Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಫೆ.6 ರಿಂದ 12ರವರೆಗಿನ ನಿಮ್ಮ ದ್ವಾದಶ ರಾಶಿಗಳ ವಾರ ಭವಿಷ್ಯ ಮತ್ತು ಗೋಚಾರಫಲ ಇಲ್ಲಿದೆ.

Ad Widget . Ad Widget .

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮುನ್ನಡೆಯನ್ನು ಕಾಣಬಹುದು. ಮರಮುಟ್ಟುಗಳ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಪಾರವಾಗಿ ಉತ್ತಮ ಲಾಭವಿರುತ್ತದೆ. ನಿಮ್ಮ ಸತತ ಪ್ರಯತ್ನಗಳಿಗೆ ನಿಧಾನವಾದರೂ ಪ್ರತಿಫಲ ಸಿಗುತ್ತದೆ. ಮಾತನಾಡುವಾಗ ಒರಟುತನ ಖಂಡಿತ ಬೇಡ. ಆಶ್ಚರ್ಯಕರ ರೀತಿಯಲ್ಲಿ ಅನಿರೀಕ್ಷಿತ ಮೂಲದಿಂದ ಧನ ಸಹಾಯ ಒದಗುತ್ತದೆ. ಸಂವಹನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಗೌರವ ದೊರೆಯುತ್ತದೆ. ಕೃಷಿಕರ ಆದಾಯದಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವನ್ನು ಕಾಣಬಹುದು. ಉಪನ್ಯಾಸಕರಿಗೆ ಮುತ್ತು ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ. ವಿದೇಶಿ ಹಣ ವಿನಿಮಯ ಮಾಡುವವರಿಗೆ ವ್ಯವಹಾರ ಹೆಚ್ಚುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.

Ad Widget . Ad Widget .

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಆತ್ಮಾಭಿಮಾನ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಮನೆಯ ನವೀಕರಣ ಅಥವಾ ವಿಸ್ತರಣೆಯನ್ನು ಮಾಡುವ ಸಾಧ್ಯತೆ ಇದೆ. ನಿಮ್ಮ ವಿಚಾರಗಳನ್ನು ಸಾರ್ವಜನಿಕವಾಗಿ ಮಂಡಿಸಿ ಜನರ ಮನಸ್ಸನ್ನು ಗೆಲ್ಲುವಿರಿ. ಗೆಳೆಯರೊಂದಿಗೆ ಪ್ರವಾಸ ಹೋಗಲು ನಿರ್ಧಾರ ಮಾಡುವಿರಿ. ವಿದೇಶಿ ಕಮಿಷನ್ ವ್ಯವಹಾರ ಮಾಡುವವರಿಗೆ ಹೆಚ್ಚು ಸಂಪಾದನೆ ಇರುತ್ತದೆ. ಕಷ್ಟಗಳು ಬಂದರೂ ಸಹ ಅವುಗಳ ಜೊತೆ ಹೊಂದಿಕೊಂಡು ಹೋಗುವುದರಿಂದ ಅಷ್ಟು ಬಾಧಿಸುವುದಿಲ್ಲ. ಮಕ್ಕಳಿಗೆ ನಿಮ್ಮ ವ್ಯಾಪಾರದ ಒಳಗುಟ್ಟುಗಳನ್ನು ತಿಳಿಸಿಕೊಡಲು ಪ್ರಯತ್ನ ಪಡುವಿರಿ. ಒದಗಿಬಂದ ಅವಕಾಶಗಳಲ್ಲಿ ಉತ್ತಮವಾಗಿರುವ ಅವಕಾಶವನ್ನು ಬಳಸಿಕೊಳ್ಳಿ. ರೇಷ್ಮೆ ಬಟ್ಟೆ ನೇಕಾರರಿಗೆ ಉತ್ತಮ ಬೇಡಿಕೆ ಬಂದು ಹೊಸ ವಿನ್ಯಾಸಗಳಿರುವ ವಸ್ತ್ರಗಳನ್ನು ನೇಯುವ ಅವಕಾಶವಿರುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ವಿಲಾಸಿ ಜೀವನದಿಂದ ಸ್ವಲ್ಪಮಟ್ಟಿಗೆ ದೂರವಿರುವುದು ಬಹಳ ಒಳ್ಳೆಯದು. ಕಬ್ಬಿಣ ಮತ್ತು ಸಿಮೆಂಟ್ ತಯಾರಕರಿಗೆ ಮತ್ತು ಮಾರಾಟಗಾರರಿಗೆ ಉತ್ತಮ ವ್ಯವಹಾರವಿರುತ್ತದೆ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ದ್ರವರೂಪದ ವಸ್ತುಗಳನ್ನು ವ್ಯಾಪಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಸ್ನೇಹಿತರಿಂದ ವ್ಯವಹಾರದಲ್ಲಿ ಸಾಕಷ್ಟು ತಿಳಿವಳಿಕೆ ಮತ್ತು ಎಚ್ಚರಿಕೆ ದೊರೆಯುತ್ತದೆ. ಸಂಗಾತಿಗೆ ತವರು ಮನೆಯಿಂದ ಸ್ಥಿರಾಸ್ತಿ ಸಿಗುವ ಸಾಧ್ಯತೆ ಇದೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಮಸಾಲೆ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ವಿಸ್ತರಿಸುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ನಾಲ್ಕು ಕಾಲಿನ ಪ್ರಾಣಿಗಳನ್ನು ಸಾಕಾಣಿಕೆ ಮಾಡಿ ಮಾರುವವರಿಗೆ ಲಾಭವಿರುತ್ತದೆ. ಧನ ಆದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಬಂಧು-ಮಿತ್ರರಿಂದ ಆಯೋಜಿಸಲ್ಪಟ್ಟ ಕುಟುಂಬ ಮಿಲನದಲ್ಲಿ ಭಾಗವಹಿಸುವಿರಿ. ತರಕಾರಿ ಮಾರಾಟ ಮಾಡುವವರಿಗೆ ಆದಾಯದಲ್ಲಿ ಸಾಕಷ್ಟು ಹೆಚ್ಚಳವಿರುತ್ತದೆ. ಪತ್ರಿಕೋದ್ಯಮಿಗಳಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಸಂಪನ್ಮೂಲದ ಅಭಿವೃದ್ಧಿಗಾಗಿ ಹತ್ತು ಹಲವು ಮಾರ್ಗಗಳನ್ನು ಹುಡುಕುವಿರಿ. ಹಲವು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಂತೋಷಪಡುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಶ್ರಮ ಹಾಕಬೇಕು. ಗುರುಹಿರಿಯರಿಗೆ ಗೌರವ ತೋರುವುದು ನಿಮಗೆ ಒಳಿತು. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಸ್ವಲ್ಪ ದಿನದ ಮಟ್ಟಿಗೆ ದೂರಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ವಿವಾಹ ಅಪೇಕ್ಷಿತರಿಗೆ ವಿವಾಹ ಸಂಬಂಧ ಒದಗುವ ಸಂದರ್ಭವಿದೆ. ವೃತ್ತಿಯಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆಯನ್ನು ಕಾಣಬಹುದು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹೆಚ್ಚಿನ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಆಸ್ತಿ ಮಾರಾಟದಿಂದ ಹೆಚ್ಚಿನ ಲಾಭ ಬರುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶ ಇರುತ್ತದೆ. ಪ್ರೇಮಿಗಳಿಗೆ ಅವರ ಹಿರಿಯರ ಅಭಯ ದೊರೆತು ಸಂತೋಷವಾಗುತ್ತದೆ. ಆಹಾರ ವ್ಯತ್ಯಾಸಗಳಿಂದ ಅನಾರೋಗ್ಯ ಬರಬಹುದು. ವಿದೇಶದಲ್ಲಿರುವ ಮಕ್ಕಳು ತಮ್ಮ ಹಿರಿಯರನ್ನು ಭೇಟಿಯಾಗುವ ಅವಕಾಶವಿರುತ್ತದೆ. ಪಾರಂಪರಿಕ ಆಸ್ತಿ ಚಿಕಿತ್ಸಕರಿಗೆ ಬೇಡಿಕೆ ಹೆಚ್ಚುತ್ತದೆ. ತಾಯಿಗಾಗಿ ಹೆಚ್ಚಿನ ಹಣವನ್ನು ಕೊಡುವಿರಿ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಮಿತ್ರರಿಂದ ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಕಾರ ದೊರೆಯುತ್ತದೆ. ಆರ್ಥಿಕತೆಯು ಚೇತರಿಕೆಯತ್ತ ಸಾಗುತ್ತದೆ. ವೃತ್ತಿಯಲ್ಲಿ ಸ್ಥಾನಮಾನದ ಬಗ್ಗೆ ಹಿರಿಯ ಅಧಿಕಾರಿಗಳೊಡನೆ ಚರ್ಚೆ ಮಾಡುವಿರಿ. ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ಸ್ಥಗಿತಗೊಂಡಿರುವ ಅಧ್ಯಯನವನ್ನು ಈಗ ಪುನಃ ಆರಂಭಿಸಬಹುದು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬಯಸುವವರಿಗೆ ಅವಕಾಶಗಳು ಸಿಗುತ್ತವೆ. ಸಂಗೀತದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬದವರಿಗೆ ನಿಮ್ಮ ಮೇಲಿರುವ ಸಂಶಯ ಹೆಚ್ಚಾಗುವ ಮುನ್ನ ಪರಿಹರಿಸಿಕೊಳ್ಳಿರಿ. ವ್ಯವಹಾರಗಳಲ್ಲಿ ಒಪ್ಪಂದ ಮೂಡಿ ನಿಮ್ಮ ಪಾಲಿನ ಲಾಭಾಂಶ ನಿಮಗೆ ದೊರಕುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಆರಕ್ಷಕ ಠಾಣೆಯಲ್ಲಿರುವ ಕೆಲವರಿಗೆ ಬಡ್ತಿ ದೊರೆಯಬಹುದು. ಕ್ರೀಡಾಪಟುಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಹಿರಿಯ ಆಡಳಿತಗಾರರು ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಮುಂದುವರಿಯುವುದು ಉತ್ತಮ. ಉದ್ದಿಮೆಯ ಅಭಿವೃದ್ಧಿಗಾಗಿ ಕಾರ್ಮಿಕರ ಜೊತೆ ಮಾತುಕತೆ ನಡೆಸಿ ಉತ್ತಮ ಫಲಿತಾಂಶವನ್ನು ಕಾಣುವಿರಿ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ಆಸ್ತಿ ಸಂಬಂಧಿತ ವಿವಾದಗಳು ಕಡಿಮೆ ಆಗುತ್ತವೆ. ಮಕ್ಕಳ ಅಭಿವೃದ್ಧಿ ಬಗ್ಗೆ ಉತ್ತಮ ಸಂದೇಶಗಳು ಬರುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ದೂರದೂರಿಗೆ ನಿಮ್ಮ ವ್ಯವಹಾರ ವಿಸ್ತರಣೆಯ ಸಲುವಾಗಿ ಮಾಡುವ ಪ್ರಯಾಣ ಉತ್ತಮ ಫಲಿತಾಂಶವನ್ನು ಕೊಡುತ್ತದೆ. ರಾಸಾಯನಿಕ ಮತ್ತು ಔಷಧಿ ವ್ಯಾಪಾರವನ್ನು ಮಾಡುವವರ ವ್ಯವಹಾರದಲ್ಲಿ ಹೆಚ್ಚಳವನ್ನು ಕಾಣಬಹುದು. ಚಿನ್ನದ ಆಭರಣಗಳನ್ನು ಮಾರಾಟ ಮಾಡುವವರ ವ್ಯವಹಾರ ಹೆಚ್ಚುತ್ತದೆ. ಭವಿಷ್ಯದ ಯೋಜನೆಗಳ ಬಗ್ಗೆ ಪೂರ್ವತಯಾರಿ ನಡೆಸುವಿರಿ. ದಿನಸಿ ವ್ಯಾಪಾರಿಗಳಿಗೆ ಸಾಕಷ್ಟು ವ್ಯಾಪಾರ ಇರುತ್ತದೆ. ಧನಾದಾಯ ನಿಮ್ಮ ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ಬರಹಗಾರರಿಗೆ ಉತ್ತಮ ಗೌರವ ದೊರೆತು ಆದಾಯ ಹೆಚ್ಚುತ್ತದೆ. ಕೆಲವೊಂದು ಕಠಿಣ ಕಾರ್ಯಗಳು ಈಗ ಸರಾಗವಾಗಿ ಆಗುತ್ತವೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಹೆಚ್ಚಿನ ಯಶಸ್ಸು ದೊರೆತು ಲಾಭಾಂಶ ಬರುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1 )

ನಿಮ್ಮ ಇಷ್ಟದಂತೆ ಕೆಲಸ ಕಾರ್ಯಗಳು ಆಗುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸದ್ಯದಲ್ಲೇ ಅನಿವಾರ್ಯವಾಗಿ ನಿಮ್ಮ ಸ್ನೇಹಿತನ ಬೆನ್ನಿಗೆ ನೀವು ನಿಲ್ಲಬೇಕಾದ ಸಂದರ್ಭ ಬರುತ್ತದೆ. ಕೃಷಿಕರ ಆದಾಯದಲ್ಲಿ ಸಾಕಷ್ಟು ಹೆಚ್ಚಳವನ್ನು ಕಾಣಬಹುದು. ಸ್ಥಿರ ಆಸ್ತಿಯ ವಿಷಯದಲ್ಲಿ ದೃಢ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಕೆಲವು ಸರ್ಕಾರಿ ನೌಕರರಿಗೆ ಇತರೆ ಮೂಲಗಳಿಂದ ಆದಾಯ ಬರುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡುವ ಅವಕಾಶ ದೊರೆಯುತ್ತದೆ. ವಿದ್ಯುತ್ ಗುತ್ತಿಗೆದಾರರಿಗೆ ನಿಂತಿದ್ದ ಹಣ ಬರಲಾರಂಭಿಸುತ್ತದೆ. ಉದ್ಯೋಗವನ್ನು ಅರಸುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ವಾಣಿಜ್ಯ ಬೆಳೆಗಳನ್ನು ಬೆಳೆಯುವವರಿಗೆ ಹೆಚ್ಚಿನ ಹಣ ಬರುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ತೋರುವರು. ಸಂಶೋಧನಾ ವೃತ್ತಿಯಲ್ಲಿರುವವರಿಗೆ ಗೌರವಾದರಗಳು ದೊರಕುವ ಸಾಧ್ಯತೆಗಳಿವೆ. ನೌಕರಿಯಲ್ಲಿ ಶುಭ ಸಮಾಚಾರವನ್ನು ಕೇಳುವಿರಿ. ವಿಮಾನ ತಂತ್ರಜ್ಞರಿಗೆ ಬೇಡಿಕೆ ಇರುವುದು. ಸಹೋದ್ಯೋಗಿಗಳ ನೆರವಿನಿಂದ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತವೆ. ಅದಿರನ್ನು ವಿದೇಶಕ್ಕೆ ರಫ್ತು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುವ ಸಂದರ್ಭವಿದೆ. ವಾರದ ಮಧ್ಯದಲ್ಲಿ ಅನಿರೀಕ್ಷಿತ ದೂರ ಪ್ರಯಾಣ ಎದುರಾಗಬಹುದು. ಕಟ್ಟಡ ನಿರ್ಮಾಣಕಾರರಿಗೆ ಬರಬೇಕಾಗಿದ್ದ ಬಾಕಿ ಹಣ ಬರುವ ಸಾಧ್ಯತೆಗಳಿವೆ. ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಉತ್ತಮ ಆದಾಯ ಇರುತ್ತದೆ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಬದುಕಿಗೊಂದು ಹೊಸ ಆಯಾಮವನ್ನು ಕಂಡುಕೊಳ್ಳುವಿರಿ. ನಿಮ್ಮ ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಇರುತ್ತದೆ. ವ್ಯಾಜ್ಯವೊಂದರ ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆಯನ್ನು ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಹಣಕಾಸಿನ ಅಡಚಣೆಗಳು ಸ್ವಲ್ಪ ಕಡಿಮೆ ಅನಿಸುತ್ತವೆ. ಹಿರಿಯರಿಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ತಾಯಿಯ ಜೊತೆ ಸಂಬಂಧ ಸುಧಾರಿಸಬಹುದು. ಹೈನುಗಾರಿಕೆ ಮಾಡುವವರೆಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಅಪೇಕ್ಷಿತರಿಗೆ ಸಂತಾನ ಭಾಗ್ಯ ಆಗುವ ಸಾಧ್ಯತೆಗಳಿವೆ. ವಿದೇಶದಲ್ಲಿರುವವರು ಸ್ಥಿರಾಸ್ತಿಯನ್ನು ಈಗ ಮಾಡಬಹುದು. ಧರ್ಮ ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿ ಅದನ್ನು ಮುಂದುವರೆಸುವಿರಿ. ಹಣದ ಒಳಹರಿವು ಸಾಧಾರಣವಾಗಿರುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿ ತಪ್ಪು ತೀರ್ಮಾನಗಳಿಂದ ವೈಮನಸ್ಯ ಉಂಟಾಗಬಹುದು. ಸ್ಟೇಷನರಿ ಮಾರಾಟಗಾರರಿಗೆ ಸಾಮಾನ್ಯ ವ್ಯಾಪಾರ ಇರುತ್ತದೆ. ದಿನಬಳಕೆ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಕಿರುಪ್ರವಾಸದ ಯೋಜನೆ ಒಂದನ್ನು ಹಾಕುವಿರಿ. ಸಮಾಜಸೇವೆಯನ್ನು ಮಾಡುವವರಿಗೆ ಹೆಚ್ಚಿನ ಓಡಾಟವಿರುತ್ತದೆ. ಸ್ವಯಂಉದ್ಯೋಗವನ್ನು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಅನುಕೂಲತೆಗಳು ಒದಗುತ್ತವೆ. ಕ್ರೀಡಾಪಟುಗಳಿಗೆ ಉತ್ತಮ ಅವಕಾಶದ ಜೊತೆಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *