Ad Widget .

ಕನ್ನಡ ಕಬೀರ, ಭಾವೈಕ್ಯತೆಯ ಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ ಇನ್ನಿಲ್ಲ

ಸಮಗ್ರ ನ್ಯೂಸ್ ಡೆಸ್ಕ್: ಭಾವೈಕ್ಯತೆ ಸಂದೇಶ ಸಾರುತ್ತಿದ್ದ ಸಂತ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ(82) ಅವರು ಇಂದು (ಫೆ.5) ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

Ad Widget . Ad Widget .

ತಾವು ಹೋದ ಕಡೆಯಲೆಲ್ಲ ಭಾವೈಕ್ಯತೆಯ ಸಂದೇಶವನ್ನು ಸಾರುತ್ತಿದ್ದ ಸುತಾರ‌ ಕನ್ನಡ ಕಬೀರ ಎಂದೇ ಹೆಸರಾಗಿದ್ದರು. ಕುರಾನ್, ಬೈಬಲ್, ಭಗವದ್ಗೀತೆ ಹಾಗೂ ಶರಣರ ತತ್ವಗಳ ಅಧ್ಯಯನ ಮಾಡಿದ್ದರು. ಪ್ರವಚನ, ಗೀತೆಗಳ ಮೂಲಕ ಜನರಲ್ಲಿ ಸಮಾನತೆ, ಧರ್ಮ ಸಹಿಷ್ಠುತೆ ಪಾಠವನ್ನು ಮಾಡುತ್ತಿದ್ದರು. ಇವರ ಸೇವೆಯನ್ನು ಮೆಚ್ಚಿ ಕೇಂದ್ರ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

Ad Widget . Ad Widget .

Leave a Comment

Your email address will not be published. Required fields are marked *