Ad Widget .

ಸಂಸದ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಸಂಸದ ಅಸಾದುದ್ದೀನ್ ಓವೈಸಿ ತೆರಳುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಉತ್ತರ ಪ್ರದೇಶದ ಮೀರತ್‌ನಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

Ad Widget . Ad Widget .

ಈ ಕುರಿತು ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದು, ‘ಮೀರತ್ ನಿಂದ ಹಿಂದಿರುಗುವಾಗ ತನ್ನ ಕಾರಿನ ಮೇಲೆ ಗುಂಡು ಹಾರಿಸಲಾಗಿದೆ’ ಎಂದು ಹೇಳಿದ್ದಾರೆ. ‘ಕೆಲವು ಸಮಯದ ಹಿಂದೆ, ನನ್ನ ಕಾರಿನ ಮೇಲೆ ಚಿಜಾರ್ಸಿ ಟೋಲ್ ಗೇಟ್ ಮೇಲೆ ಗುಂಡು ಹಾರಿಸಲಾಯಿತು. 4 ಸುತ್ತು ಗುಂಡು ಹಾರಿಸಲಾಗಿದೆ. ಅಲ್ಲಿ 3-4 ಜನರಿದ್ದರು, ಅವರೆಲ್ಲರೂ ಓಡಿಹೋಗಿ ಶಸ್ತ್ರಾಸ್ತ್ರಗಳನ್ನ ಅಲ್ಲಿಯೇ ಬಿಟ್ಟರು. ನನ್ನ ಕಾರು ಪಂಕ್ಚರ್ ಆಯಿತು. ಆದ್ರೆ, ನಾನು ಮತ್ತೊಂದು ಕಾರಿಗೆ ಹತ್ತಿ ಹೊರಟೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ’ ಎಂದಿದ್ದಾರೆ.

Leave a Comment

Your email address will not be published. Required fields are marked *