Ad Widget .

ಮಂಗಳೂರು: ಕಾಲೇಜು ಆವರಣದಲ್ಲಿ ತಲವಾರು ಝಳಪಿಸಿದ ಪ್ರಕರಣ, ಓರ್ವ ಅರೆಸ್ಟ್

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ನಗರದ ಬಲ್ಲಾಳ್‌ಬಾಗ್‌ನ ಖಾಸಗಿ ಕಾಲೇಜೊಂದರ ಬಳಿ ತಲವಾರು ಝಳಪಿಸಿದ ಯುವಕರ ತಂಡದ ಪೈಕಿ ಆರೋಪಿಯೋರ್ವನನ್ನು ಬರ್ಕೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಲ್ಲಾಳ್‌ ಬಾಗ್ ಸಮೀಪದ ವಿವೇಕನಗರ ನಿವಾಸಿ ವಿಶ್ವನಾಥ್ (22) ಬಂಧಿತ ಆರೋಪಿ.

Ad Widget . Ad Widget .

ಫೆ.1ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಯುವಕರ ಗುಂಪೊಂದು ಕಾಲೇಜು ಮುಂಭಾಗದ ರಸ್ತೆಯಲ್ಲಿ ಸ್ಕೂಟರಿನಲ್ಲಿ ಹೋಗುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳು ವಾಹನಗಳನ್ನು ನಿಧಾನವಾಗಿ ಚಲಾಯಿಸುವಂತೆ ಸೂಚಿಸಿದ್ದರು. ಅದೇ ವಿಷಯಕ್ಕೆ ಸಂಬಂಧಿಸಿ ಯುವಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ವಾಕ್ಸಮರ ನಡೆದಿದೆ. ಇದಾದ ಕೆಲವೇ ಹೊತ್ತಿನಲ್ಲಿ ಯುವಕರಿಬ್ಬರು ಸ್ಕೂಟರ್‌ನಲ್ಲಿ ತಲವಾರು ಹಿಡಿದುಕೊಂಡು ಕಾಲೇಜು ಆವರಣದ ಬಳಿ ಬಂದಿದ್ದು, ವಿದ್ಯಾರ್ಥಿಗಳು ಅದನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿಸಿದ್ದರು. ಬಳಿಕ ಬರ್ಕೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರಲ್ಲದೆ, ವಿಡಿಯೋದ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *