Ad Widget .

ಮದ್ರಸಾ ಉಸ್ತಾದ್ ನಿಂದ‌ ಬಾಲಕಿಯರಿಗೆ ಲೈಂಗಿಕ ಕಿರುಕುಳ| ಗುರುವಿಲ್ಲದ ವಿದ್ಯೆ ಕಲಿಸಲು ಹೊರಟ ಕಾಮುಕ ಗುರು!!

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್ : ಮದ್ರಸಾದಲ್ಲಿ ಮಕ್ಕಳಿಗೆ ವಿದ್ಯೆ ಕಲಿಸಬೇಕಾದ ಗುರುವೊಬ್ಬ ಕಾಮಪಾಠ‌ ಮಾಡಿದ ಆರೋಪ ಕೇಳಿ ಬಂದಿದ್ದು, ಈತನ ಕಾಮುಕತನಕ್ಕೆ ಅಪ್ರಾಪ್ತ ಬಾಲಕಿಯರು ಬಲಿಯಾಗಿದ್ದಾರೆ.

Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಶಂಶುಲ್ ಹುದಾ ಮದ್ರಸಾ ಶಾಲೆ, ಕುಂಡಡ್ಕ ಇಲ್ಲಿನ ಉಸ್ತಾದ್ ಸಿರಾಜುದ್ದೀನ್ ಮದನಿ ಎಂಬಾತ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತಿಲ ಗ್ರಾಮದ ಕುಂಡಡ್ಕ ಶಂಶುಲ್ ಹುದಾ ಮದ್ರಸಾ ಶಾಲೆಯಲ್ಲಿ ಉಸ್ತಾದ್ ಆಗಿರುವ‌ ಮದನಿ ಈ ಕೃತ್ಯ ಎಸಗಿದ್ದು ಕಳೆದ 28 ನೇ ತಾರೀಖಿನಂದು ರಾತ್ರಿಯ ವೇಳೆ ಶಾಲೆ ಮುಗಿಸಿ ಮನೆಗೆ ಬಂದ ಅಪ್ರಾಪ್ತ ಬಾಲಕಿಯರಿಬ್ಬರು ತಾಯಿಗೆ ಉಸ್ತಾದ್ ಮಾಡಿರುವ ನೀಚ ಕೆಲಸದ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಹೆಣ್ಣು ಮಕ್ಕಳು ಧರಿಸಿದ್ದ ಬಟ್ಟೆ ಸರಿಸಿ ಮೈ ಮುಟ್ಟಿ ದೇಹವೆಲ್ಲ ಸವರಿದ್ದಲ್ಲದೇ ಅಪ್ಪಿ ಹಿಡಿದಿರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಏನಾದರೂ ಕಾರಣ ಹೇಳಿ ಉಸ್ತಾದ್ ನ ರೂಮಿಗೆ ಕರೆಸಿಕೊಂಡು ಜನನಾಂಗವನ್ನು ಮುಟ್ಟಿಸುತ್ತಾರೆ ಎಂದು ದೂರಿದ್ದಾರೆ.‌ ಕಳೆದ ಒಂದು ವರ್ಷದಿಂದ ಈ ರೀತಿ ಅಸಭ್ಯವಾಗಿ ಉಸ್ತಾದ್ ಸಿರಾಜುದ್ದೀನ್ ಮದನಿ ವರ್ತಿಸಿರುವುದಾಗಿ ಹೆಣ್ಣು ಮಕ್ಕಳು ಹೇಳಿದ್ದಾರೆ‌ ಎನ್ನಲಾಗಿದೆ.
ಸದ್ಯ ಆರೋಪಿ ಉಸ್ತಾದ್ ಸಿರಾಜುದ್ದೀನ್ ಮದನಿ ವಿರುದ್ಧ ಭಾರತೀಯ ದಂಡ ಸಂಹಿತೆ 1860 (U/s -354 A ಹಾಗೂ 2012 ರ ಕಾಯ್ದೆಯಡಿ ಪುತ್ತೂರು ಮಹಿಳಾ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *