Ad Widget .

ರಕ್ಷಣೆಗೆ ಬರಲೇ ಇಲ್ಲ ಸೂಪರ್ ಹೀರೋ| ವೆಬ್ ಸರಣಿ‌ ನೋಡಿ 11ನೇ ಮಹಡಿಯಿಂದ ಹಾರಿದ‌ ಬಾಲಕ ಸಾವು

Ad Widget . Ad Widget .

ಸಮಗ್ರ ಡಿಜಿಟಲ್ ಡೆಸ್ಕ್: ವೆಬ್ ಸರಣಿಗೆ ಅಡಿಕ್ಟ್ ಆಗಿದ್ದ ಬಾಲಕನೊಬ್ಬ ಕಟ್ಟಡದಿಂದ ಕೆಳಗೆ ಹಾರಿ ಪ್ರಾಣ ಬಿಟ್ಟ ಆಘಾತಕಾರಿ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. 12 ವರ್ಷದ ಬಾಲಕ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಹಾರಿದ್ದಾನೆ.

Ad Widget . Ad Widget .

ಪ್ಲಾಟಿನಂ ಎಂಡ್ ವೆಬ್ ಸರಣಿಯಲ್ಲಿ ತೋರಿಸಿದಂತೆ, ನನ್ನನ್ನು ರಕ್ಷಿಸಲು ಸೂಪರ್‌ ಹೀರೋ ಬರುತ್ತಾನೆಂದು ಬಾಲಕ ನಂಬಿದ್ದಾನೆ. ಇದನ್ನು ಪರೀಕ್ಷಿಸಲು ಆತ ಮೇಲಿಂದ ಹಾರಿದ್ದಾನೆ ಎನ್ನಲಾಗಿದೆ.

ಪೋಲೀಸರ ಪ್ರಕಾರ, ಈ ಜಪಾನೀಸ್ ಧಾರಾವಾಹಿಯು ಕಾಲ್ಪನಿಕ ಕಥೆಯನ್ನು ಆಧರಿಸಿದೆ. ಇದರಲ್ಲಿ ಹದಿಹರೆಯದ ನಾಯಕನು ಕಟ್ಟಡದಿಂದ ಜಿಗಿಯುತ್ತಾನೆ. ಆತನನ್ನು ಪಕ್ಷಿಯೊಂದು ರಕ್ಷಿಸುತ್ತದೆ. ನಂತ್ರ ಆತನಿಗೆ ಮಾಂತ್ರಿಕ ಶಕ್ತಿ ದೊರೆಯುತ್ತದೆ. ಇದರ ಗುಂಗಿನಲ್ಲಿಯೇ ಇದ್ದ ಬಾಲಕ, ಸರಣಿಯಲ್ಲಿ ತೋರಿಸಿದಂತೆ ತಾನೂ ಮಾಡಲು ಹೋಗಿದ್ದಾನೆ. ಪ್ರಾಥಮಿಕ ತನಿಖೆಯ ನಂತರ ಬಾಲಕ ಧಾರಾವಾಹಿ ನೋಡುವ ಚಟಕ್ಕೆ ಬಲಿಯಾಗಿದ್ದಾನೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಬಾಲಕನ ಮರಣೋತ್ತರ ಪರೀಕ್ಷೆ ಮಾಡಲಾಗ್ತಿದೆ. ಘಟನೆ ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನ ಫೂಲ್ ಬಗಾನ್ ಪ್ರದೇಶದ ಕೆನಾಲ್ ಸರ್ಕ್ಯುಲರ್ ರಸ್ತೆಯಲ್ಲಿರುವ ಉನ್ನತ ಮಟ್ಟದ ವಸತಿ ಸಂಕೀರ್ಣದಲ್ಲಿ ನಡೆದಿದೆ.

12 ವರ್ಷದ ಬಿರಾಜ್ ಎಂಬ ಪುಟ್ಟ ಬಾಲಕ ಕುಟುಂಬದ ಸದಸ್ಯರೆಲ್ಲರೂ ಮನೆಯಲ್ಲಿ ಸರಸ್ವತಿ ಪೂಜೆಯಲ್ಲಿ ನಿರತರಾಗಿದ್ದಾಗ ಟೆರೇಸ್ ನಿಂದ ಹಾರಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಆತ ಪ್ರಾಣ ಬಿಟ್ಟಿದ್ದಾನೆಂದು ವೈದ್ಯರು ಹೇಳಿದ್ದಾರೆ.

Leave a Comment

Your email address will not be published. Required fields are marked *