Ad Widget .

ಪೊಲೀಸರು ಕ್ಯಾಪ್ ಹಾಕಲ್ಲ, ಟೋಪಿ ಹಾಕ್ತೇವೆ ಅಂದ್ರೆ ನಡೆಯುತ್ತಾ? ಇದೂ ಹಂಗೇನೆ… ಹಿಜಾಬ್ ವಿವಾದಕ್ಕೆ ಸಚಿವ ನಾಗೇಸ್ ತಿರುಗೇಟು

ಸಮಗ್ರ ನ್ಯೂಸ್ ಡೆಸ್ಕ್: ಶಾಲಾ -‌ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸುವ ಮೂಲಕ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಲು ಯತ್ನಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸರ್ಕಾರದ ಆದೇಶದಂತೆ ಸಮವಸ್ತ್ರ ಪಾಲಿಸಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.

Ad Widget . Ad Widget .

ಮೈಸೂರಿನಲ್ಲಿ ಮಾತನಾಡಿದ ಸಚಿವರು, ಈಗಾಗಲೇ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿದೆ. ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಒಂದು ವೇಳೆ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಂರು ನಾವು ಕ್ಯಾಪ್ ಹಾಕಲ್ಲ, ಟೋಪಿ ಹಾಕ್ತೀವಿ ಎಂದರೆ ನಡೆಯುತ್ತಾ? ಇದು ಕೂಡ ಅದೇ ರೀತಿ. ಸಮವಸ್ತ್ರ ಆದೇಶ ಪಾಲಿಸಬೇಕು ಎಂದರು.

Ad Widget . Ad Widget .

Leave a Comment

Your email address will not be published. Required fields are marked *