ಸುರತ್ಕಲ್: ಆನ್ ಲೈನ್ ಸಾಲದ ಶೂಲಕ್ಕೆ ಬಿತ್ತು ಮತ್ತೊಂದು ಹೆಣ| ಡೆತ್ ನೋಟ್ ಬರೆದಿಟ್ಟು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಯುವಕ ಆತ್ಮಹತ್ಯೆ|
ಮಂಗಳೂರು : ಸಾಲದ ಸುಳಿಯಲ್ಲಿ ಸಿಲುಕಿ ನೊಂದ ಯುವಕನೊಬ್ಬ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ಯುವಕನನ್ನು 26 ವರ್ಷ ಪ್ರಾಯದ ಸುಶಾಂತ್ (ಜಗ್ಗು) ಎಂದು ಗುರುತಿಸಲಾಗಿದೆ. ಮೂಲ್ಕಿ ಸಮೀಪದ ಪಕ್ಷಿ ಕೆರೆ ನಿವಾಸಿಯಾಗಿರುವ ಸುಶಾಂತ್ ತಾನು ಕೆಲಸ ಮಾಡುತ್ತಿದ್ದ ಕುಳಾಯಿಯ ಸನ್’ರೈಸ್ ಕಾರ್ಪೋರೇಷನ್ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಸಾಲದ ಕಾರಣಕ್ಕಾಗಿಯೇ ಸಾವಿಗೆ ಶರಣಾದ ಶಂಕೆ ವ್ಯಕ್ತವಾಗಿದ್ದು, ಡೆತ್ ನೋಟ್ ನಲ್ಲಿ ಶರತ್ ಈ […]