January 2022

ಕೇಂದ್ರ ಮುಖ್ಯ ಆರ್ಥಿಕ ಸಲಹೆಗಾರರಾಗಿ ಡಾ| ವಿ.‌ಅನಂತ ನಾಗೇಶ್ವರನ್

ನವದೆಹಲಿ : ಕೇಂದ್ರ ಸರ್ಕಾರ ಡಾ. ವಿ. ಅನಂತ ನಾಗೇಶ್ವರನ್ ಅವರನ್ನ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿದೆ. ಈ ಕುರಿತು ಹಣಕಾಸು ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ವಿ ಅನಂತ ನಾಗೇಶ್ವರನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸುತ್ತದೆ’ ಎಂದು ತಿಳಿಸಿದೆ. ಈ ಮೊದಲು ಡಾ. ನಾಗೇಶ್ವರನ್ ಅವರು ಬರಹಗಾರ, ಲೇಖಕ, ಶಿಕ್ಷಕ ಮತ್ತು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಅವರು ಭಾರತ ಮತ್ತು ಸಿಂಗಾಪುರದಲ್ಲಿ ಹಲವಾರು ವ್ಯವಹಾರ ಶಾಲೆಗಳು ಮತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಕಲಿಸಿದ್ದಾರೆ ಮತ್ತು […]

ಕೇಂದ್ರ ಮುಖ್ಯ ಆರ್ಥಿಕ ಸಲಹೆಗಾರರಾಗಿ ಡಾ| ವಿ.‌ಅನಂತ ನಾಗೇಶ್ವರನ್ Read More »

ಬಾಗ್ದಾದ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ

ಬಾಗ್ದಾದ್ (ಇರಾಕ್): ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಶುಕ್ರವಾರ ರಾಕೆಟ್‌ಗಳ ದಾಳಿ ನಡೆಸಲಾಗಿದೆ ಎಂದು ಇರಾಕಿನ ಭದ್ರತಾ ಮೂಲವು ತಿಳಿಸಿದೆ. ರನ್‌ವೇ ಬಳಿ ಕನಿಷ್ಠ ಆರು ರಾಕೆಟ್‌ಗಳನ್ನ ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಸಮಯ 4:30ಕ್ಕೆ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಇದು ಪ್ರಬಲ ದಾಳಿಯಾಗಿತ್ತು. ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಿಮಾನಕ್ಕೆ ಹಾನಿಯಾಗಿದ್ದು, ದಾಳಿಯ ಹಿಂದಿನ ಉದ್ದೇಶ ಮತ್ತು‌ ಇದರ ಹಿಂದೆ ಯಾರಿದ್ದಾರೆ ಅನ್ನುವ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು‌ ತಿಳಿದುಬಂದಿದೆ.

ಬಾಗ್ದಾದ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ Read More »

ನಾಯಕನೆಂದರೆ ಹೀಗಿರಬೇಕು| ಬಡವರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿರುವ “ಚಂದ್ರಹಾಸ”!

ಸಮಗ್ರ ವಿಶೇಷ: ಜನಸಾಮಾನ್ಯರ ಬದುಕನ್ನು ನೆಮ್ಮದಿಯ ಹಳಿಗಳ ಮೇಲೆ ಸಾಗುವಂತೆ ಮಾಡುವ ಜವಾಬ್ದಾರಿ ಹೊತ್ತುಕೊಂಡ ಒಂದು ವ್ಯವಸ್ಥೆಗೆ ರಾಜಕೀಯ ಅಥವಾ ರಾಜಕಾರಣ ಎನ್ನುತ್ತಾರೆ. ಇಷ್ಟೊಂದು ಒಳ್ಳೆಯ ಅರ್ಥಗರ್ಭಿತ ವ್ಯವಸ್ಥೆಗೆ ಇತ್ತೀಚೆಗೆ ಯಾವೊಬ್ಬ ಪ್ರಜೆಯೂ ಗೌರವ ಕೊಡುತ್ತಿಲ್ಲ. ಕೆಲವು ಕಡೆಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಹಾಗೂ ಕೆಲವರ ಸರ್ವಾಧಿಕಾರದಿಂದ ಬೇಸತ್ತು ಹೋಗಿರುವ ಪ್ರಜೆಗಳಿಗೆ ರಾಜಕೀಯ ಅನ್ನುವುದು ಹೊಲಸಿಗಿಂತ ಕಡೆಯಾಗಿ ಹೋಗುತ್ತಿದೆ. ಇಂತಹ ವಾತಾವರಣಗಳ ನಡುವೆ ಜನರನ್ನು ಹೇಗೆ ತಲುಪಬೇಕು?, ಅವರ ಮನ ಪರಿವರ್ತನೆ ಮಾಡುವುದು ಹೇಗೆ? ಎಂಬ ಯೋಚನೆ ಬರುವುದು

ನಾಯಕನೆಂದರೆ ಹೀಗಿರಬೇಕು| ಬಡವರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿರುವ “ಚಂದ್ರಹಾಸ”! Read More »

67 ವರ್ಷಗಳ ಬಳಿಕ ಮತ್ತೆ ಟಾಟಾ ಕಂಪೆನಿ ಕೈ ಸೇರಿದ ಏರ್ ಇಂಡಿಯಾ!

ನವದೆಹಲಿ: 67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಪಡೆದುಕೊಂದಿದೆ. ಇಂದು ವಿಮಾನ ಹೊರಡುವ ಮುನ್ನ ವಿಶೇಷ ಪ್ರಕಟನೆಯನ್ನು ಪೈಲಟ್ ಹೊರಡಿಸುವ ಮೂಲಕ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಭಾರತ ಸರ್ಕಾರದ ಕೈಯಲ್ಲಿದ್ದ ಏರ್ ಇಂಡಿಯಾದ ನಿಯಂತ್ರಣವನ್ನು ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್ ಪಡೆದುಕೊಂಡಿತ್ತು. ಇಂದು ವಿಮಾನ ಹೊರಡುವ ಮುನ್ನ ಪ್ರಯಾಣಿಕರಲ್ಲಿ, ಆತ್ಮೀಯ ಅತಿಥಿಗಳೇ, ನಾನು ನಿಮ್ಮ ಕ್ಯಾಪ್ಟನ್…, ಎಲ್ಲರಿಗೂ ಇತಿಹಾಸ ಪ್ರಸಿದ್ಧ ವಿಮಾನಕ್ಕೆ ಆದರದ ಸ್ವಾಗತ. ಇದು ತುಂಬಾ ವಿಶೇಷವಾದ ಪ್ರಯಾಣ. ಇದೀಗ ಏರ್

67 ವರ್ಷಗಳ ಬಳಿಕ ಮತ್ತೆ ಟಾಟಾ ಕಂಪೆನಿ ಕೈ ಸೇರಿದ ಏರ್ ಇಂಡಿಯಾ! Read More »

ಯೂಟ್ಯೂಬ್ ನಲ್ಲಿ ಹೊಸ ಫೀಚರ್|ಶಾರ್ಟ್ಸ್ ವಿಡಿಯೋದಲ್ಲಿ ಟಿಕ್ ಟಾಕ್ ಗೆ ಅವಕಾಶ

ಸಮಗ್ರ ಡಿಜಿಟಲ್ ಡೆಸ್ಕ್: ಚೈನಾ ಮೂಲದ ಜನಪ್ರಿಯ ಅಪ್ಲಿಕೇಶನ್‌ ಟಿಕ್‌ ಟಾಕ್ ಭಾರತದಲ್ಲಿ ಬ್ಯಾನ್‌ ಆಗಿದ್ದೇ ತಡ ಟಿಕ್‌ ಟಾಕ್‌ಗೆ ಪ್ರತಿಯಾಗಿ ಹಲವು ಆ್ಯಪ್‌ಗಳನ್ನು ಪರಿಚಯಿಸುವ ಪ್ರಯತ್ನವನ್ನು ಅನೇಕ ಸಂಸ್ಥೆಗಳು ಇನ್ನೂ ಮಾಡುತ್ತಿವೆ. ಈಗಾಗಲೇ ಟಿಕ್‌ ಟಾಕ್‌ಗೆ ಪ್ರತಿರೂಪವಾಗಿ ಚಿಂಗಾರಿ, ಟ್ರೆಲ್, ಇನ್ಸ್ಟಾಗ್ರಾಂ ರೀಲ್ಸ್‌ ಆ್ಯಪ್‌ಗಳನ್ನ ಪರಿಚಯಿಸಲಾಗಿದೆ. ಯೂಟ್ಯೂಬ್‌ ಕೂಡ ಟಿಕ್‌ ಟಾಕ್‌ ಮಾದರಿಯ ಶಾರ್ಟ್‌ ವಿಡಿಯೋ ಸ್ಟ್ರೀಮಿಂಗ್‌ ಫೀಚರ್ಸ್‌ ಅನ್ನು 2020 ರಲ್ಲಿ ಪರಿಚಯಿಸಿತ್ತು. ಇದು ದೊಡ್ಡ ಮಟ್ಟದ ಯಶಸ್ಸು ಕೂಡ ಸಾಧಿಸಿದೆ. ಆದರೆ, ಕೆಲವು

ಯೂಟ್ಯೂಬ್ ನಲ್ಲಿ ಹೊಸ ಫೀಚರ್|ಶಾರ್ಟ್ಸ್ ವಿಡಿಯೋದಲ್ಲಿ ಟಿಕ್ ಟಾಕ್ ಗೆ ಅವಕಾಶ Read More »

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ| ಆರು ಮಂದಿ ಮೀನುಗಾರರ ರಕ್ಷಣೆ

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಶ್ರೀ ಮಹಾದೇವಿ 370 ಹೆಸರಿನ ದೋಣಿ ಮಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಎಲ್ಲಾ ಆರು ಮೀನುಗಾರರನ್ನು ರಕ್ಷಿಸಲಾಗಿದೆ. ಜ. 24 ರಂದು ಬೆಳಿಗ್ಗೆ 9 ಗಂಟೆಗೆ ದೋಣಿ ಮಲ್ಪೆ ಬಂದರಿನಿಂದ ಹೊರಟಿದ್ದು, ದಡದಿಂದ ಸ್ವಲ್ಪ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ದೋಣಿಯ ಕೆಳಭಾಗಕ್ಕೆ ಬಲವಾಗಿ ಏನೋ ಬಡಿದ ಪರಿಣಾಮವಾಗಿ ಮಗುಚಿ ಬಿದ್ದಿದೆ. ಸಮೀಪದಲ್ಲೇ ಇದ್ದ ರಾಮದೂತ್ ಬೋಟ್ ನ ಮೀನುಗಾರರು ಬೋಟ್ ನ ರಕ್ಷಣೆಗೆ ಧಾವಿಸಿದ್ದು, ದೋಣಿಯನ್ನು ದಡಕ್ಕೆ ಎಳೆಯಲು ಹರಸಾಹಸ ಪಟ್ಟರು. ಆದರೆ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ| ಆರು ಮಂದಿ ಮೀನುಗಾರರ ರಕ್ಷಣೆ Read More »

‘ಗಟ್ಟಿಮೇಳ’ ನಟ ರಕ್ಷಿತ್ ಮತ್ತು ಗ್ಯಾಂಗ್ ನಿಂದ ಕುಡಿದು ರಂಪಾಟ| ಪೊಲೀಸರಿಗೇ ಆವಾಜ್ ಹಾಕಿದ ಟೀಂ

ಸಮಗ್ರ ನ್ಯೂಸ್: ಕನ್ನಡ ಕಿರುತೆರೆ ಜನಪ್ರಿಯ ಗಟ್ಟಿಮೇಳ ಧಾರಾವಾಹಿ ನಟ ರಕ್ಷಿತ್ ಅಂಡ್ ಗ್ಯಾಂಗ್ ಕುಡಿದು ರಂಪಾಟ ಮಾಡಿದ್ದಾರೆ. ಮದ್ಯ ಸೇವಿಸಿ ರಕ್ಷಿತ್ ಅಂಡ್ ಗ್ಯಾಂಗ್ ಗಲಾಟೆ ಮಾಡುತ್ತಿದ್ದ ಕುರಿತು ಹೊಯ್ಸಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಹೋಟೆಲ್‌ನಲ್ಲಿ ಕುಡಿದು ಗಲಾಟೆ ಮಾಡಿದ ವಿಚಾರವಾಗಿ ‘ಗಟ್ಟಿಮೇಳ’ ಧಾರವಾಹಿ ತಂಡ‌ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೆಂಗೇರಿಯಲ್ಲಿರುವ ಜಿಂಜರ್ ಲೇಕ್‌ವ್ಯೂವ್ ಹೋಟೆಲ್​ನಲ್ಲಿ ಗಲಾಟೆ ನಡೆದಿದೆಯಂತೆ ತಡರಾತ್ರಿ 1.30 ಸುಮಾರಿಗೆ ಜಿಂಜರ್ ಲೇಕ್ ವ್ಯೂವ್ ಹೋಟೆಲ್‌ನಲ್ಲಿ ಗಲಾಟೆ

‘ಗಟ್ಟಿಮೇಳ’ ನಟ ರಕ್ಷಿತ್ ಮತ್ತು ಗ್ಯಾಂಗ್ ನಿಂದ ಕುಡಿದು ರಂಪಾಟ| ಪೊಲೀಸರಿಗೇ ಆವಾಜ್ ಹಾಕಿದ ಟೀಂ Read More »

ಗರ್ಭಿಣಿ ಹಸುವಿಗೆ ಢಿಕ್ಕಿ ಹೊಡೆದ ಸಾರಿಗೆ ಬಸ್| ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ ಗೋಮಾತೆ

ಕಾರವಾರ: ಗರ್ಭಿಣಿ ಹಸುವಿಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಮಟಾ ಬಸ್ ನಿಲ್ದಾಣದಲ್ಲಿ ನಡೆದಿದೆ. ಹುನಗುಂದದಿಂದ ಪುತ್ತೂರು ಮಾರ್ಗವಾಗಿ ಚಲಿಸುತ್ತಿದ್ದ ಬಸ್​ ತಡರಾತ್ರಿ ನಿಲ್ದಾಣದಲ್ಲಿ ನಿಂತ ಆಕಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಸು ಹಾಗೂ ಅದರ ಹೊಟ್ಟೆಯಲ್ಲಿದ್ದ ಕರು ಸ್ಥಳದಲ್ಲೇ ಮೃತಪಟ್ಟಿದೆ. ಕುಮಟಾದ ನಾಗಪ್ಪ ಬಲೀಂದ್ರ ಗೌಡ ಅವರಿಗೆ ಸೇರಿದ ಹಸು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪಶು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುಮಟಾ ನಗರ ಪೊಲೀಸ್

ಗರ್ಭಿಣಿ ಹಸುವಿಗೆ ಢಿಕ್ಕಿ ಹೊಡೆದ ಸಾರಿಗೆ ಬಸ್| ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ ಗೋಮಾತೆ Read More »

ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ ಎಸ್ ವೈ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ (30) ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಅವರು ಎಂ.ಎಸ್.‌ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೊಮ್ಮಗಳು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಬಿಎಸ್​​ ಯಡಿಯೂರಪ್ಪ ಮತ್ತು ಸಿಎಂ ಸೇರಿದಂತೆ

ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು Read More »

ಬೆಂಗಳೂರಿನ ಸುತ್ತಮುತ್ತ ನಕಲಿ ನಂದಿನಿ ತುಪ್ಪ ಜಾಲ

ಬೆಂಗಳೂರು: ಮೈಸೂರಿನ ಬಳಿಕ ಬೆಂಗಳೂರಿನಲ್ಲಿಯೂ ನಕಲಿ ತುಪ್ಪದ ಜಾಲ ಪತ್ತೆಯಾಗಿದ್ದು ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ ಮೈಸೂರಿನಲ್ಲಿ ಉತ್ಪಾದಿಸಲ್ಪಟ್ಟ ನಕಲಿ ತುಪ್ಪ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕೆಎಂಎಫ್ ಅಧಿಕಾರಿಗಳ ಪರಿಶೀಲನೆ ವೇಳೆ ನಕಲಿ ತುಪ್ಪದ ಜಾಲ ಬಯಲಾಗಿದೆ. ನಕಲಿ ತುಪ್ಪ ಪತ್ತೆಗಾಗಿ ಹಲವು ತಂಡಗಳನ್ನು ರಚನೆ ಮಾಡಿದ್ದ ಕೆಎಂಎಫ್ ಅಧಿಕಾರಿಗಳು ಬೆಂಗಳೂರಿನ ಹನುಮಂತನಗರ, ಜಯನಗರ, ರಾಜಾಜಿನಗರ ನೆಲಮಂಗಲ ಬಳಿಯ ಮಾಕಳಿ, ಹೊಸಕೋಟೆಯ ದೇವನಗೊಂದಿ ಹಾಗೂ ಇನ್ನಿತರ ಕಡೆಗಳಲ್ಲಿ ಸಗಟು ಮಾರಾಟದ ಅಂಗಡಿಗಳು ಮತ್ತು ಗೋದಾಮುಗಳಲ್ಲಿ

ಬೆಂಗಳೂರಿನ ಸುತ್ತಮುತ್ತ ನಕಲಿ ನಂದಿನಿ ತುಪ್ಪ ಜಾಲ Read More »