ಸಮಗ್ರ ನ್ಯೂಸ್ ಡೆಸ್ಕ್: ಗಾನಕೋಗಿಲೆ ಲತಾ ಮಂಗೇಶ್ಕರ್(92) ಇಂದು( ಪೆ.6) ಬೆಳಗ್ಗೆ ನಿಧನರಾಗಿದ್ದಾರೆ.
ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ( ಫೆ.6) ಕೊನೆಯುಸಿರೆಳೆದಿದ್ದಾರೆ. ಜನವರಿ 8 ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದ ಲತಾ ಮಂಗೇಶ್ಕರ್ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಮಹಾರಾಷ್ಟ್ರದ ಇಂದೋರ್ ನಲ್ಲಿ 29 ಸೆಪ್ಟಂಬರ್ 1929 ಜನಿಸಿದ ಇವರು ತನ್ನ ಏಳು ದಶಕಗಳ ಸುಧೀರ್ಘ ಸಂಗೀತ ಲೋಕದಲ್ಲಿ ಹಲವು ಸುಪ್ರಸಿದ್ದ ಹಾಡುಗಳನ್ನು ಹಾಡಿದ್ದರು. ಇವರ ಕೋಗಿಲೆ ಕಂಠದ ಗಾನಕ್ಕೆ ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.