Ad Widget .

ಹಿಜಾಬ್ ವಿವಾದ; ವಿಸ್ಕ್ರತ ಪೀಠಕ್ಕೆ ವರ್ಗಾವಣೆಗೊಂಡ ಅರ್ಜಿ ವಿಚಾರಣೆ

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್‌ ಧರಿಸುವಂತೆ ಕೋರಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಇಂದು ಎರಡನೇ ದಿನ ಕೂಡ ನಡೆಯಿತು. ಇದೇ ವೇಳೆ ನ್ಯಾಯಮೂರ್ತಿಗಳು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ನೀಡಬಹುದೇ ಅಂಥ ಉಭಯ ವಕೀಲರಿಗೆ ಪ್ರಶ್ನೆ ಮಾಡಿದರು, ಇದೇ ವೇಳೆ ವಿಸ್ತೃತ ಪೀಠಕ್ಕೆ ವಹಿಸಿದರೆ ವಹಿಸಬಹುದು, ಆದರೆ ಸದ್ಯ ಅದೇಶಕ್ಕಾಗಿ ನಾವು ಕಾಯುತ್ತಿದ್ದೇವೆ ಅಂತ ನ್ಯಾಯಪೀಠದ ಮುಂದೆ ಸರ್ಕಾರದ ಪರ ವಕೀಲರು ಪ್ರಶ್ನೆ ಮಾಡಿದರು.

Ad Widget . Ad Widget .

ಕಾಲೇಜು ನಿರ್ಧಾರ ಮಾಡಿರುವ ಬಟ್ಟೆಗಳನ್ನು ವಿದ್ಯಾರ್ಥಿಗಳು ಧರಿಸಬೇಕು ಅಂತ ಸರ್ಕಾರದ ಪರ ವಕೀಲರು ನ್ಯಾಯಪೀಠದ ಮುಂದೆ ತಿಳಿಸಿದರು. ಇದೇ ವೇಳೆ ನ್ಯಾಯಪೀಠ ಹಿಜಬ್​ ಧರಿಸುವುದು ಅನಿವಾರ್ಯವೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಈ ವೇಳೆ ಅರ್ಜಿಗೆ ಸಂಬಂಧಪಟ್ಟಂತೆ ಪರ ಹಾಗೂ ವಿರೋಧದ ವಾದ ವಿವಾದವನ್ನು ಆಲಿಸಿದ ನ್ಯಾಯಪೀಠ ಇದೇ ವೇಳೆ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ದ್ವಿಸದ್ಯಸ ಪೀಠಕ್ಕೆ ವರ್ಗಾವಣೆ ಮಾಡಿದೆ. ಇದು ಮುಖ್ಯ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ನಡೆಯಲಿದೆ.

Ad Widget . Ad Widget .

ಇದೇ ವೇಳೆ ಸರ್ಕಾರದ ಪದ ವಕೀಲರಾದ ಪ್ರಭುಲಿಂಗ ನಾವದಗಿ ವಾದ ಮಂಡನೆ ಮಾಡಿ ವಿದ್ಯಾರ್ಥಿಗಳು ಕಾಲೇಜಿನ ವಸ್ತ್ರ ಸಂಹಿತೆ ಕಾಪಾಡಬೇಕು ಅಂತ ಹೇಳಿ, ಹಿಜಬ್‌ ಮೂಲ ಧಾರ್ಮಿಕ ಆಚರಣೆ ಅಲ್ಲ ಅಂತ ಹೇಳಿದರು. ಇನ್ನೂ ಅರ್ಜಿದಾರರ ಪರ ವಕೀಲರಾದ ಸರ್ಕಾರದ ನಿರ್ಧಾರದ ವಿರುದ್ದ ಕಿಡಿಕಾರಿ, ಅದು ಕೆಟ್ಟದ್ದು ಅಂತ ಹೇಳಿದರು, ಎಕ್ಸಾಂನ ಈ ಸಮಯದ ಹೊತ್ತಿನಲ್ಲಿ ವಿದ್ಯಾರ್ಥಿಗಳು ಕಾಲೇಜಿನಿದ ಹಿಂದೆ ಉಳಿದರೇ ಅವರಿಗೆ ನಷ್ಟವಾಗುತ್ತದೆ ಅಂತ ಹೇಳಿದರು.

Leave a Comment

Your email address will not be published. Required fields are marked *