January 2022

ಚಾರ್ಮಾಡಿ: ಹೊತ್ತಿ ಉರಿದ ನೂರಾರು ಎಕರೆ ಅರಣ್ಯ

ಚಿಕ್ಕಮಗಳೂರು: ಗುಡ್ಡಕ್ಕೆ ಬೆಂಕಿ ತಗುಲಿ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾವುತಿಯಾಗಿರೋ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಮಲಯಮಾರುತ ಗುಡ್ಡದಲ್ಲಿ ನಡೆದಿದೆ. ಮಳೆಗಾಲದಲ್ಲಿ ಯಥೇಚ್ಛವಾಗಿ ಮಳೆ ಸುರಿದ ಕೊಟ್ಟಿಗೆಹಾರ ಭಾಗದಲ್ಲಿ ಈಗ ಅಷ್ಟೆ ಪ್ರಮಾಣದಲ್ಲಿ ಬಿಸಿಲು ಸುಡುತ್ತಿದೆ. ಬಿರುಬಿಸಿಲಿಗೆ ಗುಡ್ಡಗಳೆಲ್ಲಾ ಒಣಗಿ ನಿಂತಿದೆ. ಮಲಯ ಮಾರುತ ಗುಡ್ಡ ವ್ಯೂ ಪಾಯಿಂಟ್ ಆಗಿರುವುದರಿಂದ ಪ್ರವಾಸಿಗರು ಯಾರೋ ಸಿಗರೇಟ್ ಸೇದಿ ಎಸೆದಿರುವುದರಿಂದ ಬೆಂಕಿ ತಗುಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಗುಡ್ಡಕ್ಕೆ ಬೆಂಕಿ ತಗುಲಿದೆ ಎಂದು […]

ಚಾರ್ಮಾಡಿ: ಹೊತ್ತಿ ಉರಿದ ನೂರಾರು ಎಕರೆ ಅರಣ್ಯ Read More »

ಮಕ್ಕಳಿಲ್ಲದ ಈ ತಾಯಿಗೆ ಊರೆಲ್ಲಾ ಮಕ್ಕಳು| ವಿದ್ಯಾದಾನಕ್ಕೆ ನೆರವಾದ ಮಹಾಮಾತೆ|

ಕೊಪ್ಪಳ: ಈಕೆಗೆ ಮಕ್ಕಳು ಇಲ್ಲ. ಜೀವನಕ್ಕಾಗಿದ್ದ ಭೂಮಿಯನ್ನು ತನ್ನೂರಿನ ಶಾಲೆಗೆ ದಾನ ಮಾಡಿದ ಮಹಾತಾಯಿ ಇವರು. ಇದ್ದ ಜಮೀನು ದಾನವಾಗಿ ನೀಡಿದ ನಂತರ ಅದೇ ಶಾಲೆಯಲ್ಲಿ ಮುಖ್ಯ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಮಕ್ಕಳಿಗೆ ಅಡುಗೆ ಮಾಡುವ ಮೂಲಕ ಜೀವನದ ಸಂತೋಷವನ್ನು ಕಂಡು ಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದಲ್ಲಿ ಈ ತಾಯಿ ವಾಸವಾಗಿದ್ದಾರೆ. ಈ ಮಹಾತಾಯಿ ಹೆಸರು ಹುಚ್ಚಮ್ಮ ಚೌದ್ರಿ(75). ಗಂಡ ಬಸಪ್ಪ ಚೌದ್ರಿ ಜೊತೆ ಸಂಸಾರ‌ ನಡೆಸುತ್ತಿದ್ದ ಹುಚ್ಚಮ್ಮ ಗಂಡನ ನಿಧನದಿಂದ ಏಕಾಂಗಿಯಾದರು. ಊರ

ಮಕ್ಕಳಿಲ್ಲದ ಈ ತಾಯಿಗೆ ಊರೆಲ್ಲಾ ಮಕ್ಕಳು| ವಿದ್ಯಾದಾನಕ್ಕೆ ನೆರವಾದ ಮಹಾಮಾತೆ| Read More »

ಮಂಗಳೂರು ಯೂನಿವರ್ಸಿಟಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಫೆ.4ಕ್ಕೆ ಸಂದರ್ಶನ

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಲ್ಯಾಬ್, ಲೈಬ್ರರಿ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಫೆಬ್ರವರಿ 4ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಸಂಸ್ಥೆ: ಮಂಗಳೂರು ವಿಶ್ವವಿದ್ಯಾಲಯ ಹುದ್ದೆಯ ಹೆಸರು: ಲ್ಯಾಬ್, ಲೈಬ್ರರಿ ಅಸಿಸ್ಟೆಂಟ್ ಉದ್ಯೋಗದ ಸ್ಥಳ: ಮಂಗಳೂರು

ಮಂಗಳೂರು ಯೂನಿವರ್ಸಿಟಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಫೆ.4ಕ್ಕೆ ಸಂದರ್ಶನ Read More »

ಸಾಮೂಹಿಕ ದೃಷ್ಟಿಕೋನದ ಭಾರತೀಯತೆ ನಮ್ಮದಾಗಲಿ- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಮತ

ಹೊಸದಿಲ್ಲಿ: ಈ ಗಣರಾಜ್ಯೋತ್ಸವದಂದು ದೇಶವಾಸಿಗಳೆಲ್ಲರೂ “ಭಾರತೀಯತೆ’ಯನ್ನು ಆಚರಿಸುವಂತೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕರೆ ನೀಡಿದ್ದಾರೆ. 73ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ಮಾನವತೆಗೆ ಎದುರಾದ ಅತೀ ದೊಡ್ಡ ಸವಾಲನ್ನು ಅತ್ಯಂತ ದೃಢಚಿತ್ತದಿಂದ ದೇಶವು ಎದುರಿಸಿದೆ. ಭಾರತೀಯರಾದ ನಮ್ಮೆಲ್ಲರ ಸಾಮೂಹಿಕ ದೃಷ್ಟಿಕೋನದ ಪ್ರೇರಣೆಯಿಂದ ಮೈದಳೆದ ಸಂವಿಧಾನವನ್ನು ಅನುಷ್ಠಾನಗೊಳಿಸಿದ ದಿನ ಇದಾಗಿದೆ. ನಮ್ಮ ಪ್ರಜಾತಂತ್ರದ ವೈವಿಧ್ಯ ಮತ್ತು ಸ್ಪಂದನಶೀಲತೆ, ಜಗತ್ತಿನೆಲ್ಲೆಡೆ ಮನ್ನಣೆ ಪಡೆದಿದೆ. ಏಕತೆ ಮತ್ತು ಒಂದು ದೇಶ ಎಂಬ ಮನೋಭಾವನೆಯನ್ನು

ಸಾಮೂಹಿಕ ದೃಷ್ಟಿಕೋನದ ಭಾರತೀಯತೆ ನಮ್ಮದಾಗಲಿ- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಮತ Read More »

ಇನ್ನು ಮುಂದೆ ಮನೆಯಲ್ಲೇ ಕುಳಿತು ಡಿಎಲ್‌ ನವೀಕರಣ ಮಾಡಬಹುದು

ಬೆಂಗಳೂರು: ಚಾಲನಾ ಪರವಾನಗಿ(ಡಿಎಲ್‌), ಕಲಿಕಾ ಪರವಾನಗಿ(ಎಲ್‌ಎಲ್‌) ನವೀಕರಣಕ್ಕೆ ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ನವೀಕರಣ ಮಾಡಬಹುದು. ಪ್ರಾದೇಶಿ ಸಾರಿಗೆ ಇಲಾಖೆ(ಆರ್‌ಟಿಒ) ಕಚೇರಿಯಲ್ಲಿನ ಭ್ರಷ್ಟಾಚಾರ ತಡೆಯಲು ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಾರಥಿ ವೆಬ್ ಸೈಟ್ ಮೂಲಕ ವಿಳಾಸ ಬದಲಾವಣೆ, ಹೆಸರು ಬದಲಾವಣೆಯಂತಹ ಸೇವೆಗಳನ್ನು ಮನೆಯಲ್ಲೇ ಶುಲ್ಕ ಪಾವತಿಸಿ ಅನ್‌ಲೈನ್‌ನಲ್ಲೇ ಮಾಡಬಹುದು ಎಂದು ಆರ್‌ಇಟಿಒ ತಿಳಿಸಿದೆ. ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್, ಫಿಸಿಕಲ್ ಟೆಸ್ಟ್,

ಇನ್ನು ಮುಂದೆ ಮನೆಯಲ್ಲೇ ಕುಳಿತು ಡಿಎಲ್‌ ನವೀಕರಣ ಮಾಡಬಹುದು Read More »

ರಶ್ಮಿಕಾಳ ಹೊಸ ಅವತಾರಕ್ಕೆ ಟ್ರೋಲ್| ‘ನಿಂಗೆ ಚಳಿ‌ ಆಗಲ್ವಾ?’ ಎಂದ ನೆಟ್ಟಿಗರು

ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣಗೆ ಆನ್ಲೈನ್‌ನಲ್ಲಿ ಪಡ್ಡೆ ಹುಡುಗರ ಫಾಲೋಯಿಂಗ್ ದಿನೇ ದಿನೇ ಏರುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಹಾಕುವ ಫೋಟೋಗಳು ಭಾರೀ ವೈರಲ್ ಆಗಿ ಪಡ್ಡೆ ಹುಡುಗರ ಎದೆಗೆ ಬೆಂಕಿ ಇಡುತ್ತವೆ. 3-4 ವರ್ಷಗಳ ಹಿಂದೆ ಸ್ಟೇಟ್ ಕ್ರಶ್ ಆಗಿ ಈಗ ನ್ಯಾಷನಲ್ ಕ್ರಶ್ ಎಂಬ ಬಿರುದಾಂಕಿತಳಾದ ರಶ್ಮಿಕಾ ಇತ್ತೀಚೆಗೆ ಪುಷ್ಪ ಚಿತ್ರದ ಯಶಸ್ಸಿನಿಂದ ತನ್ನ ವೃತ್ತಿಯ ಗ್ರಾಫ್‌ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಮೊದಲೇ

ರಶ್ಮಿಕಾಳ ಹೊಸ ಅವತಾರಕ್ಕೆ ಟ್ರೋಲ್| ‘ನಿಂಗೆ ಚಳಿ‌ ಆಗಲ್ವಾ?’ ಎಂದ ನೆಟ್ಟಿಗರು Read More »

ರಾಜ್ಯದಲ್ಲಿ 750 ”ಗ್ರಾಮವನ್” ಕೇಂದ್ರಗಳಿಗೆ ಚಾಲನೆ| ನಾಗರಿಕ ಸೇವೆಗಳು ಇನ್ನು ಸರಳ

ಬೆಂಗಳೂರು: 73 ನೇ ಗಣರಾಜ್ಯೋತ್ಸವ ಅಂಗವಾಗಿ ಗ್ರಾಮ ಮಟ್ಟದಲ್ಲಿ ಎಲ್ಲ ನಾಗರಿಕ ಕೇಂದ್ರಿತ ಚಟುವಟಿಕೆಗಳ ಏಕಗವಾಕ್ಷಿ ನೆರವಿನ ಕೇಂದ್ರಗಳನ್ನು ಆರಂಭಿಸಲಾಗುವುದು. ರಾಜ್ಯದಲ್ಲಿ ಸರ್ಕಾರಿ ಸೇವೆಗಳಲ್ಲಿ ಮಹತ್ತರ ಕ್ರಾಂತಿ ಕೈಗೊಳ್ಳಲಾಗಿದ್ದು, ಮೊದಲ ಹಂತದಲ್ಲಿ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವೆಗೆ ಚಾಲನೆ ನೀಡಲಾಗುತ್ತದೆ. ಬೀದರ್, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು. ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮಾದರಿಯಲ್ಲಿ

ರಾಜ್ಯದಲ್ಲಿ 750 ”ಗ್ರಾಮವನ್” ಕೇಂದ್ರಗಳಿಗೆ ಚಾಲನೆ| ನಾಗರಿಕ ಸೇವೆಗಳು ಇನ್ನು ಸರಳ Read More »

ಅಪ್ಪನಾದ ಸಂಭ್ರಮದಲ್ಲಿ ಯುವರಾಜ್ ಸಿಂಗ್

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ಯುವಿ​ ಮಡದಿ, ನಟಿ ಹಜೇಲ್​ ಕೀಚ್​​ ಮಂಗಳವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. ‘ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ ಎಂದು ನಮ್ಮ ಎಲ್ಲ ಅಭಿಮಾನಿಗಳು, ಕುಟುಂಬದವರು ಮತ್ತು ಸ್ನೇಹಿತರಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ’ ಎಂದು ಯುವಿ ಪೋಸ್ಟ್​ ಮಾಡಿದ್ದಾರೆ.

ಅಪ್ಪನಾದ ಸಂಭ್ರಮದಲ್ಲಿ ಯುವರಾಜ್ ಸಿಂಗ್ Read More »

ರಾಜ್ಯದ ಐವರಿಗೆ ಪದ್ಮ ಪ್ರಶಸ್ತಿ; ಜ. ಬಿಪಿನ್ ರಾವತ್​ಗೆ ಮರಣೋತ್ತರ ಪದ್ಮ ವಿಭೂಷಣ

ನವದೆಹಲಿ: ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಅವರಿಗೆ ಈ ಗೌರವ ನೀಡಲಾಗುತ್ತದೆ. 2022ನೇ ಸಾಲಿನಲ್ಲಿ ಒಟ್ಟು 128 ಮಂದಿಯನ್ನು ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 10 ಮಂದಿಗೆ ಮರಣೋತ್ತರ ಪದ್ಮ ಪ್ರಶಸ್ತಿ ಈ ಬಾರಿ 4 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು

ರಾಜ್ಯದ ಐವರಿಗೆ ಪದ್ಮ ಪ್ರಶಸ್ತಿ; ಜ. ಬಿಪಿನ್ ರಾವತ್​ಗೆ ಮರಣೋತ್ತರ ಪದ್ಮ ವಿಭೂಷಣ Read More »

‘ವ್ಯಕ್ತಿ ಘನತೆ ಎತ್ತಿ ಹಿಡಿಯುತ್ತೇವೆ’: ತುಮಕೂರು ಮಹೀಂದ್ರಾ ಶೋರೂಂ ಘಟನೆ ಬಗ್ಗೆ ಆನಂದ್‌ ಮಹೀಂದ್ರಾ ಪ್ರತಿಕ್ರಿಯೆ

ಡಿಜಿಟಲ್ ಡೆಸ್ಕ್: ತುಮಕೂರಿನ ಮಹೀಂದ್ರಾ ಕಾರು ಶೋರೂಂನಲ್ಲಿ ಮಾರಾಟ ಸಿಬ್ಬಂದಿಯೊಬ್ಬ ರೈತರೊಬ್ಬರನ್ನು ಅವಮಾನಿಸಿದ ಘಟನೆಯ ಹಿನ್ನಲೆಯಲ್ಲಿ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮಂಗಳವಾರ ತಮ್ಮ ಮೊದಲ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಲ್ಲಿ ಅವರು ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಮಹತ್ವವನ್ನು ಒತ್ತಿಹೇಳಿದ್ದಾರೆ. “ಮಹೀಂದ್ರಾದ ಮುಖ್ಯ ಉದ್ದೇಶ, ನಮ್ಮ ಸಮುದಾಯಗಳು ಮತ್ತು ಎಲ್ಲಾ ಪಾಲುದಾರರ ಬೆಳವಣಿಗೆಗೆ ಅನುವು ಮಾಡಿಕೊಡುವುದಾಗಿದೆ. ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವುದು ಒಂದು ಪ್ರಮುಖ ಮೌಲ್ಯವಾಗಿದೆ. ಈ ತತ್ತ್ವದ ಅಸಂಗತತೆಯನ್ನು ಬಹಳ ತುರ್ತಾಗಿ ಪರಿಹರಿಸಲಾಗುವುದು” ಎಂದು ಮಹೀಂದ್ರಾ

‘ವ್ಯಕ್ತಿ ಘನತೆ ಎತ್ತಿ ಹಿಡಿಯುತ್ತೇವೆ’: ತುಮಕೂರು ಮಹೀಂದ್ರಾ ಶೋರೂಂ ಘಟನೆ ಬಗ್ಗೆ ಆನಂದ್‌ ಮಹೀಂದ್ರಾ ಪ್ರತಿಕ್ರಿಯೆ Read More »