Ad Widget .

ಮಂಗಳೂರು: ಎಟಿಎಂನಿಂದ ದರೋಡೆಗೆ ಯತ್ನ| ಆರೋಪಿ ಪೊಲೀಸ್ ವಶಕ್ಕೆ

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ವ್ಯಕ್ತಿಯೋರ್ವ ಎಟಿಎಂ ಯಂತ್ರವನ್ನು ಜಖಂಗೊಳಿಸಿ ಅದರಲ್ಲಿದ್ದ ಹಣವನ್ನು ದೋಚಲು ವಿಫಲ ಯತ್ನ ನಡೆಸಿದ ಘಟನೆ ತೊಕ್ಕೊಟ್ಟು ಬಳಿ ಇರುವ ಬರೋಡಾ ಬ್ಯಾಂಕ್ ಎಟಿಎಂ ಬಳಿ ಫೆ.9 ರ ನಸುಕಿನ ವೇಳೆ ನಡೆದಿದೆ.

Ad Widget . Ad Widget .

ಎಟಿಎಂನಿಂದ ದರೋಡೆಗೆ ವಿಫಲ ಯತ್ನ ನಡೆಸಿದ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಬಾಚನಳ್ಳಿಯ ಬೀರಪ್ಪ ಎಂದು ಗುರುತಿಸಲಾಗಿದೆ.

ಇಂದು ನಸುಕಿನ ಜಾವ ಸುಮಾರು 2 ಗಂಟೆ ವೇಳೆಗೆ ಎಟಿಎಂ ನುಗ್ಗಿದ ಆರೋಪಿ ಎಟಿಎಂ ಯಂತ್ರವನ್ನು ಜಖಂಗೊಳಿಸಿ ಹಣ ದೋಚಲು ಯತ್ನಿಸಿದ್ದಾನೆ. ಆದರೆ ಎಟಿಎಂ ಯಂತ್ರದಿಂದ ಹಣ ಹೊರಬಂದಿಲ್ಲ. ಈತನ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ವೇಳೆ ಬ್ಯಾಂಕ್ ಎಟಿಎಂ ನ ಕಣ್ಗಾವಲು ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ

ಎಟಿಎಂ ನಿಂದ ನಗದು ಕಳವು ಮಾಡಿಲ್ಲ, ಅದರೆ ಕಳವು ಯತ್ನ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *