ನ್ಯೂ ಇಯರ್ ಎಫೆಕ್ಟ್| ಸರ್ಕಾರಿ ಶಾಲೆಯಲ್ಲಿ ಕೊಠಡಿಯಲ್ಲಿ ”BP” ಕ್ವಾಟರ್ ಪ್ಯಾಕೆಟ್| ಮಕ್ಕಳಿಗೆ ಕೊಡುವ ಮೊಟ್ಟೆ ಕುಡುಕರ ಹೊಟ್ಟೆಗೆ..!
ರಾಯಚೂರು : ಹೊಸ ವರ್ಷದ ಹಿನ್ನೆಲೆ ಕಿಡಿಕೇಡಿಗಳು ಸರಕಾರಿ ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಘಟನೆಯೊಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ನ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಯ ಬೀಗ ಒಡೆದು ಕೊಠಡಿಯೊಳಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿದ್ದು ಮಾತ್ರವಲ್ಲದೇ ಬಿಸಿಯೂಟದ ಸಾಮಗ್ರಿಗಳನ್ನು ಬಳಕೆ ಮಾಡಿ ಮೊಟ್ಟೆ ಬೇಯಿಸಿಕೊಂಡು ಮಾಂಸಾಹಾರ ತಯಾರಿಸಿ ದುಷ್ಕೃತ್ಯ ಮೆರೆದಿದ್ದಾರೆ. ಪಾರ್ಟಿಗೆ ಬಳಸಲಾದ ವಸ್ತುಗಳು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಅಲ್ಲದೇ ಶಾಲೆಗೆ ಸೇರಿದ ದಾಖಲೆಗಳಿಗೂ ಹಾನಿ ಉಂಟು ಮಾಡಿದ್ದಾರೆ. ಬೆಳಗ್ಗೆ ಶಾಲೆಗೆ ಬರುತ್ತಿದ್ದಂತೆಯೇ […]