Ad Widget .

‘ಮುಸ್ಲಿಂ ಹೆಣ್ಮಕ್ಳೇ ಹೆದರಬೇಡಿ, ಮುನ್ನುಗ್ಗಿ’; ಹಿಜಾಬ್ ವಿವಾದ ಕುರಿತು ಹಿಂದೂ ಸಹೋದರಿ ಹೇಳೋದೇನು ಗೊತ್ತಾ?

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್ ಕುರಿತ ಮೇಲಾಟಗಳು ತಾರಕಕ್ಕೆ ಏರುತ್ತಿರುವಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಗಳ ಚರ್ಚೆ ಜೋರಾಗುತ್ತಿದೆ. ಕೆಲವು ಮಂದಿ ಹಿಜಾಬ್ ಕುರಿತು ಸಮರ್ಥನೆ ಮಾಡಿಕೊಂಡರೆ ಮತ್ತೆ ಹಲವರು ಇದರ ವಿರುದ್ದ ಮಾತನಾಡುತ್ತಿದ್ದಾರೆ.

Ad Widget . Ad Widget .

ಈ ನಡುವೆ ತರಗತಿಯಲ್ಲಿ ಹಿಜಾಬ್ ಧಾರಣೆ ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುತ್ತಾ‌ ಬರುತ್ತಿದ್ದು, ಕಾಲೇಜು ಮುಖ್ಯಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಸಮವಸ್ತ್ರ ಕುರಿತು ಕಠಿಣ ಆದೇಶ ತಂದರೂ ಅದ್ಯಾವುದಕ್ಕೂ ಕಿಮ್ಮತ್ತು ನೀಡದೆ ವಿದ್ಯಾರ್ಥಿಗಳು ಬಣ್ಣಗಳ ಹೋರಾಟದಲ್ಲಿ ತೊಡಗಿರುವುದು ಶಿಕ್ಷಣ ವ್ಯವಸ್ಥೆಯನ್ನು ಅಲುಗಾಡಿಸಿದೆ.

Ad Widget . Ad Widget .

ಈ ನಡುವೆ ಮುಸ್ಲಿಂ ಹೆಣ್ಮಕ್ಕಳ ಹೋರಾಟದ ಕುರಿತಂತೆ ಹಿಂದೂ ಯುವತಿಯೋರ್ವಳ ವಿಡಿಯೋ ಅಭಿಪ್ರಾಯ ವೈರಲ್ ಆಗಿದೆ. ಮುಸ್ಲಿಂ ಹೆಣ್ಮಕ್ಕಳ ಹೋರಾಟಕ್ಕೆ ಜೊತೆಯಾಗಿ ನಾವಿದ್ದೇವೆ ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದು, ಮುಸ್ಲಿಂ ವ್ಯವಸ್ಥೆಗಳು ಮತ್ತು ಸಮುದಾಯದ ಕುರಿತು ಮಾತನಾಡಿದ್ದಾಳೆ.

ವೈರಲ್ ಆದ ವಿಡಿಯೋ ಇಲ್ಲಿದೆ…

Leave a Comment

Your email address will not be published. Required fields are marked *