Ad Widget .

ಇಂದು ಕೇಂದ್ರ ಬಜೆಟ್| ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡ್ತಾರಾ ನಿರ್ಮಲಾ ಮೇಡಂ?

ಸಮಗ್ರ ನ್ಯೂಸ್ ಡೆಸ್ಕ್: ಕೊರೊನಾ ಮೂರನೇ ಅಲೆಯ ಮಧ್ಯೆ ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಕೊರೊನಾದಿಂದ ತಗ್ಗಿರುವ ಆರ್ಥಿಕತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಉತ್ತೇಜನ ನೀಡುತ್ತದೇಯೇ ಎಂಬ ಕುತೂಹಲ ಮೂಡಿದೆ.

Ad Widget . Ad Widget .

ನಿರ್ಮಲಾ ಸೀತಾರಾಮನ್ ಇಂದು 4ನೇ ಬಾರಿ ಬಜೆಟ್ ಮಂಡಿಸುತ್ತಿದ್ದು, ಎಲ್ಲರ ಚಿತ್ತ ಅವರತ್ತ ನೆಟ್ಟಿದೆ. ಕಳೆದ ವರ್ಷ ಮೊದಲ ಬಾರಿಗೆ ಕಾಗದ ರಹಿತವಾಗಿ ಬಜೆಟ್ ಮಂಡಿಸಿದ್ದರು. ಈ ಬಾರಿಯೂ ಅದೇ ಹೊಸ ಸಂಪ್ರದಾಯವನ್ನು ಮುಂದುವರಿಸಲಿದ್ದಾರೆ. ಇಂದು ಬೆಳಗ್ಗೆ 11ರಿಂದ ಸಂಸತ್ತಿನ ಅಧಿವೇಶನದಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಅಂದಾಜು 90 ರಿಂದ 120 ನಿಮಿಷಗಳ ಕಾಲ ಆಯವ್ಯಯ ಮಂಡಿಸಲಿದ್ದಾರೆ.

Ad Widget . Ad Widget .

ಮಹಾಮಾರಿ ವೈರಸ್‌ನಿಂದ ಸಂಕಷ್ಟದಲ್ಲಿರುವ ಕೈಗಾರಿಕೆ, ಬ್ಯಾಂಕಿಂಗ್, ಸೇವಾ ವಲಯ, ಕೃಷಿ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳು ಹಾಗೂ ಸಾಮಾನ್ಯ ಜನರು ಈ ಬಜೆಟ್ಗಾಗಿ ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲೂ ನಿರ್ಮಲಾ ಸೀತಾರಾಮನ್ ಯಾವ ರೀತಿ ಲೆಕ್ಕ ಮಾಡಿ, ಅನುದಾನ ಹಂಚಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

Leave a Comment

Your email address will not be published. Required fields are marked *