ಸಮಗ್ರ ನ್ಯೂಸ್ ಡೆಸ್ಕ್: ಉಡುಪಿ ವಲಯ ಸಂಚಾರಿ ದಳದ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರನ್ನು ಬೀದರ್ ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದ್ದು, ಅಧಿಕೃತ ಆದೇಶ ಹೊರಬಿದ್ದಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಸಂದ್ಯಾ ಸಚಿನ್ ರ ವರ್ಗಾವಣೆಗೆ ಪ್ರಯತ್ನ ನಡೆಸಿದ್ದಾರೆ ಎಂದು ಸಂದ್ಯಾ ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಿಲ್ಲವ ಸಂಘಕ್ಕೂ ಸಂದ್ಯಾ ದೂರು ನೀಡಿದ್ದು, ವರ್ಗಾವಣೆ ತಡೆಗಾಗಿ ಪ್ರಯತ್ನಿಸಿದ್ದರು. ಮರಗಳ್ಳರ ರಕ್ಷಣೆಗಾಗಿ ಹರೀಶ್ ಪೂಂಜಾ ದ್ವೇಷ ರಾಜಕಾರಣ ಮಾಡಿ ವರ್ಗಾವಣೆಗೊಳಿಸಲು ಪತ್ರ ಬರೆದಿದ್ದಾರೆ ಎಂದು ಸಂದ್ಯಾ ಆರೋಪಿಸಿದ್ದರು.
ಅದಾಗ್ಯೂ ಸಂಧ್ಯಾರವರಿಗೆ ವರ್ಗಾವಣೆಗೊಳಿಸಿ ಅಧಿಕೃತ ಆದೇಶ ಹೊರಬಿದ್ದಿದ್ದು, ಬೀದರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಾರಾ? ಕಾದುನೋಡಬೇಕಿದೆ.