January 2022

ವಿಟ್ಲ: ಮೇಯಲು ಬಿಟ್ಟಿದ್ದ ದನದ ಕಾಲನ್ನು ಕತ್ತರಿಸಿದ ದುಷ್ಕರ್ಮಿಗಳು

ವಿಟ್ಲ: ಮೇಯಲು ಬಿಟ್ಟಿದ್ದ ಹಸುವಿನ ಕಾಲನ್ನು ಕತ್ತರಿಸಿ ವಿಕೃತಿ ಮೆರೆದ ಘಟನೆ ವಿಟ್ಲ ತಾಲೂಕಿನ ಅಡ್ಯನಡ್ಕ ಎಂಬಲ್ಲಿ ನಡೆದಿದೆ. ಅಡ್ಯನಡ್ಕ ಕೆದುಮೂಲೆ ನಿವಾಸಿ ಕೃಷಿಕರೊಬ್ಬರಿಗೆ ಸೇರಿದ ದನವನ್ನು ನೆಗಳಗುಳಿ ಎಂಬ ಪ್ರದೇಶದಲ್ಲಿ ಎಂದಿನಂತೆ ಮೇಯಲು ಬಿಟ್ಟಿದ್ದರು. ಆದ್ರೆ ಈ ವೇಳೆ ದುಷ್ಕರ್ಮಿಗಳು ದನದ ಕಾಲನ್ನು ಕ್ರೂರವಾಗಿ ಕತ್ತರಿಸುವ ಮೂಲಕ ರಾಕ್ಷಸಿ ಕೃತ್ಯ ಮೆರೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸದ್ಯ ದನಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮೂಕ ಪ್ರಾಣಿಯನ್ನು ಹಿಂಸಿಸುವ ರಾಕ್ಷಸರಿಗೆ […]

ವಿಟ್ಲ: ಮೇಯಲು ಬಿಟ್ಟಿದ್ದ ದನದ ಕಾಲನ್ನು ಕತ್ತರಿಸಿದ ದುಷ್ಕರ್ಮಿಗಳು Read More »

ಮಂಗಳೂರು: ಸಮುದ್ರಕ್ಕೆ ಹಾರಿದ ಪ್ರೇಯಸಿಯ ರಕ್ಷಿಸಹೋದ ಪ್ರಿಯಕರ ಸಾವು

ಸಮಗ್ರ ವರದಿ: ಸೋಮೇಶ್ವರ ಬೀಚ್ ನ ರುದ್ರಪಾದೆ ಎಂಬಲ್ಲಿ ಜೋಡಿಯೊಂದು ಮಾತನಾಡುತ್ತಿದ್ದಂತೆ ಪ್ರೇಯಸಿ ಸಮುದ್ರಕ್ಕೆ ಹಾರಿದ್ದು ಆಕೆಯನ್ನು ರಕ್ಷಿಸಲು ಹೋಗಿ ಪ್ರಿಯಕರ ಸಾವನ್ನಪ್ಪಿದ ಘಟನೆ ನಡೆದಿದೆ. ಉಳ್ಳಾಲ ರಾಣಿಪುರ ಉಳಿಯಾ ನಿವಾಸಿ ಲಾಯ್ಡ್ ಡಿಸೋಜಾ(28) ತನ್ನ ಪ್ರೇಯಸಿಯೊಂದಿಗೆ ಮಾತನಾಡುತ್ತಿದ್ದಂತೆ ಸಮುದ್ರಕ್ಕೆ ಹಾರಿದ್ದ ಪ್ರೇಯಸಿ ಕೋಟೆಕಾರು ಪಾನೀರು ನಿವಾಸಿ ಅಶ್ವಿತಾ ಫೆರಾವೋ (22) ರಕ್ಷಿಸಲು ಸಮುದ್ರಕ್ಕೆ ಹಾರಿದ್ದ ಸಂದರ್ಭದಲ್ಲಿ ತಲೆಗೆ ಬಂಡೆ ಕಲ್ಲು ತಗುಲಿ ಸಾವನ್ನಾಪ್ಪಿದ್ದಾನೆಂದು ತಿಳಿದು‌ ಬಂದಿದೆ. ಯುವತಿಯನ್ನು ರಕ್ಷಣೆ ಮಾಡಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಂತಾಜನಕ ಸ್ಥಿತಿ‌ಯಲ್ಲಿದ್ದಳೆಂದು

ಮಂಗಳೂರು: ಸಮುದ್ರಕ್ಕೆ ಹಾರಿದ ಪ್ರೇಯಸಿಯ ರಕ್ಷಿಸಹೋದ ಪ್ರಿಯಕರ ಸಾವು Read More »

ಕೆಂಪೇಗೌಡರಿಗೆ ಒಲಿದ ಆನಂದ್ ಮಹೀಂದ್ರಾ| ಕುಟುಂಬಕ್ಕೆ ಸ್ವಾಗತ ಕೋರಿದ ಆನಂದ್

ಸಮಗ್ರ ನ್ಯೂಸ್ ಡೆಸ್ಕ್: ತುಮಕೂರಿನ ಯುವ ರೈತ ಕೆಂಪೇಗೌಡನನ್ನು ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ಕೆಂಪೇಗೌಡರ ಬೇಡಿಕೆಯಂತೆ ಬೋಲೆರೋ ವಾಹನ ಅವರ ಕೈ ಸೇರಿದೆ. ಸಾಮಾಜಿಕ ತಾಲತಾಣದಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರ ಶುಕ್ರವಾರ ರಾತ್ರಿ ಕೆಂಪೇಗೌಡರನ್ನು ಕುಟುಂಬಕ್ಕೆ ಬರಮಾಡಿಕೊಂಡು ಟ್ವೀಟ್ ಮಾಡಿದ್ದಾರೆ. ತುಮಕೂರಿನ ಕಾರು ಶೋ ರೂಂ ಸೇಲ್ಸ್ ಏಜೆಂಟ್‌ಗಳು ರೈತ ಕೆಂಪೇಗೌಡನಿಗೆ ಮಾಡಿದ ಅವಮಾನ ಭಾರೀ ಸುದ್ದಿಯಾಗಿತ್ತು. ರಾಮನಪಾಳ್ಯ ಶೋ ರೂಂನಲ್ಲಿ ನಡೆದ ಘಟನೆ ಬಗ್ಗೆ ಜನವರಿ 25ರಂದು ಮಹೀಂದ್ರ

ಕೆಂಪೇಗೌಡರಿಗೆ ಒಲಿದ ಆನಂದ್ ಮಹೀಂದ್ರಾ| ಕುಟುಂಬಕ್ಕೆ ಸ್ವಾಗತ ಕೋರಿದ ಆನಂದ್ Read More »

ಮರಗಳ್ಳರ ರಕ್ಷಣೆಗೆ ನಿಂತರಾ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ? ಮಹಿಳಾ ಅರಣ್ಯಾಧಿಕಾರಿಗೆ ಏಕಾಏಕಿ ವರ್ಗಾವಣೆ ಯಾಕೆ? ಇದರ ಹಿಂದಿನ ಮಸಲತ್ತೇನು?

ಸಮಗ್ರ ವರದಿ: ಅರಣ್ಯ ಸಂಚಾರಿ ದಳ ಉಡುಪಿ ವಲಯ ಅರಣ್ಯಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾ ಸಚಿನ್ ಅವರನ್ನು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿಗೆ ಮನವಿ ಮಾಡಿ ಬೀದರ್ ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಿರುವುದು ರಾಜಕೀಯ ದ್ವೇಷ ಮತ್ತು ದಂಧೆಕೋರರ ಮಸಲತ್ತು ಎಂಬ ಮಾತುಗಳು ಕೇಳಿಬರುತ್ತಿದೆ. ಮರಗಳ್ಳರಿಗೆ ಬೆಳ್ತಂಗಡಿ ಶಾಸಕರೇ ರಕ್ಷಕರಾದರಾ? ಎಂಬ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಮರಗಳ್ಳರ ರಕ್ಷಣೆಗೆ ನಿಂತರಾ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ? ಮಹಿಳಾ ಅರಣ್ಯಾಧಿಕಾರಿಗೆ ಏಕಾಏಕಿ ವರ್ಗಾವಣೆ ಯಾಕೆ? ಇದರ ಹಿಂದಿನ ಮಸಲತ್ತೇನು? Read More »

‘ಪದೇ ಪದೇ ಹೇಳುವ ಅಭ್ಯಾಸ ನನಗಿಲ್ಲ, ಕಾಲಮಿತಿಯೊಳಗೆ ಕೆಲಸ ಮಾಡಿ’ – ಅಧಿಕಾರಿಗಳಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ತಾಕೀತು

ಸಮಗ್ರ ನ್ಯೂಸ್ ಡೆಸ್ಕ್: ‘ಒಂದು ಕೆಲಸವನ್ನು ಮಾಡುವಂತೆ ಅಥವಾ ಆದೇಶವನ್ನು ಪಾಲಿಸುವಂತೆ ಒಂದು ಬಾರಿ ಮಾತ್ರ ಹೇಳುವ ಸ್ವಭಾವ ನನ್ನದು. ಅದೇ ಕೆಲಸವನ್ನು ಮಾಡುವಂತೆ ಅಥವಾ ಆದೇಶವನ್ನು ಪಾಲಿಸುವಂತೆ ಎರಡನೇ ಬಾರಿ ನೆನಪಿಸುವ ಅಭ್ಯಾಸ ನನಗಿಲ್ಲ. ಹಾಗಾಗಿ ಅಧಿಕಾರಿ, ಸಿಬ್ಬಂದಿಗಳೆಲ್ಲರೂ ಕಾಲಮಿತಿಯೊಳಗೆ ಕೆಲಸ ಮಾಡಬೇಕು’ ಎಂದು ದ.ಕ.ಜಿಲ್ಲಾ ನೂತನ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದರು. ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ

‘ಪದೇ ಪದೇ ಹೇಳುವ ಅಭ್ಯಾಸ ನನಗಿಲ್ಲ, ಕಾಲಮಿತಿಯೊಳಗೆ ಕೆಲಸ ಮಾಡಿ’ – ಅಧಿಕಾರಿಗಳಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ತಾಕೀತು Read More »

ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ| ಇಬ್ಬರನ್ನು ಬಂಧಿಸಿದ ಪೊಲೀಸರು

ಸಮಗ್ರ ಕ್ರೈಂ ಬ್ಯೂರೋ: ಲಕ್ಷಾಂತರ ಮೌಲ್ಯದ ತಿಮಿಂಗಿಲ ವಾಂತಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ 2ನೇ ಹಂತದ ನಿವಾಸಿಗಳಾದ ಮೊಹಮ್ಮದ್‌ ರಿಯಾಜ್‌ ಅಹಮ್ಮದ್‌(58) ಮತ್ತು ಮೊಹಮ್ಮದ್‌ ಗೌಸ್‌ (51) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 3.6 ಕೆಜಿ ತೂಕದ ಅಂಬರ್‌ಗ್ರೀಸ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಜ.26ರಂದು ಬನಶಂಕರಿ 3ನೇ ಹಂತದ ಬನಗಿರಿ ನಗರದ ವರಸಿದ್ಧಿ ವಿನಾಯಕ ದೇವಾಲಯ ಸಮೀಪದ ವಾಟರ್‌ ಟ್ಯಾಂಕ್‌

ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ| ಇಬ್ಬರನ್ನು ಬಂಧಿಸಿದ ಪೊಲೀಸರು Read More »

ಮಳೆ ಬರುವ ಹಾಗಿದೆ…| ಹವಾಮಾನ ಇಲಾಖೆಯಿಂದ ಎಚ್ಚರಿಕೆ ಸಂದೇಶ|

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಚಳಿಯ ತೀವ್ರತೆ ಕೊಂಚ ಕಡಿಮೆಯಾಗಿದ್ದು ಮತ್ತೆ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿದೆ. ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರ್ನಾಟಕದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಲಘು ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಚಳಿಗಾಲದಲ್ಲಿ ಮಳೆಯಾಗುವುದು ಸಹಜ ಮತ್ತು ಹವಾಮಾನದಲ್ಲಿ ಬದಲಾವಣೆಯಾಗುತ್ತಿರುವುದರಿಂದ ಮುಂದಿನ ತಿಂಗಳ ಮಧ್ಯ ಭಾಗದವರೆಗೂ ಮಳೆ, ಚಳಿಯ ಕಣ್ಣಾಮುಚ್ಚಾಲೆ ಆಟ

ಮಳೆ ಬರುವ ಹಾಗಿದೆ…| ಹವಾಮಾನ ಇಲಾಖೆಯಿಂದ ಎಚ್ಚರಿಕೆ ಸಂದೇಶ| Read More »

ನಿರ್ದೇಶಕ ಕಟ್ಟೆ ರಾಮಚಂದ್ರ ಕೋವಿಡ್ ಗೆ ಬಲಿ

ಸಮಗ್ರ ನ್ಯೂಸ್ ಡೆಸ್ಕ್: ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಕಟ್ಟೆ ರಾಮಚಂದ್ರ(75) ಅವರು ಶುಕ್ರವಾರ ಕೋವಿಡ್‌ ಕಾರಣದಿಂದ ನಗರದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಮೂರು ದಿನಗಳ ಹಿಂದೆ ಅವರ ಪತ್ನಿಯೂ ನಿಧನರಾಗಿದ್ದು, ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿದ್ದ ರಾಮಚಂದ್ರ ಅವರು, ವೈಶಾಖದ ದಿನಗಳು, ಮಹಾಲಕ್ಷ್ಮೀ ಚಿತ್ರಗಳನ್ನು ನಿರ್ಮಿಸಿದ್ದರು. ಮನೆ ಮನೆ ಕಥೆ, ಅಲೆಗಳು ಮತ್ತು ಇತರ ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರ ನಿರ್ದೇಶನದ ‘ಅರಿವು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿತ್ತು. ‘ತನು ನಿನ್ನದು

ನಿರ್ದೇಶಕ ಕಟ್ಟೆ ರಾಮಚಂದ್ರ ಕೋವಿಡ್ ಗೆ ಬಲಿ Read More »

ಕುಟುಂಬವನ್ನೇ ಹತ್ಯೆಮಾಡಿದ 14ರ ಪೋರ| ಕಾರಣ ಕೇಳಿದ್ರೆ ಶಾಕ್ ಆಗ್ತೀರ| ಮಕ್ಕಳ ಕೈಗೆ ಮೊಬೈಲ್ ಕೊಡ್ತಿದೀರಾ? ಹಾಗಿದ್ರೆ ಜೋಕೆ…!

ಸಮಗ್ರ ನ್ಯೂಸ್ ಡೆಸ್ಕ್: ಆನ್‌ಲೈನ್ ಗೇಮ್ ‘ಪಬ್‌ಜಿ’ ಪ್ರಭಾವದಿಂದ 14 ವರ್ಷದ ಬಾಲಕನೊಬ್ಬ ಇಡೀ ಕುಟುಂಬದವರನ್ನು ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಇಲ್ಲಿನ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್(45), ಆಕೆಯ ಮಗ ತೈಮೂರ್(22) ಹಾಗೂ 17 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೃತದೇಹಗಳು ಕಳೆದ ವಾರ ಲಾಹೋರ್‌ನ ಕನ್ಹಾ ಪ್ರದೇಶದಲ್ಲಿ ಪತ್ತೆಯಾಗಿದ್ದವು. ನಹೀದ್ ಮುಬಾರಕ್ ಅವರ 14 ವರ್ಷದ ಪುತ್ರ ಮಾತ್ರ ಬದುಕಿದ್ದಾನೆ. ಆತನೇ ಕೊಲೆಗಾರ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ. ಪಬ್‌ಜಿ ವ್ಯಸನಿಯಾಗಿದ್ದ

ಕುಟುಂಬವನ್ನೇ ಹತ್ಯೆಮಾಡಿದ 14ರ ಪೋರ| ಕಾರಣ ಕೇಳಿದ್ರೆ ಶಾಕ್ ಆಗ್ತೀರ| ಮಕ್ಕಳ ಕೈಗೆ ಮೊಬೈಲ್ ಕೊಡ್ತಿದೀರಾ? ಹಾಗಿದ್ರೆ ಜೋಕೆ…! Read More »

ಕೋವಿಡ್ ಟೆಸ್ಟಿಂಗ್ ಗೆ ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ| ಕೊರೊನಾ ಮನೆ ಪರೀಕ್ಷೆಗೆ ಸಿದ್ಧತೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಾಕಷ್ಟು ಜನ ಆಸ್ಪತ್ರೆಗೆ ತೆರಳದೇ ಮನೆಯಲ್ಲಿಯೇ ಕೊರೊನಾ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮನೆಯಲ್ಲಿಯೇ ಕೊರೊನಾ ಮನೆ ಪರೀಕ್ಷೆಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಈ ಮಾಹಿತಿಯನ್ನ ಟ್ವಿಟ್‌ ಮೂಲಕ ಹಂಚಿಕೊಂಡಿದ್ದಾರೆ. ಕೋವಿಡ್ ಮನೆ ಪರೀಕ್ಷೆಗೆ ಹೊಸ ಮಾರ್ಗಸೂಚಿಗಳನ್ವಯ ಪರೀಕ್ಷೆಯು ಕೋವಿಡ್ ಪಾಸಿಟಿವ್ ತೋರಿಸಿದರೆ ಈ ಕೆಳಗಿನ ಲಿಂಕ್ ಮೂಲಕ ನವೀಕರಿಸಿಕೊಳ್ಳಬಹುದು. https://cvstatus.icmr.gov.in. ಒಂದು ವೇಳೆ ನೆಗೆಟಿವ್ ವರದಿ ಬಂದಿದ್ದು, ಕೋವಿಡ್

ಕೋವಿಡ್ ಟೆಸ್ಟಿಂಗ್ ಗೆ ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ| ಕೊರೊನಾ ಮನೆ ಪರೀಕ್ಷೆಗೆ ಸಿದ್ಧತೆ Read More »