Ad Widget .

ರಸ್ತೆ ನಿಯಮ ಉಲ್ಲಂಘಿಸುವ ಪ್ರಯಾಣಿಕರ ಗಮನಕ್ಕೆ

Ad Widget . Ad Widget .

ಇನ್ನುಮುಂದೆ ಪೊಲೀಸರು ರಸ್ತೆಯಲ್ಲಿ ವಾಹನಗಳಿಗೆ ಅಡ್ಡ ಹಾಕಲ್ಲ ! ಆದರೇ…? ಮುಂದೆ ಓದಿ

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಇನ್ಮುಂದೆ ಪೊಲೀಸರು ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಅಡ್ಡ ಹಾಕುವುದಿಲ್ಲ. ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಚಾಲಕ ಮತ್ತು ಸವಾರರಿಂದ ದಂಡ ವಸೂಲಿ ಮಾಡಲು ಸಂಚಾರ ಪೊಲೀಸರು ರಸ್ತೆಗಳ ಬದಲು ಇನ್ಮುಂದೆ ಆರ್​ಟಿಒ ಕಚೇರಿ ಮುಂದೆ ಕಾರ್ಯಾಚರಣೆ ನಡೆಸಲಿದ್ದಾರೆ.

ರಸ್ತೆಗಳಲ್ಲಿ ವಾಹನಗಳನ್ನು ತಡೆದು ಹಳೇ ಪ್ರಕರಣಗಳ ಪರಿಶೀಲನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಹೊಸ ಮಾದರಿ ಅಳವಡಿಕೆಗೆ ಪೊಲೀಸ್​ ಇಲಾಖೆ ತೀರ್ಮಾನಿಸಿದೆ.

ಪ್ರತಿ ಆರ್​ಟಿಒ ಕಚೇರಿ ಮುಂದೆ ಎಸ್​ಐ, ಎಎಸ್​ಐ ಹಾಜರಾಗಿ ಡಿಎಲ್​, ಫಿಟ್​ನೆಸ್​ ಸರ್ಟಿಫಿಕೇಟ್​, ವಾಹನ ನೋಂದಣಿ, ಡಿಎಲ್​ ನವೀಕೃತ ಸೇರಿ ಇತರ ಕೆಲಸಕ್ಕೆ ಬರುವ ವಾಹನ ಸವಾರರ ಮತ್ತು ಚಾಲಕರು ಪಾವತಿಸಬೇಕಿರುವ ದಂಡವನ್ನು ವಸೂಲಿ ಮಾಡುವ ಯೋಜನೆ ರೂಪಿಸಿದ್ದಾರೆ.

Leave a Comment

Your email address will not be published. Required fields are marked *