ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್ ಕುರಿತ ಮೇಲಾಟಗಳು ತಾರಕಕ್ಕೆ ಏರುತ್ತಿರುವಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಗಳ ಚರ್ಚೆ ಜೋರಾಗುತ್ತಿದೆ. ಕೆಲವು ಮಂದಿ ಹಿಜಾಬ್ ಕುರಿತು ಸಮರ್ಥನೆ ಮಾಡಿಕೊಂಡರೆ ಮತ್ತೆ ಹಲವರು ಇದರ ವಿರುದ್ದ ಮಾತನಾಡುತ್ತಿದ್ದಾರೆ.
ಈ ನಡುವೆ ತರಗತಿಯಲ್ಲಿ ಹಿಜಾಬ್ ಧಾರಣೆ ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುತ್ತಾ ಬರುತ್ತಿದ್ದು, ಕಾಲೇಜು ಮುಖ್ಯಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಸಮವಸ್ತ್ರ ಕುರಿತು ಕಠಿಣ ಆದೇಶ ತಂದರೂ ಅದ್ಯಾವುದಕ್ಕೂ ಕಿಮ್ಮತ್ತು ನೀಡದೆ ವಿದ್ಯಾರ್ಥಿಗಳು ಬಣ್ಣಗಳ ಹೋರಾಟದಲ್ಲಿ ತೊಡಗಿರುವುದು ಶಿಕ್ಷಣ ವ್ಯವಸ್ಥೆಯನ್ನು ಅಲುಗಾಡಿಸಿದೆ.
ಈ ಎಲ್ಲಾ ಘಟನೆಗಳ ಕುರಿತಂತೆ ಮುಸ್ಲಿಂ ಯುವತಿಯೋರ್ವಳು ಪೇಸ್ ಬುಕ್ ನಲ್ಲಿ ಲೈವ್ ವಿಡಿಯೋ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿರುವುದು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ದೇಶ ಮತ್ತು ಧರ್ಮದ ಆಚರಣೆ ಕುರಿತು ಮಾತನಾಡಿದ್ದು, ಧರ್ಮಕ್ಕಿಂತ ದೇಶ ಮುಖ್ಯ ಎಂದಿದ್ದಾಳೆ.