ಪ್ರಧಾನಿಗೆ ಮಹಾ ಮೃತ್ಯುಂಜಯ ಹೋಮದ ಪ್ರಸಾದ ನೀಡಿದ ಶಾಸಕ ಪೂಂಜಾ
ಬೆಳ್ತಂಗಡಿ: ಪ್ರಧಾನಿ ಮೋದಿ ಅವರ ಆಯುಷ್ಯ ವೃದ್ಧಿ ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಗಾಗಿ ಜ. 17ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಸಲಾದ ಮಹಾಮೃತ್ಯುಂಜಯ ಹೋಮದ ಪ್ರಸಾದವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದರು. ಶಾಸಕರು ನವ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ಕಾರ್ಯಗಳ ಮಾಹಿತಿ ಇರುವ ಕಿರು ಪುಸ್ತಕವನ್ನೂ ಪ್ರಧಾನಿಗೆ ನೀಡಿದರು. ಹೋಮ ನಡೆಸಿದ ಸುರತ್ಕಲ್‌ನ ವೇ|ಮೂ| ನಾಗೇಂದ್ರ ಭಾರದ್ವಾಜ್ ಮತ್ತು ಋತ್ವಿಜರು ಈ ಸಂದರ್ಭ ಉಪಸ್ಥಿತರಿದ್ದರು.
ಪ್ರಧಾನಿಗೆ ಮಹಾ ಮೃತ್ಯುಂಜಯ ಹೋಮದ ಪ್ರಸಾದ ನೀಡಿದ ಶಾಸಕ ಪೂಂಜಾ Read More »