಸಿನಿಂದ ಇಳಿಸಿ ಠಾಣೆಗೆ ಕರೆತಂದು ಧರ್ಮಸ್ಥಳ ಪೋಲೀಸರಿಗೆ ಒಪ್ಪಿಸಿದ ಘಟನೆ ಇಂದು ಬೆಳಿಗ್ಗೆ ಸುಳ್ಯದಲ್ಲಿ ನಡೆದಿದೆ.
ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಯುವಕ ಮತ್ತು ಯುವತಿ ನಡುವೆ ಪ್ರೇಮವಿತ್ತೆನ್ನಲಾಗಿದ್ದು, ಕ್ರಿಶ್ಚಿಯನ್ ಗೆಳೆಯನಾಗಿರುವ ಆತನೊಂದಿಗೆ ಮಡಿಕೇರಿಗೆ ಹೋಗುತ್ತಿದ್ದ ಬಗ್ಗೆ ಮನೆಯವರಿಗೆ ತಿಳಿದು ಮನೆಯವರು ಧರ್ಮಸ್ಥಳ ಪೋಲೀಸರಿಗೆ ಹೇಳಿದ್ದಾರೆ. ಧರ್ಮಸ್ಥಳ ಪೋಲೀಸರು ಸುಳ್ಯ ಪೊಲೀಸರನ್ನು ಸಂಪರ್ಕಿಸಿ ತಿಳಿಸಿದ ಮೇರೆಗೆ ಸುಳ್ಯ ಪೊಲೀಸರು ಅವರು ಬರುತ್ತಿದ್ದ ಬಸ್ಸನ್ನು ಕಾದು ಸುಳ್ಯ ಬಸ್ ನಿಲ್ದಾಣದಿಂದ ಅವರನ್ನು ಠಾಣೆಗೆ ಕರೆದೊಯ್ದು ಬಳಿಕ ಧರ್ಮಸ್ಥಳದ ಪೊಲೀಸರ ವಶಕ್ಕೆ ಒಪ್ಪಿಸಿದರೆಂದು ತಿಳಿದುಬಂದಿದೆ.