January 2022

ಡಯಾಲಿಸಿಸ್ ಚಿಕಿತ್ಸೆ| ವೆನ್ಲಾಕ್ ರಾಜ್ಯಕ್ಕೆ ಮೊದಲು|

ಮಂಗಳೂರು: ಪ್ರತಿದಿನ 80 ಮಂದಿ ರೋಗಿಗಳಿಗೆ ಡಯಾಲಿಸಿಸ್‌ ಸೌಲಭ್ಯ ಒದಗಿಸುವ ಮೂಲಕ ಮಂಗಳೂರಿನ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿನವೊಂದಕ್ಕೆ 60 ಮಂದಿಗೆ ಡಯಾಲಿಸಿಸ್‌ ಸೌಲಭ್ಯ ನೀಡುವ ಮೂಲಕ ಎರಡನೇ ಸ್ಥಾನದಲ್ಲಿದ್ದ ಸರ್ಕಾರಿ ಆಸ್ಪತ್ರೆಯು ಈಗ ಇನ್ನಷ್ಟು ರೋಗಿಗಳಿಗೆ ಸೇವೆ ಒದಗಿಸಲು ಸಿದ್ಧವಾಗಿದೆ. ಪ್ರತಿನಿತ್ಯ 68 ಮಂದಿ ರೋಗಿಗಳಿಗೆ ಡಯಾಲಿಸಿಸ್‌ ಸೌಲಭ್ಯ ನೀಡುತ್ತಿದ್ದ ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆಯು ಈವರೆಗೆ ಮೊದಲ ಸ್ಥಾನದಲ್ಲಿತ್ತು, ಅದು ಈಗ ಎರಡನೇ ಸ್ಥಾನದಲ್ಲಿದೆ. ಮೂತ್ರ ಪಿಂಡದ […]

ಡಯಾಲಿಸಿಸ್ ಚಿಕಿತ್ಸೆ| ವೆನ್ಲಾಕ್ ರಾಜ್ಯಕ್ಕೆ ಮೊದಲು| Read More »

ಇಂದು ಸಂಜೆ ಪ್ರಧಾನಿ ನೇತೃತ್ವದಲ್ಲಿ ಸಭೆ| ಒಮಿಕ್ರಾನ್, ಕೊರೊನಾ ಸಂಬಂಧಿಸಿದ ಚರ್ಚೆ ಸಾಧ್ಯತೆ|

ನವದೆಹಲಿ: ಇಂದು ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಿಗದಿಪಡಿಸಲಾಗಿದೆ. ದೇಶದಲ್ಲಿ ಕೊರೋನಾ ಹಾಗೂ ಓಮಿಕ್ರಾನ್ ಆರ್ಭಟ ಹೆಚ್ಚಾಗುತ್ತಿದ್ದು 3ನೇ ಅಲೆ ಆರಂಭವಾಗಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಕೊರೋನಾ, ಓಮಿಕ್ರಾನ್ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ಇಂದು ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕೇಂದ್ರ ಸಚಿವರು ಸೇರಿದಂತೆ ವಿವಿಧ ತಜ್ಞರು ಭಾಗವಹಿಸಲಿದ್ದಾರೆ. ಇಂದಿನ ಸಭೆಯಲ್ಲಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮಹತ್ವದ ವಿಚಾರಗಳ ಕುರಿತಂತೆ ಚರ್ಚೆ ಕೂಡ ನಡೆಯಲಿದೆ

ಇಂದು ಸಂಜೆ ಪ್ರಧಾನಿ ನೇತೃತ್ವದಲ್ಲಿ ಸಭೆ| ಒಮಿಕ್ರಾನ್, ಕೊರೊನಾ ಸಂಬಂಧಿಸಿದ ಚರ್ಚೆ ಸಾಧ್ಯತೆ| Read More »

ಒಮಿಕ್ರಾನ್ ಗಂಭೀರವಲ್ಲ, ಶಾಲೆಗಳ ಬಂದ್, ಲಾಕ್ ಡೌನ್ ಮಾಡಿ ಗಾಬರಿ ಹುಟ್ಟಿಸಬೇಡಿ| ಕೇಂದ್ರಕ್ಕೆ ತಜ್ಞರಿಂದ ಸಲಹೆ|

ನವದೆಹಲಿ: ದೇಶದಲ್ಲಿ ಕೊರೊನಾ ಕೇಸ್ ಗಳನ್ನು ನೋಡಿ ಶಾಲೆಗಳನ್ನು ಬಂದ್ ಮಾಡಬೇಡಿ. ನಿರ್ಬಂಧ ಹೇರಬೇಡಿ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಕೋವಿಡ್ ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥ, ಹೈದರಾಬಾದ್ ಐಐಟಿ ಪ್ರಾಧ್ಯಾಪಕ ಡಾ. ವಿದ್ಯಾಸಾಗರ್ ಸಲಹೆ ನೀಡಿದ್ದಾರೆ. ಶಾಲೆ, ಕಾಲೇಜು, ಕಚೇರಿಗಳನ್ನು ಬಂದ್ ಮಾಡುವುದು, ಲಾಕ್ಡೌನ್ ಮಾಡುವುದು ಗಾಬರಿಯ ಕ್ರಮಗಳಾಗಿವೆ. ಕೊರೋನಾ ಏರುಗತಿಯಲ್ಲಿ ಇದ್ದರೂ, ಆಸ್ಪತ್ರೆ ಸೇರುವವರ ಸಂಖ್ಯೆ ಬಹಳ ಕಡಿಮೆ ಇದೆ. ಎಲ್ಲಾ ಸೋಂಕಿತರನ್ನು ಕಾಯಿಲೆ ಪೀಡಿತರು ಎಂದು ಹೇಳಲಾಗುವುದಿಲ್ಲ. ಸಂಖ್ಯೆಯನ್ನು ನೋಡಿ ಗಾಬರಿ ಆಗಬಾರದು,

ಒಮಿಕ್ರಾನ್ ಗಂಭೀರವಲ್ಲ, ಶಾಲೆಗಳ ಬಂದ್, ಲಾಕ್ ಡೌನ್ ಮಾಡಿ ಗಾಬರಿ ಹುಟ್ಟಿಸಬೇಡಿ| ಕೇಂದ್ರಕ್ಕೆ ತಜ್ಞರಿಂದ ಸಲಹೆ| Read More »

ದ್ವಾದಶ ರಾಶಿಗಳ ವಾರಭವಿಷ್ಯ

ಮಕರ ಸಂಕ್ರಾಂತಿ ವಾರದಲ್ಲಿ ನಾವಿದ್ದೇವೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರಯಾಣ ಮಾಡಲಿದ್ದಾರೆ. ಹೀಗಾಗಿ ಮಕರ ಸಂಕ್ರಾಂತಿಯ ಶುಭದಿನದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ, ಯಾವ ರಾಶಿಯವರಿಗೆ ಅದೃಷ್ಟವಿದೆ, ಯಾವ ರಾಶಿಯವರಿಗೆ ಲಾಭವಿದೆ, ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಜನವರಿ 9ರಿಂದ ಜನವರಿ 15ರ ವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ… ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)ಹಿರಿಯರೊಂದಿಗೆ ಶಾಂತಿಯಿಂದ ವ್ಯವಹರಿಸುವುದು ಉತ್ತಮ. ಅನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ. ಸಾಮಾಜಿಕ ಕಾರ್ಯಕ್ರಮಗಳನ್ನು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಕರಾವಳಿಗರಿಗೆ ಇನ್ಮುಂದೆ ಕುಚ್ಲಕ್ಕಿ ಭಾಗ್ಯ| ಮುಂದಿನ ತಿಂಗಳಿನಿಂದಲೇ ಪಡಿತರ ವ್ಯವಸ್ಥೆಯಲ್ಲಿ ಜಾರಿಗೆ|

ಉಡುಪಿ: ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಕುಚ್ಚಲಕ್ಕಿಯನ್ನು ಪಡಿತರ ವ್ಯವಸ್ಥೆಯಡಿಯಲ್ಲಿ ವಿತರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದ್ದಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಪಡಿತರದ ಮೂಲಕ ಕುಚ್ಚಲ್ಲಕ್ಕಿಯನ್ನು ವಿತರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಬೇಡಿಕೆಯನ್ನು ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ನಾವು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆವು.ಮನವಿ ಪುರಸ್ಕರಿಸಿದ ಕೇಂದ್ರವು ಉಭಯ ಜಿಲ್ಲೆಗಳಿಗೆ ವಿತರಿಸಲು ಲಕ್ಷ ಕ್ವಿಂಟಾಲ್ ನಷ್ಡು ಅಕ್ಕಿ ನೀಡಲು ಒಪ್ಪಿದೆ. ಇದಕ್ಕಾಗಿ ಕೇಂದ್ರ ಸರಕಾರ ಮತ್ತು ಸಂಬಂಧಪಟ್ಟ ಮಂತ್ರಿಗಳಿಗೆ

ಕರಾವಳಿಗರಿಗೆ ಇನ್ಮುಂದೆ ಕುಚ್ಲಕ್ಕಿ ಭಾಗ್ಯ| ಮುಂದಿನ ತಿಂಗಳಿನಿಂದಲೇ ಪಡಿತರ ವ್ಯವಸ್ಥೆಯಲ್ಲಿ ಜಾರಿಗೆ| Read More »

ಕೊರಗಜ್ಜನ ಅವಮಾನಿಸಿದ ಮದುಮಗನಿಂದ ಕ್ಷಮೆಯಾಚನೆ| ದೈವನುಡಿಗೆ ಬೆದರಿದನೇ ಆರೋಪಿ|

ಮಂಗಳೂರು: ಸಾಲೆತ್ತೂರು ಎಂಬಲ್ಲಿ ಮದುಮಗ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ವಿಚಾರಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಮದುಮಗ ಉಮರುಲ್ ಭಾತೀಷ್ ವೀಡಿಯೋ ಮೂಲಕ ಕ್ಷಮೆ ಕೇಳಿದ್ದಾನೆ. ಕಳೆದ ಬುಧವಾರ ನಡೆದ ಮದುವೆ ದಿನ ರಾತ್ರಿ ಅಝೀಝ್ ಮನೆಗೆ ತನ್ನ ಐವತ್ತಕ್ಕೂ ಹೆಚ್ಚು ಸ್ನೇಹಿತರ ಜೊತೆ ಪ್ರಥಮ ರಾತ್ರಿಗೆ ಬಂದ ಮದುಮಗ ಕೊರಗಜ್ಜನ ವೇಷ ಭೂಷಣ ಹಾಕಿ ನಡುರಸ್ತೆಯಲ್ಲೇ ಕುಣಿದು ಕುಪ್ಪಳಿಸುವ ಮೂಲಕ ತುಳುನಾಡಿನ ಹಿಂದೂ ಸಮುದಾಯದ ಆರಾಧ್ಯ ದೈವ ಕೊರಗಜ್ಜನ ನಿಂದನೆ, ಅವಮಾನ ಎಸಗಿದ ವೀಡಿಯೋಗಳು ಭಾರೀ

ಕೊರಗಜ್ಜನ ಅವಮಾನಿಸಿದ ಮದುಮಗನಿಂದ ಕ್ಷಮೆಯಾಚನೆ| ದೈವನುಡಿಗೆ ಬೆದರಿದನೇ ಆರೋಪಿ| Read More »

ಕೊರೊನಾ ನಡುವೆಯೇ ಎಲೆಕ್ಷನ್ ಭರಾಟೆ| ಪಂಚರಾಜ್ಯ ಚುನಾವಣೆಗೆ ದಿನ ನಿಗದಿಪಡಿಸಿದ ಚುನಾವಣಾ ಆಯೋಗ|

ನವದೆಹಲಿ: ದೇಶದಲ್ಲಿ ಏರುತ್ತಿರುವ ಕೊರೊನಾ ಪ್ರಕರಣಗಳ ಆತಂಕದ ನಡುವೆಯೇ ಕೇಂದ್ರ ಚುನಾವಣಾ ಆಯೋಗ ಮಹತ್ವದ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಜ.8ರಂದು ಘೋಷಣೆ ಮಾಡಿದೆ. ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಉತ್ತರ ಪ್ರದೇಶ, ಉತ್ತರಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಯು ಒಟ್ಟು 690 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಮಾರ್ಚ್ 7ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಏಳೂ ಹಂತದಲ್ಲಿ

ಕೊರೊನಾ ನಡುವೆಯೇ ಎಲೆಕ್ಷನ್ ಭರಾಟೆ| ಪಂಚರಾಜ್ಯ ಚುನಾವಣೆಗೆ ದಿನ ನಿಗದಿಪಡಿಸಿದ ಚುನಾವಣಾ ಆಯೋಗ| Read More »

ಅಪಘಾತ: ಶಬರಿಮಲೆಯಿಂದ ಮರಳುತ್ತಿದ್ದ ಇಬ್ಬರು ಸಾವು

ಚಿಕ್ಕಬಳ್ಳಾಪುರ: ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಬಳಿ ನಡೆದಿದೆ. ಶಬರಿಮಲೆಗೆ ಹೋಗಿ ಅಯ್ಯಪ್ಪ ದರ್ಶನ ಪಡೆದು ವಾಪಸ್ ಬರುವ ವೇಳೆ ದುರ್ಘಟನೆ ನಡೆದಿದೆ. ಧರಣೀಶ್ (22) ನಿರಂಜನ್ ಸಿಂಗ್ (52) ಮೃತ ದುರ್ಧೈವಿಗಳು. ಮೃತಪಟ್ಟರೆಲ್ಲಾ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಪಂಚರ್ ಆಗಿದ್ದ ಕಾರನ್ನು ರಸ್ತೆ ಬದಿ ನಿಲ್ಲಿಸಿ ಸ್ಟೆಪ್ನಿ ಬದಲಾಯಿಸುತ್ತಿದ್ದ ವೇಳೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂರು

ಅಪಘಾತ: ಶಬರಿಮಲೆಯಿಂದ ಮರಳುತ್ತಿದ್ದ ಇಬ್ಬರು ಸಾವು Read More »

ನೈಟ್ ಕರ್ಪ್ಯೂ ಹಿನ್ನೆಲೆ| ಅಜಿಲಮೊಗರು ಉರೂಸ್ ಸಮಯದಲ್ಲಿ ಬದಲಾವಣೆ| ಹಗಲು ಹೊತ್ತಿನಲ್ಲೇ ನಡೆಯಲಿದೆ ಧಾರ್ಮಿಕ ಪ್ರಭಾಷಣ|

ಬಂಟ್ವಾಳ: ಜಿಲ್ಲೆಯ ಪ್ರಸಿದ್ಧ ಅಜಿಲಮೊಗರು ಮಾಲಿದ ಉರೂಸ್ ಈ ಬಾರಿ ನೈಟ್ ಕರ್ಫ್ಯೂ ಹಿನ್ನಲೆ ಉದಯಾಸ್ತಮಾನವಾಗಿ ಆಚರಿಸಲಾಗುವುದು ಎಂದು ಬಾಬಾ ಫಕ್ರುದ್ದೀನ್ ಜಮಾಅತ್ ಸಮಿತಿ ಹೇಳಿಕೆ ನೀಡಿದೆ. ಜನವರಿ 14 ರಿಂದ 18 ರ ವರೆಗೆ ಉದ್ದೇಶಿಸಿದ್ದ ಮಾಲಿದ ಉರೂಸ್ ನ ದಿನಾಂಕ ಮತ್ತು ಸಮಯವನ್ನು ಬದಲಾಯಿಸಿದ್ದು ಪೊಲೀಸರು ಅನುಮತಿ ನೀಡಿದರೆ ಯತಾ ಸ್ಥಿತಿಯಲ್ಲೇ ಉರೂಸ್ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ಜಮಾಅತ್ ಸದಸ್ಯ ಇಬ್ರಾಹಿಂ ರವರು ತಿಳಿಸಿದ್ದಾರೆ. ನೈಟ್ ಕರ್ಫ್ಯೂ ಹಿನ್ನಲೆ ದಿನಾಂಕ ಮತ್ತು ಸಮಯಗಳಲ್ಲಿ ಒಂದಷ್ಟು

ನೈಟ್ ಕರ್ಪ್ಯೂ ಹಿನ್ನೆಲೆ| ಅಜಿಲಮೊಗರು ಉರೂಸ್ ಸಮಯದಲ್ಲಿ ಬದಲಾವಣೆ| ಹಗಲು ಹೊತ್ತಿನಲ್ಲೇ ನಡೆಯಲಿದೆ ಧಾರ್ಮಿಕ ಪ್ರಭಾಷಣ| Read More »

ಏನೆಲ್ಲಾ ನಡೆಯುತ್ತೆ ಈ ಜಗತ್ತಿನಲ್ಲಿ!? ಮಗನ ಜೊತೆಗೇ ಸೆಕ್ಸ್ ನಡೆಸಿದ ತಾಯಿ| ಪ್ರೀತಿಯಲ್ಲಿ ಬಿದ್ದವರು ಮದ್ವೆಯಾಗಲು ರೆಡಿ

ಡಿಜಿಟಲ್ ಡೆಸ್ಕ್: ಪ್ರೀತಿ ಎಂದರೆ ಕುರುಡು ಅನ್ನುತ್ತಾರೆ. ಅದು ಹುಟ್ಟಲು ಕಾರಣಗಳು ಬೇಕಾಗುವುದಿಲ್ಲ, ಅದು ಯಾರ ಮೇಲೆ ಬೇಕಾದರು ಹುಟ್ಟಬಹುದು ಎಂಬಿತ್ಯಾದಿ ಮಾತುಗಳು ಚಾಲ್ತಿಯಲ್ಲಿವೆ. ಅದೇ ರೀತಿ, ಮಾವನೇ ಸೊಸೆಯನ್ನು ಮದುವೆಯಾಗಿದ್ದು, ಬೆಸ್ಟ್ ಫ್ರೆಂಡ್ ನ ಮಗನ ಮೇಲೆ ಪ್ರೀತಿಯಾಗಿ ಆತನನ್ನು ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ.ಆದರೆ, ಈಗ ಇಂಗ್ಲೆಂಡ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅದೇನೆಂದರೆ, ತಾಯಿಯೊಬ್ಬಳು ಮಗನ ಜೊತೆಯೇ ಲೈಂಗಿಕ ಸಂಪರ್ಕ ಬೆಳೆಸಿದ್ದು, ಈಗ ಆತನನ್ನೇ ಮದುವೆಯಾಗಲು ಹೊರಟಿದ್ದಾಳೆ. ಇದು ವಿಚಿತ್ರ ಎನಿಸಿದರೂ ಸತ್ಯ! 30

ಏನೆಲ್ಲಾ ನಡೆಯುತ್ತೆ ಈ ಜಗತ್ತಿನಲ್ಲಿ!? ಮಗನ ಜೊತೆಗೇ ಸೆಕ್ಸ್ ನಡೆಸಿದ ತಾಯಿ| ಪ್ರೀತಿಯಲ್ಲಿ ಬಿದ್ದವರು ಮದ್ವೆಯಾಗಲು ರೆಡಿ Read More »