Ad Widget .

ಬೆಂಗಳೂರಿನಲ್ಲಿ ಐಪಿಎಲ್ ಹರಾಜು – 590 ಆಟಗಾರರಿಗೆ ಫೈನಲ್‌ ಪಟ್ಟಿಯಲ್ಲಿ ಸ್ಥಾನ

Ad Widget . Ad Widget .

ಸಮಗ್ರ ಸ್ಪೋರ್ಟ್ಸ್ ಡೆಸ್ಕ್: ಐಪಿಎಲ್ 15ನೇ ಆವೃತ್ತಿ ಹರಾಜಿಗೆ ಆಟಗಾರರ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು ಒಟ್ಟು 590 ಆಟಗಾರರು ಅಂತಿಮಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Ad Widget . Ad Widget .

ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 228 ಕ್ಯಾಪ್ಡ್ ಪ್ಲೇಯರ್ಸ್ ಮತ್ತು 355 ಅನ್‍ಕ್ಯಾಪ್ಡ್ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.

ತಾರಾ ಆಟಗಾರರಾದ ಶ್ರೇಯಸ್ ಅಯ್ಯರ್, ಶಿಖರ್ ಧವನ್, ಸುರೇಶ್ ರೈನಾ, ಡ್ವೇನ್ ಬ್ರಾವೋ, ಡುಪ್ಲೆಸಿಸ್, ಡೇವಿಡ್ ವಾರ್ನರ್, ಡಿಕಾಕ್, ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಹಲವು ಆಟಗಾರರು ತಾರಾ ಮೆರುಗಿನೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2 ಕೋಟಿ ರೂ. ಮೂಲಬೆಲೆಗೆ 48 ಆಟಗಾರರು, 1.5 ಕೋಟಿಗೆ 20, 1 ಕೋಟಿಗೆ 34 ಆಟಗಾರರು ಹರಾಜಿನಲ್ಲಿದ್ದಾರೆ. ಒಟ್ಟು 370 ಭಾರತೀಯ ಆಟಗಾರರು ಮತ್ತು 220 ಇತರ ದೇಶಗಳ ಆಟಗಾರರು ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಮೊದಲು ಐಪಿಎಲ್‍ ಹರಾಜಿಗೆ 1,214 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ಕೊಟ್ಟಿದ್ದರು. ಈ ಬಾರಿ 5 ಕ್ಯಾಟಗರಿಯಲ್ಲಿ ಆಟಗಾರರಿಗೆ ಬೆಲೆ ನಿಗದಿಪಡಿಸಲಾಗಿದೆ. 2 ಕೋಟಿ, 1.5 ಕೋಟಿ, 1 ಕೋಟಿ, 50 ಲಕ್ಷ ಮತ್ತು 20 ಲಕ್ಷ ರೂಪಾಯಿಯ ಮೂಲ ಬೆಲೆ ಕ್ಯಾಟಗರಿಯಲ್ಲಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಇದೀಗ ಫೈನಲ್‌ ಪಟ್ಟಿಯಲ್ಲಿ 590 ಆಟಗಾರರು ಸ್ಥಾನ ಪಡೆದಿದ್ದಾರೆ.

Leave a Comment

Your email address will not be published. Required fields are marked *