Ad Widget .

ಸುಳ್ಯ: ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಸುಳ್ಯ ತಾಲೂಕಿನ ಪ್ರಸಿದ್ಧ ನ್ಯಾಯವಾದಿ ಗುತ್ತಿಗಾರಿನ ಪೂಜಾರಿಕೋಡಿ ಹರೀಶ್‌ರವರ ಪುತ್ರಿ ನಿಹಾರಿಕಾ ( 13 ವರ್ಷ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.

Ad Widget . Ad Widget .

ಈಕೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು ಈ ಬಾರಿ ನವೋದಯ ಶಾಲೆಗೆ ಏಳನೇ ತರಗತಿಗೆ ಆಯ್ಕೆಯಾಗಿದ್ದಳು.

ಕೊರೋನ ಕಾರಣದಿಂದಾಗಿ ಶಾಲೆ ಆರಂಭಗೊಳ್ಳದೆ, ಮನೆಯಲ್ಲಿಯೇ ನವೋದಯದ ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿದ್ದಳು. ಇನ್ನು ಒಂದೆರಡು ದಿನಗಳಲ್ಲಿ ನವೋದಯ ಶಾಲೆ ಮತ್ತೆ ಆರಂಭಗೊಳ್ಳುವುದರಲ್ಲಿತ್ತು.

ಇಂದು ಬೆಳಿಗ್ಗೆ ತಂದೆ ಹರೀಶ್ ಪೂಜಾರಿಕೋಡಿಯವರು ಮನೆಯಿಂದ ಹೊರಟು ಸುಳ್ಯದ ಕಡೆಗೆ ಬಂದ ಸ್ವಲ್ಪ ಹೊತ್ತಲ್ಲೇ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಮನೆಯಲ್ಲಿದ್ದವರಿಗೆ ವಿಷಯ ಗೊತ್ತಾಗಿ ತಕ್ಷಣ ಹೋಗಿ ಹಗ್ಗದಿಂದ ಕೆಳಗಿಳಿಸಿ, ಗುತ್ತಿಗಾರಿಗೆ ಆಸ್ಪತ್ರೆಗೆ ಕರೆತಂದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮೇರೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು. ಆಸ್ಪತ್ರೆಗೆ ತಲುಪಿದಾಗ ಆಕೆ ಕೊನೆಯುಸಿರೆಳೆದಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಆತ್ಮಹತ್ಯೆಗೆ ಕಾರಣ‌ ತಿಳಿದುಬಂದಿಲ್ಲ.

Leave a Comment

Your email address will not be published. Required fields are marked *