Ad Widget .

ಎಬಿವಿಪಿ ಘಟಕ ಬಂಟ್ವಾಳ ವತಿಯಿಂದ ‌ತಾಲೂಕು ಅಭ್ಯಾಸ ವರ್ಗ, ಪದ್ಮಶ್ರೀ ಮಹಾಲಿಂಗ ನಾಯ್ಕರಿಗೆ ಸನ್ಮಾನ

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಇದರ ತಾಲೂಕು ಅಭ್ಯಾಸ ವರ್ಗವು ಪೆಬ್ರವರಿ 05 ರಂದು ಬಿ.ಸಿ ರೋಡಿನ ಗೀತಾಂಜಲಿ ಸಬಾ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಇಂಡಿಯಾನ ಆಸ್ಪತ್ರೆಯ ಹಿರಿಯ ವೈದ್ಯ ಹಾಗೂ ನಿವೃತ್ತ ಯೋಧರಾದ ಡಾ. ವೆಂಕಟೇಶ್ ಕುಂಪಲ ಇವರು ಉದ್ಘಾಟಿಸಿ ಮಾತನಾಡಿದರು.

Ad Widget . Ad Widget .

ವೇದಿಕೆಯಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶ್ರೀ ಲಕ್ಷ್ಮೀ ಮಠದಮೂಲೆ, ಬಂಟ್ವಾಳ ನಗರ ಕಾರ್ಯದರ್ಶಿ ನಾಗರಾಜ್ ಶೆಣೈ ಉಪಸ್ಥಿತರಿದ್ದರು. ಅಭ್ಯಾಸ ವರ್ಗದ ಮೊದಲ ಅವದಿಯಾದ ಸೈದ್ಧಾಂತಿಕ ಭೂಮಿಕೆ ಅವಧಿಯನ್ನು ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ ಇವರ ನಡೆಸಿಕೊಟ್ಟರು.

ಎರಡನೇ ಅವಧಿ ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವವನ್ನು ಹಿರಿಯ ಕಾರ್ಯಕರ್ತರಾದ ಸಂದೇಶ್ ರೈ ಮಜಕ್ಕಾರ್ ಇವರು ನಡೆಸಿಕೊಟ್ಟರು.
ಅಭ್ಯಾಸ ವರ್ಗದ ಮೂರನೇ ಅವಧಿ ಹೋರಾಟವನ್ನು ಚಟುವಟಿಕೆಗಳ ಮೂಲಕ ಪ್ರಾತ್ಯಕ್ಷಿಕೆಯ ಮೂಲಕ ಮಂಗಳೂರು ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ ನಡೆಸಿಕೊಟ್ಟರು.

ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಬಿವಿಪಿ ತಾಲೂಕು, ಹಾಗೂ ಜಿಲ್ಲಾ ಘಟಕಗಳ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Comment

Your email address will not be published. Required fields are marked *