Ad Widget .

ತಾರಕಕ್ಕೇರಿದ ಹಿಜಾಬ್ ವಿವಾದ|ಕಾಲೇಜು ಶಿಕ್ಷಕನಿಗೆ ರಾಡ್‍ನಿಂದ ಮಾರಣಾಂತಿಕ ಹಲ್ಲೆ

Ad Widget . Ad Widget .

ಬಾಗಲಕೋಟೆ: ಶಿರವಸ್ತ್ರ- ಕೇಸರಿ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಕಾಲೇಜಿನ ಶಿಕ್ಷಕರೊಬ್ಬರಿಗೆ ಕಿಡಿಗೇಡಿಗಳು ರಾಡ್‍ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಬನಹಟ್ಟಿಯಲ್ಲಿ ನಡೆದಿದೆ.

Ad Widget . Ad Widget .

ಬನಹಟ್ಟಿಯ ಖಾಸಗಿ ಕಾಲೇಜಿನ ಶಿಕ್ಷಕ ಮಂಜುನಾಥ್ ನಾಯಕ್ ಹಲ್ಲೆಗೆ ಒಳಗಾದವರು. ಸಂಜೆ ಹೊತ್ತಿಗೆ ಶಿಕ್ಷಕ ಮಂಜುನಾಥ್ ನಾಯಕ್ ಕಾಲೇಜು ಬಳಿ ರಸ್ತೆ ದಾಟುವಾಗ ಕಿಡಿಗೇಡಿಗಳು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಬನಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Comment

Your email address will not be published. Required fields are marked *