ಸಮಗ್ರ ಡಿಜಿಟಲ್ ಡೆಸ್ಕ್: ಸ್ವಂತ ಪತ್ನಿಯನ್ನು ಬೇರೆಯವರ ಜೊತೆ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡುತ್ತಾ ಹಣ ಸಂಪಾದನೆ ಮಾಡುವ ದಾರಿ ಹಿಡಿದಿದ್ದ ಪತಿಗೆ ಪತ್ನಿಯೂ ಸಾಥ್ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಇದೀಗ ಈ ವಿಕೃತ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೈಫ್ ಸ್ವಾಫಿಂಗ್ ದಂಧೆ ನಡೆಸುತ್ತಿದ್ದ ದಂಪತಿ ಹಣ ಸಂಪಾದನೆ ಮಾರ್ಗ ನೋಡಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಎಲೆಕ್ಟ್ರಾನಿಕ್ ಶಾಪ್ ಸೇಲ್ಸ್ ಮನ್ ಆಗಿರುವ ವಿನಯ್ ಕುಮಾರ್ ಈ ದಂಧೆ ನಡೆಸುತ್ತಿದ್ದನು. ಇವನಿಗೆ ಆತನ ಹೆಂಡತಿಯೇ ಸಾಥ್ ಕೊಟಿದ್ದಾಳೆ.
ವಿನಯ್ ಕುಮಾರ್ ಪತ್ನಿಯನ್ನು ಫ್ಯಾಂಟಸಿ ಸೆಕ್ಸ್ ಗೆ ಬಳಸುವ ಇಂಗಿತ ವ್ಯಕ್ತಪಡಿಸಿದ್ದಾನೆ. ಆಗ ಅದಕ್ಕೆ ವಿರೋಧ ವ್ಯಕ್ತಪಡಿಸದೇ ಹೆಂಡತಿ ಕೂಡ ಸಮ್ಮತಿಸಿದ್ದಳು. ಇಬ್ಬರ ಬಯಕೆ ಈಡೇರುವುದರ ಜೊತೆಗೆ ಆರ್ಥಿಕ ಲಾಭವೂ ಇದೆ ಎಂದು ಯೋಚಿಸಿದ್ದ ದಂಪತಿ, ಆನ್ ಲೈನ್ ಮೂಲಕ ಸಮಾನ ಮನಸ್ಕರಿಗೆ ಗಾಳ ಹಾಕುತ್ತಿದ್ದರು.
ವಿಕೃತ ಮನಸ್ಥಿತಿಯ ವಿನಯ್, ಟ್ವಿಟರ್ ಹಾಗೂ ಟೆಲಿಗ್ರಾಂ ನಲ್ಲಿ ಖಾತೆ ತೆರೆದು ಅಲ್ಲಿ ‘ವೈಫ್ ಸ್ವಾಪಿಂಗ್’ ದಂಧೆಗೆ ಆಹ್ವಾನಿಸುತ್ತಿದ್ದನು. ಇವನ ಬಲೆಗೆ ಹಲವಾರು ಮಿಕಗಳು ಬಿದ್ದಿದ್ದವು ಎನ್ನಲಾಗಿದೆ. ಇದರಿಂದ ಸಾಕಷ್ಟು ದುಡ್ಡು ಕೂಡ ಸಂಪಾದಿಸಿದ್ದಾರೆ.
ಈ ಪ್ರಕರಣದ ಬಗ್ಗೆ ತಿಳಿದ ಬೆಂಗಳೂರು ಆಗ್ನೆಯ ವಿಭಾಗದ ಸಿಇಎನ್ ಪೊಲೀಸರು, ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಧ್ಯ ಆರೋಪಿ ವಿನಯ್ ಕುಮಾರ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.