Ad Widget .

ಮಂಡ್ಯ: ಭಾವನ ಮೇಲಿನ ಮೋಹಕ್ಕೆ ತಂಗಿ ಕುಟುಂಬದ ನೆತ್ತರು ಬಸಿದ ಹಂತಕಿ| ನಡುರಾತ್ರಿ ರಕ್ತ ಹರಿಸಿದವರ ಬಂಧನ

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಮಂಡ್ಯವನ್ನು ಬೆಚ್ಚಿಬೀಳಿಸಿದ ನಾಲ್ವರು ಮಕ್ಕಳು ಸೇರಿ ಐವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದೊಡ್ಡಪ್ಪನ ಮಗಳಿಂದಲೇ ರಣಭೀಕರ ಕೃತ್ಯ ನಡೆದಿದೆ ಎಂದು ತಿಳಿದುಬಂದಿದ್ದು‌ ಮಂಡ್ಯ ಜನತೆಗೆ ಆಘಾತ ತಂದಿದೆ ‌

Ad Widget . Ad Widget .

ಭಾವನ ಮೇಲಿನ ವ್ಯಾಮೋಹಕ್ಕೆ ತಂಗಿಯನ್ನು ಕೊಲೆ ಮಾಡಿದ್ದಲ್ಲದೆ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಉಳಿದ ನಾಲ್ವರು ಮಕ್ಕಳನ್ನು ಪಾತಕಿ ಹತ್ಯೆಗೈದಿದ್ದಾಳೆ.

ಆರೋಪಿ ಲಕ್ಷ್ಮಿ (30) ಹಾಗೂ ಕೊಲೆಯಾದ ಲಕ್ಷ್ಮಿ (26) ಗಂಡ ಗಂಗಾರಾಮ್ ಜತೆ ವಿವಾಹೇತರ ಸಂಬಂಧವಿತ್ತು. ಮದುವೆಯಾಗಿ ಎರಡು ಮಕ್ಕಳ ತಾಯಿಯಾದ್ರೂ ಪರ ಪುರುಷನ ಮೇಲೆ ಆಕೆಗೆ ಮನಸ್ಸಾಗಿತ್ತು. ಆರು ತಿಂಗಳಿಂದ ಗಂಗಾರಾಮ್ ಜತೆ ಅಕ್ರಮ ಸಂಬಂಧವನ್ನು ಆರೋಪಿ ಆರಂಭಿಸಿದ್ದಳು.

ಹೆಂಡತಿಗೆ ಈ ವಿಚಾರ ತಿಳಿದ ಬಳಿಕ ಗಂಗಾರಾಮ್​ ಅಕ್ರಮ ಸಂಬಂಧ ಬಿಟ್ಟರೂ, ಹೆಂಡತಿಯನ್ನು ಬಿಟ್ಟು ತನ್ನನ್ನು ಮದುವೆಯಾಗು ಅಂತಾ ಗಂಗಾರಾಮ್​ನನ್ನು ಆರೋಪಿ ಪೀಡಿಸುತ್ತಿದ್ದಳು. ಇದೀಗ ತನ್ನ ಅಕ್ರಮ ಸಂಬಂಧ ಉಳಿಸಿಕೊಳ್ಳಲು ಅಮಾಯಕ ಜೀವಗಳನ್ನೇ ಇದೀಗ ಬಲಿ ಪಡೆದಿದ್ದಾಳೆ.

ಗಂಗಾರಾಮ್ ವ್ಯಾಪಾರಕ್ಕೆ ತೆರಳಿದಾಗ ತಂಗಿಯ ಕೊಲೆಗೆ ಪ್ಲಾನ್ ಮಾಡಿದ್ದಳು. ನಿನ್ನ ಜತೆ ಮಾತನಾಡಬೇಕೆಂದು ಘಟನೆ ನಡೆದ ದಿನ ರಾತ್ರಿ 9 ಗಂಟೆಗೆ ತಂಗಿಯ ಮನೆಗೆ ಬಂದಿದ್ದ ಹಂತಕಿ, ಮಧ್ಯರಾತ್ರಿ ಭೀಕರ ಕೊಲೆ ಮಾಡಿದ್ದಾಳೆ. ತಂಗಿ ಹಾಗೂ ಮಲಗಿದ್ದ ನಾಲ್ವರು ಮಕ್ಕಳನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದಿದ್ದಾಳೆ.

ಕೊಲೆ ಮಾಡಿದ ಬಳಿಕ ಮೂರ್ನಾಲ್ಕು ಗಂಟೆ ಶವಗಳೊಂದಿಗೆ ಇದ್ದು, ಬಳಿಕ ಮೈಸೂರಿನ ತನ್ನ ಮನೆಗೆ ತೆರಳಿದ್ದಳು. ಇದಾದ ನಂತರ 10 ಗಂಟೆಗೆ ಮೃತಳ ಮನೆಯ ಬಳಿ ಬಂದು ಅಮಾಯಕಿಯಂತೆ ಕಣ್ಣೀರಿಟ್ಟು ನಾಟಕ ಮಾಡಿದ್ದಳು.

ಒಂದೇ ದಿನ ಐವರು ಕೊಲೆಯಾಗಿದ್ದನ್ನು ನೋಡಿ ಮಂಡ್ಯ ಜನತೆಯೇ ಬೆಚ್ಚಿಬಿದ್ದಿತು. ಪೊಲೀಸರಿಗೂ ಇದು ತಲೆನೋವಾಗಿತ್ತು. ಇದೀಗ ಪ್ರಕರಣದ ಸತ್ಯಾಂಶ ತಿಳಿದ ಪೊಲೀಸರು ಶಾಕ್​ ಆಗಿದ್ದಲ್ಲದೆ, ಮಂಡ್ಯ ಜನತೆಯು ಬೆಚ್ಚಿಬಿದ್ದಿದ್ದಾರೆ.

Leave a Comment

Your email address will not be published. Required fields are marked *