Ad Widget .

ಪೋರ್ನ್ ವೆಬ್ ಸೈಟ್ ನಲ್ಲಿ ತನ್ನದೇ ವಿಡಿಯೋ ಕಂಡು ಕಂಗಾಲಾದ ಯುವಕ

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಯುವಕನೊಬ್ಬ ಅಶ್ಲೀಲ ವೆಬ್‌ಸೈಟ್‌ ವೀಕ್ಷಿಸುತ್ತಿದ್ದಾಗ ತನ್ನದೇ ವೀಡಿಯೋ ಕಂಡು ದಂಗಾಗಿದ್ದಾನೆ. ಈ ಸಂಬಂಧ ಆಸ್ಟಿನ್‌ಟೌನ್‌ನ 25 ವರ್ಷದ ಯುವಕ ಕೇಂದ್ರ ವಿಭಾಗದ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

Ad Widget . Ad Widget .

ಖಾಸಗಿ ಕಂಪೆನಿಯ ಉದ್ಯೋಗಿಯಾಗಿರುವ ಈತ ತನ್ನ ಗೆಳತಿ ಜತೆ ನಗರದ ಹೊಟೇಲೊಂದರಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಆ ದೃಶ್ಯಗಳನ್ನು ಯಾರೋ ಸೆರೆ ಹಿಡಿದು, ವಿವಿಧ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದು ಜ.21ರಂದು ಯುವಕನ ಗಮನಕ್ಕೆ ಬಂದಿದೆ. ಬಳಿಕ ಬೇರೆ ವೆಬ್‌ಸೈಟ್‌ಗಳಲ್ಲೂ ಈ ವೀಡಿಯೋ ಇರುವುದು ಪತ್ತೆಯಾಗಿದೆ.

ವೀಡಿಯೋದಲ್ಲಿ ಮುಖಗಳು ಸರಿಯಾಗಿ ಕಾಣುತ್ತಿಲ್ಲ. ಆದರೆ, ದೇಹದಲ್ಲಿರುವ ಮಚ್ಚೆ ಹಾಗೂ ಇತರ ಗುರುತುಗಳು ತನಗೆ ಪೂರಕವಾಗಿವೆ. ಯಾರೋ ಉದ್ದೇಶ ಪೂರ್ವಕವಾಗಿಯೇ ಚಿತ್ರೀಕರಿಸಿ ಅಪ್‌ಲೋಡ್‌ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *