January 2022

ರಾಮನಗರದಲ್ಲಿ ಸಿಎಂ ಎದುರೇ ಗಂಡಸ್ತನ ಪ್ರದರ್ಶನಕ್ಕೆ ಮುಂದಾದ ಸಚಿವ ಡಾ. ಅಶ್ವತನಾರಾಯಣ ಮತ್ತು ಸಂಸದ ಡಿ.ಕೆ ಸುರೇಶ್

ರಾಮನಗರ: ರಾಮನಗರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಗವಹಿಸಿದ್ದ ವಿವಿಧ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಸಚಿವ, ಸಂಸದರ ಗಲಾಟೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಎದುರೇ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ‌ ಡಿ.ಕೆ.‌ ಸುರೇಶ್ ಹೊಡೆದಾಟಕ್ಕೆ ಮುಂದಾದ‌ ಪ್ರಸಂಗ ನಡೆಯಿತು. ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ ‘ಇವತ್ತು ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು‌ ಸೇರಿಸಿ ಘೋಷಣೆ ಕೂಗುತ್ತೀರಿ. ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು‌ ಗಂಡಸು […]

ರಾಮನಗರದಲ್ಲಿ ಸಿಎಂ ಎದುರೇ ಗಂಡಸ್ತನ ಪ್ರದರ್ಶನಕ್ಕೆ ಮುಂದಾದ ಸಚಿವ ಡಾ. ಅಶ್ವತನಾರಾಯಣ ಮತ್ತು ಸಂಸದ ಡಿ.ಕೆ ಸುರೇಶ್ Read More »

ಸುಳ್ಯ: ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ| ಆರೋಪಿ ವಿರುದ್ಧ ಸ್ವಯಂಪ್ರೇರಿತ ಎಫ್ ಐಆರ್ ದಾಖಲಿಸಿದ ಪೊಲೀಸರು|

ಸುಳ್ಯ: ಗೂನಡ್ಕ ಮಾರುತಿ ಶಾಲೆಯ ಆಡಳಿತ ಮಂಡಳಿ ಸದಸ್ಯರೊಬ್ಬರು 9 ವರ್ಷದ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಶಾಲಾ ಆಡಳಿತ ಮಂಡಳಿ ಸದಸ್ಯ ಕಿಶೋರ್ ಎಂಬವರು ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಈ ಘಟನೆ ಜಾಲತಾಣಗೆ ಸದ್ದು ಮಾಡಿತ್ತು. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಪರವಾಗಿ ಡಾ| ಡಿ.ವಿ. ಲೀಲಾಧರ್ ಹಾಗೂ ಸಂಪಾಜೆ ಗ್ರಾಮ ಪಂಚಾಯತ್

ಸುಳ್ಯ: ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ| ಆರೋಪಿ ವಿರುದ್ಧ ಸ್ವಯಂಪ್ರೇರಿತ ಎಫ್ ಐಆರ್ ದಾಖಲಿಸಿದ ಪೊಲೀಸರು| Read More »

ಉಗ್ರರ ಜೊತೆ ನಂಟು ಆರೋಪ| ಮಾಜಿ‌ ಶಾಸಕ ಬಿ.ಎಂ ಇದಿನಬ್ಬ ಪುತ್ರನ ಮನೆ ಮೇಲೆ ಐಎನ್ಎ ದಾಳಿ|

ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬ ಅವರ ಪುತ್ರನ ಮನೆ ಮೇಲೆ ಎನ್​ಐಎ ದಾಳಿ ನಡೆಸಿದ್ದು, ಪುತ್ರ ಬಿ.ಎಂ.ಭಾಷಾ ಹಾಗೂ ಸೊಸೆ ದೀಪ್ತಿ ಆಲಿಯಾಸ್ ಮರಿಯಂರನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯ ಮನೆ ಮೇಲೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಟೆಂಪೋ ಟ್ರಾವೆಲರ್ ವಾಹನದಲ್ಲಿ ದೀಪ್ತಿ ಆಲಿಯಾಸ್ ಮರಿಯಂರನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮಂಗಳೂರಿನ ವೆನ್​ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಿರುವ ಅಧಿಕಾರಿಗಳು, ನಂತರ ನೇರವಾಗಿ ದೆಹಲಿಗೆ ಕರೆದುಕೊಂಡು ಹೋಗಲಿದ್ದಾರೆ.

ಉಗ್ರರ ಜೊತೆ ನಂಟು ಆರೋಪ| ಮಾಜಿ‌ ಶಾಸಕ ಬಿ.ಎಂ ಇದಿನಬ್ಬ ಪುತ್ರನ ಮನೆ ಮೇಲೆ ಐಎನ್ಎ ದಾಳಿ| Read More »

ಸಿಎಂ ಸಮ್ಮುಖದಲ್ಲೇ ಭಾರೀ ಹೈಡ್ರಾಮಾ| ಗಂಡಸ್ತನಕ್ಕೆ ಸವಾಲೆಸೆದ ಸಂಸದ ಡಿ.ಕೆ ಸುರೇಶ್| ಕೈ ಕೈ ಮಿಲಾಯಿಸಲು ರೆಡಿಯಾದ ಜನಪ್ರತಿನಿಧಿಗಳು|

ರಾಮನಗರ: ಸಿಎಂ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲೇ ವೇದಿಕೆ ಮೇಲೆ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವೆ ಗಲಾಟೆ ನಡೆದು, ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ. ರಾಮನಗರಕ್ಕೆ ಭೇಟಿ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಕೆಲವರು ವೋಟ್ ಪಡೆದು ಸುಮ್ಮನೆ ಕುಳಿತುಕೊಳ್ಳುತ್ತಾರೆ. ನಮ್ಮ ಕಾಲದಲ್ಲೇ ಎಲ್ಲಾ ಕಾಮಗಾರಿಗಳಿಗೆ ಅಡಿಗಲ್ಲು, ನಮ್ಮ ಕಾಲದಲ್ಲೇ ಕಾರ್ಯಕ್ರಮಗಳಿಗೆ ಚಾಲನೆ

ಸಿಎಂ ಸಮ್ಮುಖದಲ್ಲೇ ಭಾರೀ ಹೈಡ್ರಾಮಾ| ಗಂಡಸ್ತನಕ್ಕೆ ಸವಾಲೆಸೆದ ಸಂಸದ ಡಿ.ಕೆ ಸುರೇಶ್| ಕೈ ಕೈ ಮಿಲಾಯಿಸಲು ರೆಡಿಯಾದ ಜನಪ್ರತಿನಿಧಿಗಳು| Read More »

ಆಡಿನ ಮರಿಯ ರಕ್ಷಣೆಗೆಂದು ತೆರಳಿದವನ ಪ್ರಾಣ ಕಸಿದ ರೈಲು| ಏಕೈಕ ಪುತ್ರನ ಕಳೆದುಕೊಂಡ ಕುಟುಂಬ ಅನಾಥ|

ಮಂಗಳೂರು: ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಯುವಕನೊಬ್ಬ ಕಳೆದುಕೊಂಡಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. 2021 ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿತ್ತು. ಅತ್ತ ಕಡೆಯಿಂದ ರೈಲಿನ ಶಬ್ದವಾಗುತ್ತಿತ್ತು. ಆದರೆ ಹಳಿಯಲ್ಲಿ ಮರಿಯ ಕಾಲು ಸಿಲುಕಿ ಒದ್ದಾಡುತ್ತಿತ್ತು. ಅಲ್ಲಿಂದಲೇ ಹೋಗುತ್ತಿದ್ದ 21 ವರ್ಷದ ಜೋಕಟ್ಟೆ ಯುವಕ ಚೇತನ್ ಇದನ್ನು ನೋಡಿದ್ದಾನೆ. ಅವನಿಗೆ ಆಡಿನ ಮರಿಯ ಮೇಲೆ ಕನಿಕರ ಹುಟ್ಟಿದೆ. ಅದನ್ನು ಕಾಪಾಡಲು ಹೋಗಿದ್ದಾನೆ. ಅದನ್ನು ರಕ್ಷಿಸುತ್ತಿರುವಾಗಲೇ ರೈಲು ಬಂದುಬಿಟ್ಟಿದೆ. ಚೇತನ್‌

ಆಡಿನ ಮರಿಯ ರಕ್ಷಣೆಗೆಂದು ತೆರಳಿದವನ ಪ್ರಾಣ ಕಸಿದ ರೈಲು| ಏಕೈಕ ಪುತ್ರನ ಕಳೆದುಕೊಂಡ ಕುಟುಂಬ ಅನಾಥ| Read More »

ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯ ಭಗವಂತನಿಗೆ ಮಾಡುವ ಅವಮಾನ – ಪೋಪ್ ಪ್ರಾನ್ಸಿಸ್

ವ್ಯಾಟಿಕನ್ ಸಿಟಿ – ಮಹಿಳೆಯರ ಅತ್ಯಾಚಾರ ಮಾಡುವುದು ಇದು ಈಶ್ವರನ ಅವಮಾನವಾಗಿದೆ. ತಾಯಿ ಜೀವನ ನೀಡುತ್ತಾಳೆ. ಮಹಿಳೆ ಜಗತ್ತನ್ನು ಒಟ್ಟುಗೂಡಿಸುತ್ತಾಳೆ. ಮಹಿಳೆಯರಿಗೆ ಯಾವುದೇ ರೀತಿ ತೊಂದರೆ ಕೊಡುವುದು ಇದು ನೇರ ಭಗವಂತನಿಗೆ ಅವಮಾನ ಮಾಡಿದಂತೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ ಫ್ರಾನ್ಸಿಸ್ ಇವರು ಕ್ರೈಸ್ತ ಹೊಸವರ್ಷದ ಶುಭಾಶಯ ನೀಡುವಾಗ ಹೇಳಿದರು. ಕಳೆದೆರಡು ವರ್ಷಗಳಿಂದ ಕೊರೊನಾದ ಕಾರಣದಿಂದ ಸಂಚಾರ ನಿರ್ಬಂಧದ ಸಮಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಮಾಣ ಹೆಚ್ಚಾಗಿದೆ, ಇದರಿಂದ ಅವರು ಮೇಲಿನ ಹೇಳಿಕೆ ನೀಡಿದರು. ಪೋಪ್

ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯ ಭಗವಂತನಿಗೆ ಮಾಡುವ ಅವಮಾನ – ಪೋಪ್ ಪ್ರಾನ್ಸಿಸ್ Read More »

ಭೀಕರ ಅಪಘಾತ, ಮೂವರು ಸ್ಥಳದಲ್ಲಿ ಸಾವು

ಮಂಡ್ಯ: ಖಾಸಗಿ ಬಸ್​ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಅಪಘಾತ ಕೆಂಪನಕೊಪ್ಪಲು ಗೇಟ್ ಬಳಿ ಸಂಭವಿಸಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ಮೂಲದ ಸುದೀಪ್ (35), ಶ್ರೀಜಾ (30) ಹಾಗೂ ಸಂಗಮ್ಮ (55) ಮೃತ ದುರ್ದೈವಿಗಳು. ಕಾರಲ್ಲಿದ್ದ ಯುವತಿ ಸ್ಥಿತಿ ಗಂಭೀರವಾಗಿದೆ. ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾಸಗಿ ಬಸ್​ ಚಾಲಕ ಸೇರಿದಂತೆ ನಾಲ್ವರಿಗೆ ಗಾಯವಾಗಿದೆ. ಗಾಯಾಳುಗಳು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಗಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಭೀಕರ ಅಪಘಾತ, ಮೂವರು ಸ್ಥಳದಲ್ಲಿ ಸಾವು Read More »

ಇಂದಿನಿಂದ ರಾಜ್ಯದ 15-18 ವರ್ಷದ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ವಿತರಣೆ| ಶಿಕ್ಷಣ ಇಲಾಖೆಯಿಂದ ಅಗತ್ಯ ಕ್ರಮ|

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸಿಕೊಂಡ ಮಕ್ಕಳಿಗೆ ಮರುದಿನ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಶಾಲೆಗಳಲ್ಲಿ ಮೊದಲ ದಿನ 50 ವಿದ್ಯಾರ್ಥಿಗಳಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತದೆ. ಮಕ್ಕಳಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಶಾಲೆಯ ಬಳಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಲಸಿಕೆ ಹಾಕಿಸಲು ವಾಕ್ -ಇನ್ ನೋಂದಣಿ ಪಡೆಯಬಹುದು ಇಲ್ಲವೇ ಈಗಾಗಲೇ ಪ್ರಾರಂಭಿಸಲಾಗಿರುವ ಕೋ-ವಿನ್ ಆಪ್ ನಲ್ಲಿ ತಮ್ಮ ಹೆಸರನ್ನು

ಇಂದಿನಿಂದ ರಾಜ್ಯದ 15-18 ವರ್ಷದ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ವಿತರಣೆ| ಶಿಕ್ಷಣ ಇಲಾಖೆಯಿಂದ ಅಗತ್ಯ ಕ್ರಮ| Read More »

ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ವಾಟ್ಸ್ ಆ್ಯಪ್ ಖಾತೆಗಳು ಬ್ಯಾನ್‌

ನವದೆಹಲಿ: 2021ರ ನವೆಂಬರ್‌ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳನ್ನು ವಾಟ್ಸಪ್‌ ಬ್ಯಾನ್‌ ಮಾಡಿದೆ. ಆದರೆ ಇದೇ ವೇಳೆ 602 ಕುಂದು ಕೊರತೆ ದೂರುಗಳನ್ನು ವಾಟ್ಸಪ್‌ ಸ್ವೀಕರಿಸಿದೆ. ಮಾಸಿಕ ದೂರು ಸ್ವೀಕಾರ ವರದಿಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಒಂದು ತಿಂಗಳಲ್ಲಿ ಭಾರತೀಯರ 17,59,000 ಖಾತೆಗಳನ್ನು ವಾಟ್ಸಪ್‌ ನಿಷೇಧಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಹಾಗೂ ದುರುಪಯೋಗ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಈ ಖಾತೆಗಳನ್ನು ಮರುಸ್ಥಾಪಿಸಿಕೊಳ್ಳುವ ಅವಕಾಶ ಬಳಕೆದಾರನಿಗೆ ಇಲ್ಲ. ಮುಂದೆ ಈ ಸಂಬಂಧ ಆಯ್ಕೆ

ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ವಾಟ್ಸ್ ಆ್ಯಪ್ ಖಾತೆಗಳು ಬ್ಯಾನ್‌ Read More »

ಜೆಸಿಬಿ ಚಾಲನಾ ತರಬೇತಿಗೆ ಅರ್ಜಿ‌ ಆಹ್ವಾನ| ಉಚಿತವಾಗಿ ಕಲಿಯಬಹುದು ಆಪರೇಟಿಂಗ್|

ಬೆಂಗಳೂರು: ಕೆನರಾ ಬ್ಯಾಂಕ್, ದೇಶಪಾಂಡೆ ಆರ್‌ಸೆಟಿ ದಾಂಡೇಲಿ ಹಾಗೂ ಜೆಸಿಬಿ ಇವರ ಜಂಟಿ ಸಹಯೋಗದಲ್ಲಿ ನಡೆಯುವ 30 ದಿನಗಳ ಉಚಿತ ಜೆಸಿಬಿ ಚಾಲನಾ (ಆಪರೇಟರ್) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವ 18 ರಿಂದ 45 ವಯೋಮಿತಿಯ ಆಸಕ್ತರು ತಮ್ಮ ಹೆಸರು, ಜನ್ಮ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಒಳಗೊಂಡ ಮಾಹಿತಿಯ 2022ರ ಜನವರಿ 10 ರೊಳಗೆ ಸಲ್ಲಿಸಬೇಕು. ಅರ್ಜಿಯನ್ನು ಕೆನರಾ ಬ್ಯಾಂಕ್

ಜೆಸಿಬಿ ಚಾಲನಾ ತರಬೇತಿಗೆ ಅರ್ಜಿ‌ ಆಹ್ವಾನ| ಉಚಿತವಾಗಿ ಕಲಿಯಬಹುದು ಆಪರೇಟಿಂಗ್| Read More »